
ವಾಷಿಂಗ್ಟನ್: ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧ ತೀವ್ರ ಸ್ವರೂಪ ಪಡೆದಿದ್ದು, ಇರಾನ್ ದೇಶದ ಮೂರು ಪರಮಾಣು ನೆಲೆಗಳ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿರುವುದನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹೇಳಿದ್ದಾರೆ.
ಶನಿವಾರ ರಾತ್ರಿ 10.00 ಗಂಟೆಗೆ ( ಭಾರತೀಯ ಕಾಲಮಾನ 7.30 AM) ದಿಢೀರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಹಲವು ವರ್ಷಗಳಿಂದ ಇರಾನ್ ನಡೆಸಿರುವ ದುಷ್ಕೃತ್ಯಗಳು ಇನ್ನು ಮುಂದೆ ನಡೆಯಲು ಸಾಧ್ಯವಿಲ್ಲ ಎಂದಿದ್ದಾರೆ.
ಇರಾನ್ ನ ಮೂರು ಪರಮಾಣು ನೆಲೆಗಳು ಹಾಗೂ ಯುರೇನಿಯಂ ಸಂಗ್ರಹಾಗಾರಗಳನ್ನು ನಾಶಪಡಿಸಲಾಗಿದೆ ಎಂದಿರುವ ಟ್ರಂಪ್, ಹಲವು ವರ್ಷಗಳ ಪರಿಶ್ರಮದಿಂದ ಇರಾನ್ ಈ ಪರಮಾಣು ನೆಲೆಗಳನ್ನು ಸ್ಥಾಪಿಸಿತ್ತು. ಜೊತೆಗೆ ಇಡೀ ವಿಶ್ವಕ್ಕೆ ಪರಮಾಣು ಬಾಂಬ್ ಗಳ ಬೆದರಿಕೆ ಹಾಕುತ್ತಿತ್ತು.
Trump is now bombing Iran. Here are multiple clips of Trump campaigning against endless wars, Middle East conflicts, and boasting that he will stop World War III. pic.twitter.com/dabDTfUqw4
— PatriotTakes 🇺🇸 (@patriottakes) June 22, 2025
ತನ್ನ ಪರಮಾಣು ಸಾಮರ್ಥ್ಯವನ್ನು ಮೀರಿ ಇರಾನ್ ಬೆಳೆದಿದ್ದು ಎಲ್ಲಾ ದೇಶಗಳ ಆತಂಕಕ್ಕೆ ಕಾರಣವಾಗಿತ್ತು. ಜೊತೆಗೆ ಪ್ರಾಯೋಜಿತ ಭಯೋತ್ಪಾದನೆಗೆ ಇದು ಕಾರಣವಾಗಿತ್ತು ಎಂದು ನುಡಿದಿದ್ದಾರೆ.
ಅಲ್ಲದೇ ಹಲವು ವರ್ಷಗಳಿಂದ ಇರಾನ್ ದೇಶವು ಅಮೆರಿಕ ಮತ್ತು ಇಸ್ರೇಲ್ ಗೆ ಬೆದರಿಕೆ ಹಾಕುತ್ತಲೇ ಇತ್ತು. ರಸ್ತೆಯಲ್ಲಿ ಬಾಂಬುಗಳನ್ನು ಸ್ಪೋಟಿಸುವ ಮೂಲಕ ಹಲವು ಅಮಾಯಕರ ಜೀವ ಬಲಿಪಡೆದಿತ್ತು.
ಇದರಿಂದಾಗಿ ಇರಾನ್ ನಲ್ಲಿ ಸಾವಿರಾರು ಮಂದಿ ಹಾಗೂ ಲಕ್ಷಾಂತರ ಮಂದಿ ಮಧ್ಯಪ್ರಾಚ್ಯದ ಜನರು ಸಾವನ್ನಪ್ಪಿದ್ದರು. ಇನ್ನು ಮುಂದೆ ಇಂಥಾ ಕೃತ್ಯಗಳು ಎಂದಿಗೂ ನಡೆಯುವುದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಇಸ್ರೇಲ್ ಅಧ್ಯಕ್ಷ ನೆತನ್ಯಾಹು ಅವರಿಗೆ ಪ್ರತ್ಯೇಕ ಧನ್ಯವಾದ ಹೇಳಬಯಸುತ್ತೇನೆ. ಅವರ ಬೆಂಬಲ ಹಾಗೂ ಅವರ ಮಿಲಿಟರಿಯ ದಕ್ಷತೆ ಕಾರ್ಯಾಚರಣೆಗಳು ಅದ್ಭುತ.
ಪರಮಾಣು ನೆಲೆಯ ಮೇಲೆ ಬಾಂಬುಗಳ ರಾಶಿಯನ್ನು ಸುರಿಯಲಾಗಿದ್ದು, ಪ್ರತಿಯೊಂದು ವಿಮಾನವೂ ಕ್ಷೇಮವಾಗಿ ಮತ್ತೆ ವಾಪಸ್ ಮರಳಿದೆ ಎಂದು ಡೊನಾಲ್ಡ್ ಟ್ರಂಪ್, ಅಮೆರಿಕದ ಸೇನೆ ಇದುವರೆಗೂ ವಿಶ್ವದಲ್ಲಿ ಯಾವುದೇ ಸೇನೆ ಮಾಡಿರದ ಸಾಹಸ ಮಾಡಿದೆ . ಜೊತೆಗೆ ಬೆಂಬಲ ನೀಡಿದ ಎಲ್ಲ ದೇಶಪ್ರೇಮಿ ಅಮೆರಿಕನ್ನರಿಗೆ ಅಭಿನಂದನೆಗಳು ಎಂದು ಹೇಳಿದ್ದಾರೆ.
 
				 
															 
						 
						 
						 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
						 
						 
						 
						