ದೊಡ್ಡಬಳ್ಳಾಪುರ: ಭಾರತೀಯ ಕ್ರಿಕೆಟ್ ಪ್ರೇಮಿಗಳು ಕಾಯುತ್ತಿದ್ದ ಸಮಯವು ಈಗ ಕೂಡಿಬಂದಿದ್ದು , ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ.
ಕರೊನಾದಿಂದಾಗಿ ಬಿಸಿಸಿಐ ಅವಕಾಶ ನೀಡಿರಲಿಲ್ಲ. ಆದರೆ ಈಗ ಚುಟುಕು ವಿಶ್ವಕಪ್ನ ಮಹಾಜಾತ್ರೆಯನ್ನು ವೀಕ್ಷಿಸಲು ಪ್ರೇಕ್ಷಕರಿಗೆ ಅವಕಾಶ ನೀಡಿರುವುದರಿಂದ ಕ್ರಿಕೆಟ್ ಅಭಿಮಾನಿಗಳ ಆನಂದಕ್ಕೆ ಪಾರವೇ ಇಲ್ಲದಂತಾಗಿದೆ.
ಬದ್ಧವೈರಿಗಳಾದ ಭಾರತ ಹಾಗೂ ಪಾಕಿಸ್ತಾನ, ಭಾನುವಾರ ಐಸಿಸಿ ಟಿ20 ವಿಶ್ವಕಪ್ನ ಸೂಪರ್-12 ಹಂತದ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಈ ವಿಶ್ವಕಪ್ನ ಬಹುನಿರೀಕ್ಷಿತ ಪಂದ್ಯ ಇದ್ದಾಗಿದ್ದು, ಉಭಯ ತಂಡಗಳು 2 ವರ್ಷಗಳ ಬಳಿಕ ಕ್ರಿಕೆಟ್ ಯುದ್ಧಭೂಮಿಯಲ್ಲಿ ಎದುರಾಗಲಿರುವ ಕಾರಣ ಪಂದ್ಯ ಭಾರೀ ಮಹತ್ವ ಪಡೆದುಕೊಂಡಿದೆ.
ಇಂದು ಸಂಜೆ 7.30ಕ್ಕೆ ಪಂದ್ಯ ಆರಂಭವಾಗಲಿದ್ದು, ಈ ಪಂದ್ಯದಲ್ಲಿ ಭಾರತ ಗೆಲ್ಲಲೆಂದು ದೊಡ್ಡಬಳ್ಳಾಪುರದಲ್ಲಿ ಅಭಿಮಾನಿಗಳು ಶುಭಕೋರುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಪೊಸ್ಟ್ ಹಾಕುತ್ತಿದ್ದಾರೆ.
ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….