ಹೊಸೂರು (ತಮಿಳುನಾಡು): ಚೆನ್ನೈ ನಗರವನ್ನು ಹೊಸೂರು ಮಾರ್ಗವಾಗಿ ಬೆಂಗಳೂರಿಗೆ ಸಂಪರ್ಕಿಸುವ ತಮಿಳುನಾಡಿನ ಹೊಸೂರಿನ ರಾಷ್ಟ್ರೀಯ ಹೆದ್ದಾರಿ 44ರ ಫ್ಲೈಓವರ್ (NH 44 Flyover) ಶನಿವಾರ ಜರುಗಿದೆ.
ಇದರಿಂದಾಗಿ ಬೆಂಗಳೂರಿನ ಮಾರ್ಗದಲ್ಲಿ ಕಿಲೋ ಮೀಟರ್ ಗಟ್ಟಲೆ ವಾಹನ ದಟ್ಟಣೆ ಉಂಟಾದ ಘಟನೆ ಶನಿವಾರ ನಡೆದಿದೆ.
ಕೃಷ್ಣಗಿರಿ ಜಿಲ್ಲೆಯ ಹೊಸೂರು ನಗರದಲ್ಲಿ ಹಾದುಹೋಗುವ ಎನ್‌ಎಚ್-44ಕ್ಕೆ ಪ್ರೈ ಓವರ್ ನಿರ್ಮಿಸಲಾಗಿದೆ. ಸೇಲಂನಿಂದ ಬೆಂಗಳೂರಿಗೆ ಬರುವ ಕಡೆ ಫ್ಲೈಓವರ್ ಜರುಗಿದೆ.
IMPORTANT : Hosur Elevated Highway shifts laterally. Vehicular movement toward Bengaluru affected. Traffic diverted leveraging the service road. pic.twitter.com/gDjpreoEkT
— Karthik Reddy (@bykarthikreddy) June 22, 2025
ಇದರಿಂದಾಗಿ ಅಧಿಕಾರಿಗಳು ಈ ಮಾರ್ಗದಲ್ಲಿ ಹಾದುಹೋಗುವುದು ಅಪಾ ಯಕಾರಿ ಎಂದು ಘೋಷಿಸಿದ್ದಾರೆ.
ಪರಿಣಾಮ ಎಲ್ಲಾ ವಾಹನಗಳು ಸರ್ವೀಸ್ ರಸ್ತೆ ಮೂಲಕ ಸಂಚಾರ ನಡೆಸುತ್ತಿದ್ದು, 3 ಕಿಲೋ ಮೀಟರ್‌ಗೂ ಅಧಿಕ ದೂರ ವಾಹನ ದಟ್ಟಣೆ ಉಂಟಾಗಿದೆ.
ಫ್ಲೈಓವರ್ ಜರುಗುವಿಕೆಯಿಂದಾಗಿ ಅಲ್ಲಿನ ಜನರು ಕೆಲ ಕಾಲ ಆತಂಕ ಕ್ಕೊಳಗಾಗಿದ್ದಾರೆ. ಭಾನುವಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
#Hosur Busstand Flyover Damaged. Major Shift . Travelling towards Bangalore from Tamilnadu NH44 is distrupted. Take action. @nitin_gadkari @NHAI_Official pic.twitter.com/YbyiVY69GH
— Lakman (@Lakman2020) June 21, 2025
 
				 
															 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
					 
					 
						 
						 
						 
						