ಮುಂಬೈ: ರತನ್ ಟಾಟಾ ನಿಧನಕ್ಕೆ ಗೆಳತಿ ಬಾಲಿವುಡ್ ಹಿರಿಯ ನಟಿ ಸಿಮಿ ಗರೆವಾಲ್ ಕಣ್ಣೀರಿನ ವಿದಾಯ ಹೇಳಿದ್ದಾರೆ.
‘ಪ್ರೀತಿಯ ರತನ್, ನೀವು ನಿರ್ಗಮಿ ಸಿದ್ದೀರಿ ಎಂದು ಎಲ್ಲರೂ ಹೇಳುತ್ತಿದ್ದಾರೆ. ಆದರೆ, ನೀವು ನಮ್ಮ ಜತೆ ಇಲ್ಲ ಎಂಬ ಸತ್ಯವನ್ನು ಅರಗಿಸಿಕೊಳ್ಳುವುದೇ ಬಹಳ ಕಷ್ಟವಾಗುತ್ತಿದೆ’ ಎಂದು ಸಿಮಿ ಗರೇವಾಲ್ ‘ಇನ್‌ಸ್ಟಾಗ್ರಾಂ’ನಲ್ಲಿ ಬರೆದಿದ್ದಾರೆ. ಬಳಿಕ, ‘ಆಯಿತು, ಹೋಗಿ ಬಾ ನನ್ನ ಗೆಳೆಯ’ ಎಂದು ಕಣ್ಣೀರಿನ ವಿದಾಯ ಹೇಳಿದ್ದಾರೆ.
2011ರಲ್ಲಿ ಸಂದರ್ಶನವೊಂದರಲ್ಲಿ ಖ್ಯಾತ ಹಿಂದಿ ಚಿತ್ರನಟಿ ಸಿಮಿ ಗರೆವಾಲ್, ರತನ್ ಟಾಟಾ ಅವರೊಂದಿಗಿನ ತಮ್ಮ ಸಂಬಂಧದ ಬಗ್ಗೆ ಮಾತನಾಡಿದ್ದರು.

ರತನ್ ರದ್ದು ಪರಿಪೂರ್ಣ ವ್ಯಕ್ತಿತ್ವ, ನೋಡಿದವರಿಗೆ ಬಲು ಗಂಭೀರವಾಗಿ ಕಾಣುತ್ತಿದ್ದರೂ ಅವರೊಳಗೆ ಹಾಸ್ಯ ಪ್ರಜ್ಞೆ ಕೂಡ ಇತ್ತು. ಅದು ತಕ್ಕಮಟ್ಟಿಗೆ ಚೆನ್ನಾಗಿಯೇ ಇತ್ತು. ರನತ್ ಬಲು ಸಭ್ಯ. ಆದರೆ, ಎಂದೂ ಶ್ರೀಮಂತಿಕೆಯನ್ನು ತೋರ್ಪಡಿ ಕೊಳ್ಳುತ್ತಿ ರಲಿಲ್ಲ ಎಂದು ಮನಬಿಚ್ಚಿ ಪ್ರಶಂಸಿಸಿದ್ದರು.
ಸಿಮಿ-ರತನ್ ವರ್ಷಗಳ ಕಾಲ ಒಳ್ಳೆಯ ಸ್ನೇಹಿತರಾಗಿದ್ದರು. ಅಷ್ಟೊಂದು ಆತ್ಮೀಯ ವಾಗಿದ್ದರೂ ರತನ್ ಮತ್ತು ಸಿಮಿ ಗರೆವಾಲ್ ಪ್ರೀತಿ ಹೆಚ್ಚು ದಿನ ಉಳಿಯಲಿಲ್ಲ. ಸಿಮಿ ಬೇರೊಬ್ಬರನ್ನು ಮದುವೆಯಾದರು.
ಸ್ವತಃ ರತನ್ ಟಾಟಾ ಅವರೇ ಸಂದರ್ಶ ನವೊಂದರಲ್ಲಿ, ತಾವು ನಾಲ್ಕು ಬಾರಿ ಪ್ರೀತಿ ಯಲ್ಲಿ ಬಿದ್ದಿದ್ದ ಬಗ್ಗೆ ಮಾತನಾಡಿದ್ದರು. ಆದರೆ, ಅವು ಯಾವುವೂ ಮದುವೆಯ ಹಂತ ತಲುಪಲಿಲ್ಲ ಎಂಬುದನ್ನು ಒಪ್ಪಿಕೊಂಡಿದ್ದರು.
1960ರ ದಶಕದಲ್ಲಿ ಅಮೆರಿಕದಲ್ಲಿ ಕೆಲಸ ಮಾಡುವಾಗ ರತನ್ ಟಾಟಾ ಬೇರೊಬ್ಬ ಹುಡುಗಿಯನ್ನು ಇಷ್ಟಪಟ್ಟಿದ್ದರು. 1962ರ ಭಾರತ-ಚೀನಾ ಯುದ್ಧ ಸಮಯದಲ್ಲಿ ಅದು ಕೊನೆಗೊಂಡಿತ್ತು. ಏಕೆಂದರೆ ಯುದ್ಧದ ಸಮಯದಲ್ಲಿ ಆಕೆಗೆ ಅಮೆರಿಕವನ್ನು ಬಿಟ್ಟು ಭಾರತಕ್ಕೆ ಹೋಗಲು ಪೋಷಕರು ಅನುಮತಿ ನೀಡಿರಲಿಲ್ಲ ಎಂದು ಬಹಿರಂಗಪಡಿಸಿದ್ದರು.