ಬೆಂಗಳೂರು ಗ್ರಾಮಾಂತರ ಜಿಲ್ಲೆ; ನಾಳೆ ನವೆಂಬರ್ 1ರಂದು ನಡೆಯಲಿರುವ ಕನ್ನಡ ರಾಜ್ಯೋತ್ಸವದಂದು ನೀಡಲಾಗುವ ರಾಜ್ಯೋತ್ಸವ ಪ್ರಶಸ್ತಿ (rajyotsava award) ಕುರಿತು ಹಲವು ಗೊಂದಲ ಏರ್ಪಟ್ಟಿದ್ದ ಬೆನ್ನಲ್ಲೇ, ನಿಯಂತ್ರಣ ಕಳೆದುಕೊಂಡಿರುವ ಜಿಲ್ಲಾಡಳಿತದ ವೈಫಲ್ಯ ಪದೇ ಪದೇ ಸಾಬೀತಾಗುತ್ತಿದ್ದು, ಜಿಲ್ಲೆಯಲ್ಲಿ ಹೇಳೋರ್ ಕೇಳೋರ್ ಇದ್ದಾರೆಯೇ.? ಇಲ್ಲವೇ.? ಎಂಬ ಪ್ರಶ್ನೆ ಸಾರ್ವಜನಿಕರದ್ದಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಕುರಿತು ಅಧಿಕೃತ ಮಾಹಿತಿ ಘೋಷಣೆಯಾಗದೆ ತೀವ್ರ ಗೊಂದಲ ಏರ್ಪಟ್ಟಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗಿತ್ತು. ಇದರ ನಡುವೆಯೇ ಸಂಜೆಗೆ ಪಟ್ಟಿ ಪ್ರಕಟವಾಯಿತು.
ಆದರೆ ಈ ಪಟ್ಟಿ ರಾತ್ರಿ 10 ಗಂಟೆ ಬಳಿಕವೂ ಪರಿಷ್ಕರಣೆ ನಡೆಯುತ್ತಿದ್ದು, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಪದೇ ಪದೇ ಹಲವು ಬದಲಾವಣೆ ನಡೆಯುತ್ತಿದ್ದು, ಪ್ರಶ್ನಿಸಿದವರಿಗೆ, ಪ್ರಭಾವಗಳಿಂದ ಕರೆ ಮಾಡಿಸಿದವರಿಗೆ ಮನ್ನಣೆ ನೀಡುವ ಕಾರಣ ಏಕಾಏಕಿ ಪಟ್ಟಿ ಪರಿಷ್ಕರಣೆ ಮಾಡಲಾಗುತ್ತಿದೆ ಎಂಬ ಆರೋಪ ವ್ಯಕ್ತವಾಗುತ್ತಿದೆ.
ಅಲ್ಲದೆ ನಾಳೆ ಬೆಳಗ್ಗೆ ಕೂಡ ( ನ.01)ರಂದು ಪ್ರಭಾವಿಗಳಿಂದ ಕರೆ ಮಾಡಿಸಿದರೆ ಆಗಲೂ ಪಟ್ಟಿ ಪರಿಷ್ಕರಣೆ ನಡೆಯಲಿದೆ ಎಂಬ ಲೇವಡಿ ಪತ್ರಕರ್ತರದ್ದಾಗಿದೆ.