ಶಿವಮೊಗ್ಗ: ಬೈಕ್‌ನಲ್ಲಿ ಶಾಲೆಗೆ ತೆರಳುತ್ತಿದ್ದ ಶಿಕ್ಷಕ ರೊಬ್ಬರು ಹೃದಯಘಾತಕ್ಕೆ (heart attack) ಒಳಗಾಗಿ ಮೃತಪಟ್ಟಿ ರುವ ಘಟನೆ ನಡೆದಿದೆ.
ಆನಂದಪುರ ಸಮೀಪದ ನರಸೀಪುರದ ಸರಕಾರಿ ಶಾಲೆಯ ಶಿಕ್ಷಕ ಮಂಜುನಾಥ್ (57) ಮೃತಪಟ್ಟ ಶಿಕ್ಷಕ.
ಜಂಬೆಕೊಪ್ಪ ಶಾಲೆಯಲ್ಲಿ ಕಾರ್ಯನಿರ್ವಹಿಸಲು ಬೈಕ್ ನಲ್ಲಿ ತೆರಳುತ್ತಿರುವ ಸಂದರ್ಭದಲ್ಲಿ ಹೃದಯಾ ಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ.
ಮಂಜುನಾಥ್ ಅವರು ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಶಿಕ್ಷಕ ವರ್ಗದವರನ್ನು ಅಗಲಿದ್ದಾರೆ. ಮಂಜುನಾಥ್ ಮನೆಗೆ ಸಾಗರ ಕ್ಷೇತ್ರ ಶಿಕ್ಷಣಾಧಿಕಾರಿ ಭೇಟಿನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
ಇತ್ತೀಚೆಗೆ ಸಾಗರ ತಾಲೂಕು ಸಿರಿವಂತೆಯ ಸರಕಾರಿ ಶಾಲೆಯ ಶಿಕ್ಷಕಿ ಶಿವಮೊಗ್ಗದ ಡಯಟ್‌ನಲ್ಲಿ ನಡೆಯುವ ತರಬೇತಿ ಗಾಗಿ ತೆರಳುವ ಅವಸರದಲ್ಲಿ ಅಪಘಾತವಾಗಿ ಸಾವನ್ನಪ್ಪಿರುವ ಘಟನೆ ಮಾಸುವ ಮುನ್ನವೇ ಮತ್ತೊಂದು ದುರ್ಘಟನೆ ಸಂಭವಿಸಿದೆ.