ವೈರಲ್ ವಿಡಿಯೋ: ವ್ಯಕ್ತಿಯೋರ್ವನ ಹೆಲ್ಮೆಟ್ ಸೇರಿದ ನಾಗರ ಹಾವಿನ ಮರಿ ದ್ವಿಚಕ್ರ ವಾಹನ ಸವಾರರಿಗೆ, ಹೆಲ್ಮೆಟ್ ಧರಿಸುವ ಮುನ್ನ ಜಾಗ್ರತೆ ವಹಿಸಬೇಕೆಂಬ ಸಂದೇಶ ನೀಡಿರುವ Video ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೈದರಾಬಾದ್ ನ ವ್ಯಕ್ತಿಯೊಬ್ಬ ಸ್ಕೂಟರ್‌ನಲ್ಲಿ ಹೆಲೈಟ್ ಇಟ್ಟು ಕಚೇರಿ ಒಳಗೆ ತೆರಳಿದ್ದಾರೆ. ಸಂಜೆ ಕಚೇರಿ ಕೆಲಸ ಮುಗಿಸಿ ಹೊರಗೆ ಸ್ಕೂಟರ್ ಬಳಿ ಬಂದಾಗ ಹೆಲೈಟ್ ನಲ್ಲಿ ಯಾವುದೋ ಪ್ರಾಣಿಯ ಬಾಲ ಕಾಣಿಸಿದೆ.
ಕೂಡಲೇ ಅದೇನೆಂದು ಪರಿಶೀಲಿಸಿದ್ದಾರೆ. ಆಗಾ ಅದರ ಒಳಗೆ ಹಾವಿನ ಮರಿ ಹೋಗಿದೆ ಎಂದು ಗೊತ್ತಾದ ತಕ್ಷಣ ಗಾಬರಿ ಬಿದ್ದಿದ್ದಾರೆ. ಕೂಡಲೇ ಉರಗ ತಜ್ಞರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಉರಗ ತಜ್ಞ ಹೆಲೈಟ್ ಅನ್ನು ಪರಿಶೀಲಿಸಿದ್ದಾರೆ. ಅದರೆ ಅಲ್ಲಿ ಯಾವುದೇ ಹಾವು ಕಾಣಿಸಿಲ್ಲ.
ಹಾವು ಹೆಲ್ಮೆಟ್ ನಿಂದ ಹೊರಟು ಹೋಗಿದೆ ಎಂದು ಹೇಳುತ್ತಿದ್ದಂತೆ, ಹೆಲೈಟ್ ಒಳಗಿನಿಂದ ಹಾವೊಂದು ಬುಸುಗುಟ್ಟಿದ ಶಬ್ದ ಕೇಳಿಸಿದೆ. ಮತ್ತೆ ಹೆಲೈಟ್ ನ ಸುತ್ತ ಪರಿಶೀಲಿಸಿದಾಗ ಹೆಡೆ ಬಿಚ್ಚಿ ನಾಗರಹಾವಿನ ಮರಿ ಹೊರಬಂದಿದೆ. ಬಳಿಕ ಅದನ್ನು ಸುರಕ್ಷಿತವಾಗಿ ಹಿಡಿದು ಅರಣ್ಯಕ್ಕೆ ಬಿಡಲಾಗಿದೆ.
హెల్మెట్లో దూరిన పాము…
— ChotaNews (@ChotaNewsTelugu) November 6, 2024
ఓ వ్యక్తి బైక్పై వెళ్లేందుకు హెల్మెట్ తీసుకోవడంతో దానిలో కదులుతూ ఓ పాము కనిపించింది. భయాందోళనుకు గురైన ఆ వ్యక్తి స్నేక్ క్యాచర్ని పిలవడంతో దానిని పట్టుకొని అటవి ప్రాతంలో వదిలేసాడు.
జాగ్రత్తగా ఉండాలని కోరుతూ దీనికి సంబంధించిన వీడియో సోషల్ మీడియాలో… pic.twitter.com/kxHqi5n723
ಈ Video ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಶೂ ಧರಿಸುವಾಗ ಮಾತ್ರವಲ್ಲ, ಹೆಲ್ಮೆಟ್ ಧರಿಸುವಾಗಲು ದ್ವಿಚಕ್ರ ವಾಹನ ಸಾವರರು ಪರಿಶೀಲನೆ ನಡೆಸಬೇಕೆಂಬ ಸಂದೇಶ ನೀಡಲಾಗುತ್ತಿದೆ.