ದೊಡ್ಡಬಳ್ಳಾಪುರ: ಸತತವಾಗಿ ಸುರಿಯುತ್ತಿರುವ ಮಳೆ ನಿರಂತರ ವಿದ್ಯುತ್ ಪುರೈಕೆ ಮಾಡಲು ಬೆಸ್ಕಾಂ ಸಿಬ್ಬಂದಿಗಳಿಗೆ ಸವಾಲಾಗಿ ಪರಿಣಮಿಸಿದೆ.
ತಾಲೂಕಿನ ಕೆಲ ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಲವೆಡೆ ವಿದ್ಯುತ್ ಸಂಪರ್ಕ ಖಂಡಿತವಾಗಿ, ಮರು ಸಂಪರ್ಕ ನೀಡಲು ಬೆಸ್ಕಾಂ ಸಿಬ್ಬಂದಿ ಮಳೆಯಲ್ಲಿಯೇ ಶ್ರಮಿಸುತ್ತಿದ್ದಾರೆ.
ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ಹುಸ್ಕೂರು ಕೋಡಿಯ ಸಮೀಪದಲ್ಲಿ ಅಳವಡಿಸಲಾಗಿದ್ದ ಟ್ರಾನ್ಸ್‌ಫಾರ್ಮರ್ ಸಂಪರ್ಕ ಕಡಿತಗೊಂಡ ಪರಿಣಾಮ, ಈ ವ್ಯಾಪ್ತಿಯಲ್ಲಿನ ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು.
ಈ ಹಿನ್ನೆಲೆಯಲ್ಲಿ ಲೈನ್ ಮೆನ್ ಅವಿನಾಶ್, ಗ್ಯಾಂಗ್ ಮೆನ್ ಗಳಾದ ನವೀನ್ ಮತ್ತು ಅಜಯ್ ಮಳೆಯಿಂದಾಗಿ ನೀರು ತುಂಬಿದ್ದ ಹಳ್ಳದಲ್ಲಿ ಇಳಿದು ಸಂಪರ್ಕ ಮರು ಜೋಡಣೆಗೊಳಿಸಿರುವುದು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಕಾರಣವಾಗಿದೆ.
ಸತತ ಮಳೆಯ ನಡುವೆಯು ವಿದ್ಯುತ್ ಸಂಪರ್ಕ ನೀಡಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು, ನೀರಲ್ಲಿಳಿದು ಮರು ಸಂಪರ್ಕ ನೀಡಿದ ಸಿಬ್ಬಂದಿಗಳನ್ನು ಬೆಸ್ಕಾಂ ಎಇಇ ಇನಾಯತ್ ಉಲ್ಲಾಖಾನ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….