ದೊಡ್ಡಬಳ್ಳಾಪುರ: ದೇವರಿಗೆ ಬಿಟ್ಟಿದ ಮೇಕೆ ತನ್ನ ಮೊಮ್ಮಗಳಿಗೆ ಗುದ್ದಿದ್ದನ್ನು ಪ್ರಶ್ನಿಸಿದ ವೃದ್ದನ ಮೇಲೆ ಹಲ್ಲೆ ಮಾಡಲಾಗಿ, ಹೃದಯ ನೋವು ಕಾಣಿಸಿಕೊಂಡು ವೃದ್ದ ಸಾವನ್ನಪ್ಪಿರುವ ಘಟನೆ ಸೋಮವಾರ ನಡೆದಿದೆ.
ನಗರದ ಹೊರವಲಯದ ಬಿಸುವನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಚಂದ್ರಪ್ಪ(65) ವರ್ಷ ಸಾವನ್ನಪ್ಪಿದ್ದಾರೆ.
ಇದೇ ಗ್ರಾಮದ ರವಿಕುಮಾರ್ ದೇವರಿಗೆ ಮೇಕೆಯೊಂದನ್ನು ಬಿಟ್ಟಿದ್ದರು, ಈ ಮೇಕೆ ಮೃತರಾದ ಚಂದ್ರಪ್ಪ ಮೊಮ್ಮಗಳಿಗೆ ಗುಮ್ಮುತ್ತಿತ್ತು ಎಂಬುದು ಘಟನೆಗೆ ಕಾರಣವಾಗಿದ್ದು, ಮೇಕೆಯನ್ನು ಕಟ್ಟಿ ಹಾಕುವಂತೆ ಚಂದ್ರಪ್ಪ ರವಿಕುಮಾರ್ ಗೆ ಹೇಳಿದ್ದರು ಎನ್ನಲಾಗಿದೆ.
ಇದೇ ವಿಚಾರಕ್ಕೆ ಚಂದ್ರಪ್ಪ ಮತ್ತು ರವಿಕುಮಾರ್ ನಡುವೆ ಜಗಳವಾಗಿ ಪರಿಸ್ಥಿತಿ ಕೈ ಮೀರಿದ್ದು, ರವಿಕುಮಾರ್ ಚಂದ್ರಪ್ಪ ಎದೆಗೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದ್ದು, ಎದೆ ನೋವಿನಿಂದ ಚಂದ್ರಪ್ಪ ಅಲ್ಲಿಯೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.
ಘಟನೆ ನಂತರ ಆರೋಪಿ ಪರಾರಿಯಾಗಿದ್ದು, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……