ಚನ್ನಪಟ್ಟಣ: ಉಪಚುನಾವಣೆ (channapatna by election) ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಇಂದು ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದ ವೇಳೆ ಭಾವೋದ್ವೇಗಕ್ಕೆ ಒಳಗಾಗಿ ಕಣ್ಣೀರು ಸುರಿಸಿದ ಪ್ರಸಂಗ ನಡೆದಿದೆ.
ಪ್ರಚಾರದ ಸಂದರ್ಭದಲ್ಲಿ ಮಾತಾಡುವ ವೇಳೆ ನಿಖಿಲ್ ಈ ಚುನಾವಣೆಯಲ್ಲಿ ಕಣ್ಣೀರು ಹಾಕಬಾರದು ಅಂದುಕೊಂಡಿದ್ದೆ ಆದರೆ ಕಳೆದ ಎರಡು ಚುನಾವಣೆಯಲ್ಲಿ ಸೋಲಿನಿಂದಲೇ ಪೆಟ್ಟು ತಿಂದಿದ್ದೇನೆ.
ಬಹುಷಃ ಮಾಜಿ ಪ್ರಧಾನಿ, ಮಾಜಿ ಮುಖ್ಯಮಂತ್ರಿಗಳ ಮಗನಾಗಿ ಹುಟ್ಟಿದ್ದೇ ನನ್ನ ದುರಾದೃಷ್ಟವೇನೋ ಗೊತ್ತಿಲ್ಲ ಎಂದು ಕಣ್ಣೀರಿಟ್ಟರು.
ಮಾಜಿ ಮುಖ್ಯಮಂತ್ರಿಗಳ ಮಗನಾಗಿ ಹುಟ್ಟಿದ್ದೇ ನನ್ನ ದುರಾದೃಷ್ಟವೇನೋ ಗೊತ್ತಿಲ್ಲ: ಕಣ್ಣೀರಿಟ್ಟ ನಿಖಿಲ್ ಕುಮಾರಸ್ವಾಮಿ#LatestUpdates #channapatnabyelection #NikhilKumaraswamy pic.twitter.com/Fo0qiYcamT
— Harithalekhani (@harithalekhani) October 31, 2024
ಜನ ನನ್ನನ್ನು ವೋಟ್ ಮಾಡಿದ್ದರೂ, ರಾಜಕೀಯ ಷಡ್ಯಂತ್ರದಿಂದ ನಾನು ಸೋಲಬೇಕಾಯಿತು ಎರಡೂ ಬಾರಿ ರಾಜಕೀಯ ಷಡ್ಯಂತ್ರಕ್ಕೆ ಬಲಿಯಾಗಿದ್ದೇನೆ.
ಆ ಕಾರಣಕ್ಕೆ ಈ ಬಾರಿ ಚುನಾವಣೆಗೆ ನಿಲ್ಲಬಾರದು ಅಂದುಕೊಂಡಿದ್ದೆ ಆದರೆ ಕಾರ್ಯಕರ್ತರ ಮಾತಿಗೆ ಗೌರವ ಕೊಟ್ಟು ಚುನಾವಣೆಗೆ ನಿಂತಿದ್ದೇನೆ ಎಂದು ಮಾತು ಮಾತಿಗೂ ನಿಖಿಲ್ ಕಣ್ಣೀರು ಹಾಕಿದರು.
ದೇವೇಗೌಡರ ಮೊಮ್ಮಗನಿಗೆ ನಾವು 100ಕ್ಕೆ ನೂರರಷ್ಟು ಗೆಲ್ಲಿಸುತ್ತೇವೆ. ನೀವು ಅಳಬೇಡಿ ಕಣಣ್ಣ ಎಂದು ಕಾರ್ಯಕರ್ತರು ಧ್ವನಿಗೂಡಿಸಿ ನಿಖಿಲ್ ಅವರನ್ನು ಸಮಾಧಾನಪಡಿಸಿದ ಪ್ರಸಂಗವೂ ನಡೆಯಿತು.