ದೊಡ್ಡಬಳ್ಳಾಪುರ: ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ಅಕ್ಟೋಬರ್-2024ರ ಪರೀಕ್ಷೆಯ ಎಂ.ಎ (ಇತಿಹಾಸ) ವಿಭಾಗದಲ್ಲಿ ದೊಡ್ಡಬಳ್ಳಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿನಿಯರಾದ ಎಸ್.ಎಸ್. ಸರಿತ ತೃತೀಯ ರ‍್ಯಾಂಕ್, ಬಿ.ರೋಜ ಹಾಗೂ ಬಿಎ ವಿಭಾಗದಲ್ಲಿ ಭವ್ಯ ಬಿ ಅವರು ಐದನೇ ರ‍್ಯಾಂಕ್ (Ranks) ಪಡೆದಿದ್ದಾರೆ.
ಈ ಹಿನ್ನೆಲೆಯಲ್ಲಿ ಹಳೆ ವಿದ್ಯಾರ್ಥಿಗಳ ಸಂಘದ(ರಿ ) ವತಿಯಿಂದ ಸನ್ಮಾನಿಸಿ, ಅಭಿನಂದನೆ ಸಲ್ಲಿಸಲಾಯಿತು. ಇದೇ ವೇಳೆ ಈ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲಕರವಾಗುವ ನಿಟ್ಟಿನಲ್ಲಿ ಸಹಾಯಧನದ ಚೆಕ್ ನೀಡಲಾಯಿತು.
ಈ ಸಂಧರ್ಭದಲ್ಲಿ ಪ್ರಾಂಶುಪಾಲರಾದ ಡಾ.ಸದಾಶಿವ ರಾಮಚಂದ್ರ ಗೌಡ, ಪ್ರಾದ್ಯಾಪಕರಾದ ಶ್ರೀನಿವಾಸ್, ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್.ಹೆಚ್.ವಿ., ಪ್ರಧಾನ ಕಾರ್ಯದರ್ಶಿ ವಸಂತ್, ಖಜಾಂಚಿ ಮಹೇಶ್, ನಿರ್ದೇಶಕರಾದ ಮಂಜುನಾಥ್, ರಾಜೇಂದ್ರ ಸ್ವಾಮಿ, ನಾಗರಾಜ್ ಇದ್ದರು.