ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆ (Rain) ರೈತರಲ್ಲಿ ಆತಂಕವನ್ನು ಉಂಟುಮಾಡಿದ್ದರೆ, ಹಲವೆಡೆ ಅವಾಂತರ ಸೃಷ್ಟಿಸಿದೆ.
ಶುಕ್ರವಾರ ದೊಡ್ಡಬಳ್ಳಾಪುರ ತಾಲೂಕಿನಲ್ಲಿ 29.16 ಮಿಮೀ ಮಳೆಯಾಗಿದೆ. ಇದರಲ್ಲಿ ಕಸಬಾ 24.9 ಮಿಮೀ, ದೊಡ್ಡಬೆಳವಂಗಲ 14.3 ಮಿಮೀ, ಮಧುರೆ 26.3 ಮಿಮೀ, ಸಾಸಲು 35.8 ಮಿಮೀ ಹಾಗೂ ತೂಬಗೆರೆ ಹೋಬಳಿ ವ್ಯಾಪ್ತಿಯಲ್ಲಿ 44.5ಮಿಮೀ ಮಳೆ ಸುರಿದಿದೆ.
ಇನ್ನೂ ಇಂದು ಸಂಜೆಯಿಂದ ತಾಲೂಕಿನ ಅನೇಕ ಕಡೆಗಳಲ್ಲಿ ಮತ್ತೆ ಮಳೆ ಆರ್ಭಟಿಸುತ್ತಿದ್ದು, ಸಂಜೆ ದೊಡ್ಡಬಳ್ಳಾಪುರ ಹಾಗೂ ಹೊಸಹಳ್ಳಿ ನಡುವಿನ ಗುಂಡಮಗೆರೆ ಕೆಇಬಿ ಸಮೀಪ ದೊಡ್ಡ ಮರವೊಂದು ರಸ್ತೆಗೆ ಅಡ್ಡವಾಗಿ ಮುರಿದು ಬಿದ್ದಿದೆ.
ಇದರಿಂದಾಗಿ ವಾಹನ ಸಂಚಾರ ಅಸ್ತವ್ಯಸ್ತವಾಗಿದ್ದು, ಮಳೆಯಲ್ಲಿ ವಾಹನ ಸವಾರರು ಪರದಾಡುವಂತಾಗಿದೆ.