ದೊಡ್ಡಬಳ್ಳಾಪುರ: ಭಾರತದ ಏಕತೆಗಾಗಿ ಶ್ರಮಿಸಿದ ಹಾಗೂ ಏಕತೆಯನ್ನು ಸಾಧಿಸಿದ ಮಹಾನ್ ವ್ಯಕ್ತಿ, ಉಕ್ಕಿನ ಮನುಷ್ಯ’ ಖ್ಯಾತಿಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನವನ್ನು ‘ರಾಷ್ಟ್ರೀಯ ಏಕತಾ ದಿನ’ವನ್ನಾಗಿ (national unity day) ಆಚರಿಸಲಾಗುತ್ತದೆ.
ಈ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ರಾಷ್ಟ್ರೀಯ ಏಕತಾ ದಿನದ ಆಚರಣೆಯನ್ನು ಆಚರಿಸಲಾಯಿತು.
ಇನ್ಸ್ಪೆಕ್ಟರ್ ಅಮರೇಶ್ ಗೌಡ ಅವರು ಸಿಬ್ಬಂದಿಗಳಿಗೆ, ನಮ್ಮ ರಾಷ್ಟ್ರದ ಏಕತೆ, ಸಮಗ್ರತೆ ಮತ್ತು ಭದ್ರತೆಯನ್ನು ಕಾಪಾಡಲು ನಮ್ಮನ್ನು ಅರ್ಪಿಸಿಕೊಳ್ಳುತ್ತೇವೆ ಮತ್ತು ಈ ಸಂದೇಶವನ್ನು ನಮ್ಮ ಸಹ ದೇಶವಾಸಿಗಳಲ್ಲಿ ಹರಡಲು ಶ್ರಮಿಸುತ್ತೇವೆ ಎಂದು ಪ್ರತಿಜ್ಞಾವಿಧಿಯನ್ನು ಬೋಧಿಸಿದರು.