ಬೆಂಗಳೂರು: ವಾಯುಭಾರ ಕುಸಿತದ ಕಾರಣ ಸತತವಾಗಿ ಸುರಿಯುತ್ತಿರುವ ಧಾರಕಾರ ಮಳೆಗೆ ಭಾರತದ ಸಿಲಿಕಾನ್ ವ್ಯಾಲಿ ಬೆಂಗಳೂರು ಕೆರೆಯಂತೆ ಆಗಿದ್ದು, ಇಲ್ಲಿನ ಜನಜೀವನ ಅಸ್ತವ್ಯಸ್ತವಾಗಿದೆ. ಆದರೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಇಂಥ ದುಸ್ಥಿತಿಗೆ ರಾಜ್ಯ ಕಾಂಗ್ರೆಸ್ ಸರಕಾರದ ಕೆಟ್ಟ ನೀತಿಗಳೇ ಕಾರಣ ಎಂದು ಕಿಡಿಕಾರಿ ರಾಜಕೀಯ ಪ್ರೇರಿತ ಟ್ವಿಟ್ ಮಾಡಿದ್ದು, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಮಳೆಯಿಂದಾದ ಅವ್ಯವಸ್ಥೆ ಕುರಿತು ಟ್ವಿಟ್ ಮಾಡಿರುವ ಕೇಂದ್ರ ಸಚಿವರು, ಬೆಂಗಳೂರಿನಲ್ಲಿ ಒಂದೇ ದಿನದ ವರುಣನ ಅಬ್ಬರಕ್ಕೆ ಭಾರತದ ಸಿಲಿಕಾನ್ ವ್ಯಾಲಿಯ ಮೂಲಸೌಕರ್ಯ ವ್ಯವಸ್ಥೆ ತತ್ತರಿಸಿ ಹೋಗಿದೆ. ರಾಜ್ಯ ಕಾಂಗ್ರೆಸ್ ಸರಕಾರದ ದುರಾಡಳಿತ ಮತ್ತು ಅಸಮರ್ಪಕ ನಿರ್ವಹಣೆಯಿಂದ ಭಾರತದ ಐಟಿ ಕಾರಿಡಾರ್’ನಲ್ಲಿ ಪ್ರವಾಹಸದೃಶ ಪರಿಸ್ಥಿತಿ ತಲೆದೋರಿದೆ ಎಂದು ಅವರು ದೂರಿದ್ದಾರೆ.
ಒಳಚರಂಡಿ ವ್ಯವಸ್ಥೆ ಹದಗೆಟ್ಟು ರಸ್ತೆಗಳು ನದಿಗಳಾಗಿವೆ. ಸರಕಾರದ ಘೋರ ವೈಫಲ್ಯದಿಂದ ಬೆಂಗಳೂರಿನ ಜನರು ಮಳೆಗೆ ಸಿಕ್ಕಿ ನರಕಯಾತನೆ ಅನುಭವಿಸುತ್ತಿದ್ದಾರೆ. ಆಡಳಿತ ವ್ಯವಸ್ಥೆಯ ಕೆಟ್ಟ ನೀತಿಗಳು ನಾಡಪ್ರಭು ಕೆಂಪೇಗೌಡರು ಕಟ್ಟಿದ ಹೆಮ್ಮೆಯ ಬೆಂಗಳೂರು ನಗರವನ್ನು ಹಾಳುಗೆಡವಿದೆ ಎಂದು ಕುಮಾರಸ್ವಾಮಿ ಅವರು ಟೀಕಿಸಿದ್ದಾರೆ.
ಹೂಡಿಕೆದಾರ ಸ್ವರ್ಗವಾಗಿದ್ದ ಬೆಂಗಳೂರು, ಜಾಗತಿಕ ಮಟ್ಟದ ತಂತ್ರಜ್ಞಾನದ ನೆಚ್ಚಿನ ನೆಲೆವೀಡಾಗಿದ್ದ ಬೆಂಗಳೂರು ಈಗ ಇನ್ನಿಲ್ಲದ ದುಸ್ಥಿತಿಗೆ ಸಿಲುಕಿ ಕಣ್ಣೀರು ಹಾಕುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಒಂದೇ ದಿನದ ವರುಣನ ಅಬ್ಬರಕ್ಕೆ ಭಾರತದ ಸಿಲಿಕಾನ್ ವ್ಯಾಲಿಯ ಮೂಲಸೌಕರ್ಯ ವ್ಯವಸ್ಥೆ ತತ್ತರಿಸಿ ಹೋಗಿದೆ. ರಾಜ್ಯ @INCKarnataka ಸರಕಾರದ ದುರಾಡಳಿತ ಮತ್ತು ಅಸಮರ್ಪಕ ನಿರ್ವಹಣೆಯಿಂದ ಭಾರತದ ಐಟಿ ಕಾರಿಡಾರ್'ನಲ್ಲಿ ಪ್ರವಾಹಸದೃಶ ಪರಿಸ್ಥಿತಿ ತಲೆದೋರಿದೆ. ಒಳಚರಂಡಿ ವ್ಯವಸ್ಥೆ ಹದಗೆಟ್ಟು ರಸ್ತೆಗಳು ನದಿಗಳಾಗಿವೆ. ಸರಕಾರದ ಘೋರ… pic.twitter.com/9HDvY9lHMS
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) October 15, 2024
ಕುಮಾರಸ್ವಾಮಿ ಅವರ ಆರೋಪಕ್ಕೆ ನೆಟ್ಟಿಗರು ತಿರುಗೇಟು ನೀಡಿದ್ದು, ಕೇಂದ್ರ ಸಚಿವರಿಗೆ ಮುಜುಗರವನ್ನುಂಟು ಮಾಡುವಂತಿದೆ.
ಕೆಲ ಕಾಮೆಂಟ್ ಹೀಗಿವೆ.
ಈಗ ನೀವೇ ಮುಖ್ಯಮಂತ್ರಿ ಆಗಿದ್ರೆ ಈ ತರಹ ಮಳೆ ಬಂದಿದ್ರೆ ನೀರೆಲ್ಲ ಚರಂಡಿಯಲ್ಲಿ ಹರಿದುಹೊಗ್ತಾ ಇತ್ತಾ ಸರ್ ಇದರಲ್ಲಿ ಎಲ್ಲಾ ಪಕ್ಷದವರ ಪಾಲು ಇದೆ ಅದನ್ನ ಬಿಟ್ಟು ನಿಮ್ಮ ರಾಜಕೀಯಕ್ಕೆ ಯಾಕೆ ಬೆಂಗಳೂರನ್ನ So called ಅಂತಾ ಕರಿತಿರಾ?.
ಸರ್, ನೀವು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಿರಿ. ಈ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ನಿಮ್ಮ ಮೈತ್ರಿ ಪಕ್ಷ ಬಿಜೆಪಿ 4 ವರ್ಷಗಳ ಕಾಲ ಅಧಿಕಾರದಲ್ಲಿತ್ತು. ಬಿಬಿಎಂಪಿಯಲ್ಲೂ ಬಿಜೆಪಿ ಅಧಿಕಾರದಲ್ಲಿತ್ತು. 15 ತಿಂಗಳ ಹಿಂದೆ ಅಧಿಕಾರಕ್ಕೆ ಬಂದ ಸರ್ಕಾರವನ್ನು ಏಕೆ ದೂರುತ್ತೀರಿ?.
ಅತಿ ಹೆಚ್ಚು ಮಳೆ ಬಂದಾಗ ಇವು ಸರ್ವೇ ಸಾಮಾನ್ಯ, ಯಾವ ಸರ್ಕಾರ ಬಂದ್ರು ಅಷ್ಟೆ ಅವರ ಮೇಲೆ ನೀವು, ನಿಮ್ಮ ಮೇಲೆ ಅವರು ಸದಾ ಮಾತಿನ ಚಾಕಮಕಿ ಅಷ್ಟೆ, ಕೊನೆಗೆ ಬಳಿ ಆಗೋದು ಸಾರ್ವಜನಿಕರು ಅಷ್ಟೆ.
೨೦೧೮ ರಲ್ಲಿ ಅಧಿಕಾರಕ್ಕಾಗಿ ಕಾಂಗ್ರೆಸ್ ಜೊತೆ ಸೇರಿ ಸಮ್ಮಿಶ್ರ ಸರ್ಕಾರ ಮಾಡುವಾಗ ಆಡಳಿತ ನೀತಿ ಸರಿಯಾಗಿತ್ತೇ? ಅಥವಾ ತಾವು ಕೆಳಗಿಳಿದ ನಂತರ ಅಧಿಕಾರ ಮುಂದುವರೆಸಿದ ಈಗ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ಯವರ ಆಡಳಿತ ನೀತಿ ಚೆನ್ನಾಗಿತ್ತೇ? ಆರು ಕೊಟ್ಟರೆ ಅತ್ತೆ ಕಡೆ ಮೂರು ಕೊಟ್ಟರೆ ಸೊಸೆ ಕಡೆ ಅಲ್ಲವೇ!!.
ಯಾವ ಸರ್ಕಾರ ಇದ್ದರು ಮಳೆಗೆ ಬೆಂಗಳೂರಿನ ರಸ್ತೆಗಳು ನೀರಿನಿಂದ ಮುಳುಗುತ್ತವೆ ಕಾರಣ ಇಲ್ಲಿನ ಚರಂಡಿ ವ್ಯವಸ್ಥೆಗಳು ಬ್ರಿಟಿಷ್ ಕಾಲದ್ದು ನೀವುಗಳು ಅದನ್ನೆ ಮುಂದುವರಿಸಿಕೊಂಡು ಬಂದಿದ್ದೀರ ಜೊತೆಗೆ ರಾಜಕಾಲುವೆ ಮುಚ್ಚಿದ್ದೀರ.
ತಮ್ಮ ಆಡಳಿತಾವಧಿಯಲ್ಲಿ ಹೇಗಿತ್ತು ಎಂಬುದನ್ನು ವಿವರಿಸಿ 😜 ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಪ್ರಾರಂಭಿಕ ಹಂತದಲ್ಲಿ ರೂಪುಗೊಂಡಿದ್ದರೆ ಈ ಅವ್ಯವಸ್ಥೆ ಹೀಗಿರಲಾರದು.
ಅಣ್ಣ ನಿಮ್ಮಅಭಿಮಾನಿ ,ನಿಖಿಲಣ್ಣಂಗೆ ಟಿಕೆಟ್ ಕೊಡ್ಲೆಬೇಕು
ನಿಖಿಲ್ ಅಣ್ಣ ಗೆದ್ದು ಬರ್ಬೇಕು ,
ಈ ಕಿತಾ ಗೆಲ್ದೆ ಸೋತ್ರೆ ಮುಂದಿನ್ ಕಿತಾ ಗೆದ್ದೆ ಗೆಲ್ತಾರೆ
ಸಿಎಂ ಆಗೆ ಆಗ್ಬೇಕು
ಕಾರ್ಯಕರ್ತರು ಒತ್ತಡ ಹಾಕ್ತೀವಿ ಹೂ ಅನ್ನಿ ಅಣ್ಣ.
ನೀವು ಬಿಡಿ ಸಕತ್ತಾಗಿ ಆಡಳಿತ ಮಾಡಿದ್ರೆ.
ಉಸಾರು ಕಣಣ್ಣ ಈಗ ೧೮ ಇಂಗೆ ಆಡ್ತಾ ಇದ್ರೆ ಜನ ೮ಕ್ಕೆ ತಂದು ಬುಡ್ತಾರೆ 🙏🙏.
English post ಅಲಿ “so called” ಅಂತಾ ಹಾಕಿ ಇಲ್ಲಿ ಯಾಕ್ ಹಾಕಿಲ ಸ್ವಾಮಿ? ಯಾರನ್ ಮೆಚಿಸೋಕೆ ಈ ನಾಟಕಗಳು?
All those infrastructure by bjp 40% commission government.
೨೫೦ ಚದರ ಚ ಕಿ ಮೀ ಇದ್ದ ಮೂಲ ಬೆಂಗಳೂರಿಗೆ ಸೌಕರ್ಯಗಳೆ ಇಲ್ಲದ 550 ಚ ಕಿ ಮೀ unplanned areaವನ್ನು ರಾತ್ರೊ ರಾತ್ರಿ ಸೇರಿಸಿದ್ದು ತಮ್ಮ ಮುಖ್ಯಮಂತ್ರಿ ಅವಧಿಯಲ್ಲಿ , ಈಗಿನ ಸಂಕಷ್ಟಗಳಿಗೆ ಅದುವೇ ಮೂಲಕಾರಣ
ನಿಮ್ಮ ಬಿಜೆಪಿ ಅಧಿಕಾರದಲ್ಲಿ ಇದ್ದಾಗ್ಲೂ ಇದೇ ರೀತಿ ತುಂಬಾ ಸಾರಿ ನೀರು ತುಂಬಿದೆ ಅಣ್ಣ ನೀವು ಏನು ಮಾಡಿದ್ರಿ ಬೇಕಾದರೆ ದಿನಾಂಕ ಸಮೇತ ವಿಡಿಯೋ ಕಳುಹಿಸುತ್ತಿನಿ ನೋಡಿ ಕಣ್ಣು ತುಂಬಿಕೊಳ್ಳಿ.
ಕೇವಲ ಕಾಂಗ್ರೆಸ್ ಮಾತ್ರ ಅಲ್ಲ ಇರುವ 3 ಪಕ್ಷಗಳ ಭ್ರಷ್ಟಾಚಾರ ಆಡಳಿತದಿಂದ ನಮ್ಮ ರಾಜ್ಯ ತತ್ತರಿಸಿ ವಿನಾಶದ ಅಂತದಲ್ಲಿ ಇದೆ ಏನೇ ಆದರೂ ನಮ್ಮ ಜನ ಇದರ ಬಗ್ಗೆ ಆಲೋಚನೆ ಸಹ ಮಾಡುವುದಿಲ್ಲ ಬಿಡಿ.