ದೊಡ್ಡಬಳ್ಳಾಪುರ: ವಿಜ್ಞಾನ ಮತ್ತು ತಂತ್ರಜ್ಞಾನ, ವೈದ್ಯಕೀಯ ಕ್ಷೇತ್ರದಲ್ಲಿ ಭಾರತದ ಸಾಧನೆ ಅಸಾಧಾರಣವಾಗಿದೆ. ಆದರೆ ಉನ್ನತ ಶಿಕ್ಷಣ ಪಡೆದು ವಿದೇಶದಲ್ಲಿ ಉದ್ಯೋಗಕ್ಕೆ ತೆರಳುವುದಕ್ಕಿಂತ ನಮ್ಮ ದೇಶದಲ್ಲಿಯೇ ಸೇವೆ ಸಲ್ಲಿಸಿದರೆ ದೇಶದ ಅಭಿವೃದ್ದಿಗೆ ಪೂರಕವಾಗಲಿದೆ ಎಂದು ಉಪವಿಭಾಗಾಕಾರಿ ಅರುಳ್ ಕುಮಾರ್ ಹೇಳಿದರು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಗರದ ಭಗತ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ 75ನೇ ಭಾರತ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ದೇಶದ ಸ್ವಾತಂತ್ರಕ್ಕಾಗಿ ಹೋರಾಟ ನಡೆಸಿದ ಮಹಾತ್ಮರ ತ್ಯಾಗ, ಬಲಿದಾನಗಳನ್ನು ನಾವು ಸ್ಮರಿಸಬೇಕಿದೆ. ಇಂದಿನ ಯುವಜನತೆ ಉತ್ತಮ ಶಿಕ್ಷಣ ಹಾಗೂ ಉದ್ಯೊಗಕ್ಕೆ ಇತ್ತು ನೀಡುವುದರೊಂದಿಗೆ ದೇಶದ ಪ್ರಗತಿಗೆ ಶ್ರಮಿಸಬೇಕಿದೆ. ಕೊವಿಡ್ನ ಸಂದರ್ಭದಲ್ಲಿ ಆರೋಗ್ಯಕ್ಕೆ ಹೆಚ್ಚು ಪ್ರಾಮುಖ್ಯತೆ ಇದ್ದು,ವೈದ್ಯಕೀಯ ಕ್ಷೇತ್ರ ಬಲಗೊಳ್ಳಬೇಕಿದೆ. ದೇಶದ ಜನಸಂಖ್ಯೆಗೆ ಪೂರಕವಾಗಿ ಒಲಂಪಿಕ್ಸನಂತಹ ಅಂತರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಬೇಕಿದೆ ಎಂದರು.
ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ಸ್ವಾತಂತ್ರ್ಯೋತ್ಸವ ಈ ಬಾರಿಯ ವಿಶೇಷವಾಗಿದ್ದು, ಅಮೃತ ಮಹೋತ್ಸವದ ಆಚರಣೆ ನಡೆಯುತ್ತಿದೆ. ಸ್ವಾತಂತ್ರಕ್ಕಾಗಿ ಹೋರಾಟ ಮಾಡಿದ ದೇಶದ ಮಹನೀಯರೊಂದಿಗೆ ನಮ್ಮ ತಾಲೂಕಿನವರೇ ಆದ ಟಿ.ಸಿದ್ದಲಿಂಗಯ್ಯ ನಾ.ನಂಜುಂಡಯ್ಯ, ಮುಗುವಾಳಪ್ಪ ಮೊದಲಾದವರನ್ನು ಸ್ಮರಿಸಬೇಕಿದೆ. ಕರೊನಾದಿಂದ ನಮ್ಮ ದೇಶ ಹಾಗೂ ತಾಲೂಕನ್ನು ರಕ್ಷಸಿಕೊಳ್ಳಬೇಕಾದ ಹೊಣೆ ಪ್ರತಿಯೊಬ್ಬರ ಮೇಲಿದೆ ಕರೊನಾ ಸೋಂಕಿನ ನಿರ್ವಹಣೆ ತಾಲೂಕು ಆಡಳಿತ ಸಮರ್ಪಕವಾಗಿ ನಿರ್ವಹಿಸಿದೆ ಎಂದರು.
ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಗಣ್ಯರಾದ ಪ್ರಕಾಶ್.ಟಿ (ಕ್ರೀಡೆ), ಮೈಲಾರಪ್ಪ .ಆರ್( ಸಾಹಿತ್ಯ), ವಿಜಯೇಂದ್ರ ರಾವ್ (ಯೋಧ), ಮಂಜುನಾಥ್ ಯು.ಎಂ (ನೃತ್ಯ), , ಗಿರೀಶ್.ಟಿ(ಸಮಾಜ ಸೇವೆ), ರಾಮಮೂರ್ತಿ( ರಂಗಭೂಮಿ), ಟಿ.ಜಿ.ಮಂಜುನಾಥ್ (ಕನ್ನಡಪರ ಹೋರಾಟ), ಸೂರ್ಯನಾರಾಯಣ (ಕನ್ನಡ ಸೇವೆ), ಶ್ರೀನಾಥ್ ಎಲ್.ಎನ್(ಗಾಳಿಪಟ), ವರಪ್ರಸಾದ್(ಯೋಗ), ಕರೊನಾ ವಾರಿಯರ್ಸ್ ಗಳಾದ ನಗರಸಭೆ ಸಿಬ್ಬಂದಿ ಶ್ರೀನಿವಾಸ್, ಓಬಳಮ್ಮ ಅವರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ತಹಶೀಲ್ದಾರ್ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷ ಟಿ.ಎಸ್.ಶಿವರಾಜ್, ನಗರಸಭೆ ಪೌರಾಯುಕ್ತ ರಮೇಶ್ ಎಸ್.ಸುಣಗಾರ್, ತಾಲೂಕು ಪಂಚಾಯಿತಿ ಇಒ ಮುರುಡಯ್ಯ, ಕ್ಷೇತ್ರಶಿಕ್ಷಣಾಧಿಕಾರಿ ಆರ್.ವಿ.ಶುಭಮಂಗಳ,ಎಪಿಎಸಿ ಅಧ್ಯಕ್ಷ ವಿಶ್ವನಾಥ್, ಸರ್ಕಲ್ ಇನ್ಸ್ಪೆಕ್ಟರ್ ನವೀನ್ ಕುಮಾರ್, ಇನ್ಸ್ಪೆಕ್ಟರ್ ಸತೀಶ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.
ಪೊಲೀಸ್, ಎನ್ಸಿಸಿ, ಬ್ಯಾಂಡ್ಸೆಟ್ಗಳ ಪಂಥ ಸಂಚಲನ ನಡೆಯಿತು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..