Astrology: Likely to be a memorable day

Astrology| ದಿನ ಭವಿಷ್ಯ ಡಿ.08: ಈ ರಾಶಿಯವರಿಂದು ಯಾವುದೇ ರೀತಿಯ ಜಗಳದಿಂದ ದೂರವಿರಿ

ಭಾನುವಾರ, ಡಿಸೆಂಬರ್ 08, 2024, ದೈನಂದಿನ ರಾಶಿ ಭವಿಷ್ಯ| astrology..

ಮೇಷ ರಾಶಿ: ಸಂಬಂಧಗಳ ವಿಚಾರವಾಗಿ ಮನಸ್ಸಿಗೆ ಬೇಸರವಾಗಬಹುದು. ಒಡಹುಟ್ಟಿದವರು ಅಥವಾ ಕುಟುಂಬದ ಸದಸ್ಯರೊಂದಿಗೆ ಕೆಲವು ವಿಷಯದ ಬಗ್ಗೆ ಚರ್ಚೆ, ವಾದ ಮಾಡುವಿರಿ. ಆದರೆ ಹೀಗೆ ವಾದ ಮಾಡುವುದರಿಂದ ಸಮಸ್ಯೆ ಉಂಟಾಗಬಹುದು.

ವೃಷಭ ರಾಶಿ: ಆರೋಗ್ಯ ಮತ್ತು ಆಹಾರದ ಬಗ್ಗೆ ಕಾಳಜಿ ವಹಿಸಿ. ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಿ, ಇಲ್ಲದಿದ್ದರೆ ಅಪಘಾತದ ಸಾಧ್ಯತೆಯಿದೆ. ಕುಟುಂಬ ಸಂಬಂಧಿತ ಸಮಸ್ಯೆಗಳು ನಿಮಗೆ ತಲೆನೋವಾಗಬಹುದು. ಪ್ರತಿಸ್ಪರ್ಧಿಗಳಿಂದ ಕಠಿಣ ಸ್ಪರ್ಧೆಯನ್ನು ಎದುರಿಸಬೇಕಾಗಬ ಹುದು. ಹಿತೈಷಿಗಳ ಸಹಾಯದಿಂದ ನಿಮ್ಮ ಸಮಸ್ಯೆಗಳಿಗೆ ಪರಿಹಾರಗಳನ್ನು ಹುಡುಕುವಲ್ಲಿ ಯಶಸ್ವಿಯಾಗುತ್ತೀರಿ. ನಿಮ್ಮ ಯಾವುದೇ ಕೆಲಸವನ್ನು ಇತರರಿಗೆ ಬಿಟ್ಟರೆ, ಅದು ಬಹಳ ಸಮಯ ತೆಗೆದು ಕೊಳ್ಳಬಹುದು.

ಮಿಥುನ ರಾಶಿ: ವೃತ್ತಿಯಲ್ಲಿ ಅಲೆದಾಟ ಟಾರ್ಗೆಟ್‌ ರೀಚ್ ಮಿಥುನ ಮಾಡುವ ಒತ್ತಡ ಇರುತ್ತದೆ. ಸಹನೆಯಿಂದ ನಿಭಾಯಿಸಿ. ಪ್ರಜ್ಞಾಪೂರ್ವಕವಾಗಿ ನಿಭಾಯಿಸಿ. ಮನೆಮಂದಿಯ ಬಗ್ಗೆ ಕಾಳಜಿ ಮಾಡಿ. ಇತರರ ಮನಸ್ಸು ನೋಯಿಸಿದರೆ ನಾಳೆ ನಿಮಗೇ ಸಮಸ್ಯೆ ಆಗಬಹುದು. ಉಳಿದಂತೆ ಎಲ್ಲ ಸಮಸ್ಯೆಗಳಿಗೂ ಪರಿಹಾರ ಇರುತ್ತದೆ. ನಿಧಾನವಾಗಿ ಯೋಚಿಸಿ ಮುಂದುವರೆಯಿರಿ.

ಕಟಕ ರಾಶಿ: ಮನೆಯಲ್ಲಿ ಶುಭಕಾರ್ಯಗಳು ನಡೆಯುತ್ತದೆ. ವೃತ್ತಿರಂಗದಲ್ಲಿ ಇರುವ ಅಡೆತಡೆಗಳು ದೂರವಾಗುತ್ತದೆ. ಆದರೆ ಗೊಂದಲಗಳು, ಆತ್ಮವಿಶ್ವಾಸದ ಕೊರತೆ ನಿಮಗೆ ಸಮಸ್ಯೆ ಆಗಬಹುದು. ನಿಮ್ಮ ಹಣಕ್ಕೆ ಸಂಬಂಧಿಸಿದ ಬಹಳಷ್ಟು ಸಮಸ್ಯೆಗಳನ್ನು ತೊಡೆದು ಹಾಕುತ್ತೀರಿ, ಏಕೆಂದರೆ ನೀವು ವ್ಯವಹಾರದಲ್ಲಿ ನಿಮ್ಮ ಸ್ಥಗಿತಗೊಂಡ ಹಣವನ್ನು ಪಡೆಯಬಹುದು, ಆದರೆ ನಿಮ್ಮ ವ್ಯರ್ಥ ಖರ್ಚುಗಳನ್ನು ನೀವು ನಿಲ್ಲಿಸಬೇಕು.

ಸಿಂಹ ರಾಶಿ: ವೃತ್ತಿಯಲ್ಲಿ ಏರಿಳಿತ ಒತ್ತಡ ಇರುತ್ತದೆ. ಈಗ ನೀವು ಬಹಳ ಕಾಳಜಿಯಿಂದ ಮುನ್ನಡೆಯ ಬೇಕು. ಎಲ್ಲ ಕಡೆಯೂ ವಿರೋಧಗಳೇ ತುಂಬಿದೆ. ಗುರುಗಳನ್ನು ಪ್ರಾರ್ಥನೆ ಮಾಡಿಕೊಳ್ಳಿ. ಮನೆಮಂದಿಯ ಪ್ರೀತಿ ನಿಮ್ಮನ್ನು ಪೊರೆಯುವುದು.

ಕನ್ಯಾ ರಾಶಿ: ಮನಸ್ಸಿಗೆ ಉಲ್ಲಾಸ ಸಂತೋಷ ಕೊಡುವಂಥ ಘಟನೆಗಳು ನಡೆಯುತ್ತದೆ. ಯಶಸ್ಸನ್ನು ಪಡೆಯುತ್ತೀರಿ. ಅವಿವಾಹಿತರಿಗೆ ವಿವಾಹ ವಾಗುತ್ತದೆ. ಇಂದು ನೀವು ಸ್ನೇಹಿತರ ಆರೋಗ್ಯದ ಬಗ್ಗೆ ಚಿಂತೆ ಮಾಡುತ್ತೀರಿ.

ತುಲಾ ರಾಶಿ: ನಿಮ್ಮ ಕೆಲಸದ ಸ್ಥಳದಲ್ಲಿ ಕೆಲವು ಸಮಸ್ಯೆಗಳು ಉದ್ದವಿಸಬಹುದು. ಇದರಿಂದಾಗಿ ಮನಸ್ಸಿಗೆ ಬೇಸರವಾಗಬಹುದು. ವೃತ್ತಿ ವಿಚಾರಕ್ಕೆ ಬಂದರೆ ನಿಮ್ಮ ಕೆಲಸವನ್ನು ಬದಲಾಯಿಸುವ ಬಗ್ಗೆ ಯೋಚಿಸಬಹುದು. ಆದರೆ ನೀವು ಈ ವಿಷಯದಲ್ಲಿ ಬಹಳ ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ನಿಮಗೆ ಸ್ವಲ್ಪ ಟೆನ್ಶನ್ ಕೂಡ ಇರುತ್ತದೆ. ಯಾರೊಬ್ಬರ ಸ್ಥಿತಿಯನ್ನು ಒಪ್ಪಿಕೊಳ್ಳುವ ಮೂಲಕ ಯಾವುದೇ ನಿರ್ಧಾರ ವನ್ನು ತೆಗೆದುಕೊಳ್ಳು ವುದು ನಿಮಗೆ ಹಾನಿಕಾರಕವಾಗಿದೆ.

ವೃಶ್ಚಿಕ ರಾಶಿ: ವಾರದ ಆರಂಭದಲ್ಲಿ ಸ್ವಲ್ಪ ಅಸ್ಥಿರತೆ ಉಂಟಾಗಬ ಹುದು. ಈ ಸಮಯದಲ್ಲಿ, ಕೆಲಸವನ್ನು ನತ್ ಅಪೂರ್ಣವಾಗಿ ಬಿಡುವುದನ್ನು ಮತ್ತು ಹೊಸ ಕೆಲಸವನ್ನು ಪ್ರಾರಂಭಿಸುವುದನ್ನು ತಪ್ಪಿಸಬೇಕು. ಇಲ್ಲದಿದ್ದರೆ ನೀವು ಎರಡೂ ಕಡೆ ವೈಫಲ್ಯ ಮತ್ತು ತೊಂದರೆಗಳನ್ನು ಎದುರಿಸಬೇಕಾಗಬಹುದು. ಮಕ್ಕಳ ಕಂಪನಿಯ ಕಡೆಗೆ ನೀವು ವಿಶೇಷ ಗಮನವನ್ನು ನೀಡಬೇಕು, ನಿಮ್ಮ ತಂದೆಯು ಮನಸ್ಸಿನ ಬಯಕೆಯನ್ನು ನಿಮಗೆ ತಿಳಿಸುತ್ತಾರೆ, ಅದನ್ನು ನೀವು ಪೂರೈಸಬೇಕು.‌

ಧನಸ್ಸು ರಾಶಿ: ಬೇರೆಯವರನ್ನು ಟೀಕಿಸುವುದನ್ನು ಅಥವಾ ಈ ಇತರರ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದನ್ನು ಅನು ತಪ್ಪಿಸಬೇಕು. ಇಲ್ಲದಿದ್ದರೆ ನೀವು ಅನಗತ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ವ್ಯಾಪಾರಿಗಳು ಮಾರುಕಟ್ಟೆಯಲ್ಲಿ ಖ್ಯಾತಿಯನ್ನು ಕಾಪಾಡಿಕೊಳ್ಳಲು ನಿಮ್ಮ ಪ್ರತಿಸ್ಪರ್ಧಿಗಳಿಂದ ನೀವು ಕಠಿಣ ಸ್ಪರ್ಧೆಯನ್ನು ಎದುರಿಸಬೇಕಾಗಬಹುದು.

ಮಕರ ರಾಶಿ: ಹೊಸ ನೌಕರಿ ಸಿಗುವುದು, ಧನಲಾಭ, ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಎಲ್ಲವೂ ಇದೆ. ನಿಮ್ಮ ಮುಂದೆ ಅನೇಕ ರೀತಿಯ ತೊಡಕುಗಳು ಬರುತ್ತದೆ, ಆದರೆ ಆ ಗೊಂದಲಗಳಿಗೆ ಹೆದರದೆ ನಿಮ್ಮ ಹೂಡಿಕೆಯ ಮಾರ್ಗಗಳನ್ನು ನೀವು ಕಂಡುಕೊಳ್ಳುತ್ತಿರಿ, ಆ ಧೈರ್ಯದಿಂದಲೇ ನೀವು ಲಾಭ ಗಳಿಸಲು ಸಾಧ್ಯವಾಗುತ್ತದೆ.

ಕುಂಭ ರಾಶಿ: ವೃತ್ತಿ ಮತ್ತು ವ್ಯವಹಾರದಲ್ಲಿ ನಿಧಾನಗತಿಯ ಪ್ರಗತಿಯಲ್ಲಿದ್ದರೂ ಲಾಭವನ್ನು ಪಡೆಯುತ್ತೀರಿ. ಕುಂಭ ಈ ಸಮಯದಲ್ಲಿ, ನೀವು ಐಷಾರಾಮ ಬದುಕಿಗೆ ಅಗತ್ಯಕ್ಕಿಂತ ಹೆಚ್ಚಿನ ಹಣವನ್ನು ಖರ್ಚು ಮಾಡಬಹುದು. ಹೊಸದಾಗಿ ಮದುವೆಯಾದವರ ಜೀವನದಲ್ಲಿ ಹೊಸ ಅತಿಥಿಯ ಆಗಮನ ಆಗಬಹುದು.

ಮೀನ ರಾಶಿ: ಕೆಲಸದ ಬಗ್ಗೆ ಅಸಡ್ಡೆ ಬೇಡ. ವ್ಯವಹಾರದಲ್ಲಿ ಸಭ್ಯತೆಯನ್ನು ಕಾಪಾಡಿಕೊಳ್ಳಿ. ಕೌಟುಂಬಿಕ ಸಮಸ್ಯೆಗಳನ್ನು ಪರಿಹರಿಸಲು, ವಿವಾದದ ಬದಲಿಗೆ ಮಾತುಕತೆಯನ್ನು ಬಳಸಿ. ಯಾವುದೇ ರೀತಿಯ ಜಗಳದಿಂದ ದೂರವಿರಿ. ಹಣದ ವ್ಯವಹಾರಗಳನ್ನು ಮಾಡುವಾಗ ಜಾಗರೂಕರಾಗಿರಬೇಕು. ಮಕ್ಕಳ ಕಡೆಯಿಂದ ಕೆಲವು ಸಂತಸದ ಸುದ್ದಿಗಳನ್ನು ಕೇಳಬಹುದು.

ರಾಹುಕಾಲ: 04:30PM ರಿಂದ 06:00PM
ಗುಳಿಕಕಾಲ: 03:00PM ರಿಂದ 04:30PM
ಯಮಗಂಡಕಾಲ: 12:00PM ರಿಂದ 01:30PM

ರಾಜಕೀಯ

ಭವಿಷ್ಯ ನುಡಿಯೋಕೆ ಅವರ‍್ಯಾರು, ಜ್ಯೋತಿಷಿನಾ? – ಡಿ.ಕೆ. ಶಿವಕುಮಾರ್ ವಿರುದ್ಧ ನಿಖಿಲ್‌ ಕುಮಾರಸ್ವಾಮಿ ಕಿಡಿ

ಭವಿಷ್ಯ ನುಡಿಯೋಕೆ ಅವರ‍್ಯಾರು, ಜ್ಯೋತಿಷಿನಾ? – ಡಿ.ಕೆ. ಶಿವಕುಮಾರ್ ವಿರುದ್ಧ ನಿಖಿಲ್‌ ಕುಮಾರಸ್ವಾಮಿ

ಖಾತಾ ಪರಿವರ್ತನೆ ಹೆಸರಿನಲ್ಲಿ ರಾಜ್ಯ ಸರ್ಕಾರ ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿದೆ. ಸರ್ಕಾರದ ಬಳಿ ಗುಂಡಿ ಮುಚ್ಚಲು ಹಣವಿಲ್ಲ, ಹಗಲು ದರೋಡೆ ದಂಧೆ ಮಾಡ್ತಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ನಿಖಿಲ್ ಕುಮಾರಸ್ವಾಮಿ (Nikhil

[ccc_my_favorite_select_button post_id="115363"]
ಪ್ರಾಣಿ ಸಂಪತ್ತು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ: Cm ಸಿದ್ದರಾಮಯ್ಯ ಎಚ್ಚರಿಕೆ

ಪ್ರಾಣಿ ಸಂಪತ್ತು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ: Cm ಸಿದ್ದರಾಮಯ್ಯ ಎಚ್ಚರಿಕೆ

ಪ್ರಾಣಿ ಸಂಪತ್ತು ಇಲ್ಲದೆ ಅರಣ್ಯ ಸಂಪತ್ತಿಗೆ ಮೌಲ್ಯವೇ ಇಲ್ಲ. ಹೀಗಾಗಿ ಪ್ರಾಣಿ ಸಂಪತ್ತನ್ನು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Cm Siddaramaiah) ಅವರು ಸ್ಪಷ್ಟ ಎಚ್ಚರಿಕೆ ನೀಡಿದರು.

[ccc_my_favorite_select_button post_id="114725"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಯೋಗ ಚಾಂಪಿಯನ್‌ಶಿಪ್: ವಿ.ವರ ಪ್ರಸಾದ್‌ಗೆ ಚಿನ್ನದ ಪದಕ

ಯೋಗ ಚಾಂಪಿಯನ್‌ಶಿಪ್: ವಿ.ವರ ಪ್ರಸಾದ್‌ಗೆ ಚಿನ್ನದ ಪದಕ

ನಿಸರ್ಗ ಯೋಗ ಕೇಂದ್ರದ ಹಾಗೂ ರಾಜ್ಯ ಬಾಲಕರ ಯೋಗ ತಂಡದ ನಾಯಕ ವಿ.ವರ ಪ್ರಸಾದ್ (V. Vara Prasad) 50ನೇ ಗೋಲ್ಡನ್‌ ಜುಬ್ಲಿ ರಾಷ್ಟ್ರೀಯ ಯೋಗ ಚಾಂಪಿಯನ್‌ಶಿಪ್ (Yoga Championship) ನಲ್ಲಿ ಭಾಗವಹಿಸಿ ಚಿನ್ನದ

[ccc_my_favorite_select_button post_id="114944"]
ದೊಡ್ಡಬಳ್ಳಾಪುರ: ಗುಟ್ಟೆ ನರಸಿಂಹಸ್ವಾಮಿ ದೇವಾಲಯದಲ್ಲಿ ಮತ್ತೆ ಕಳವು..!

ದೊಡ್ಡಬಳ್ಳಾಪುರ: ಗುಟ್ಟೆ ನರಸಿಂಹಸ್ವಾಮಿ ದೇವಾಲಯದಲ್ಲಿ ಮತ್ತೆ ಕಳವು..!

ಕಳೆದ ತಿಂಗಳ ಕೊನೆಯ ದಿನ ನಡೆದಿದ್ದ ತಾಲೂಕಿನ ಪ್ರಸಿದ್ಧ ಗುಟ್ಟೆ ಶ್ರೀ ಲಕ್ಷೀನರಸಿಂಹ ಸ್ವಾಮಿ (Gutte Lakshmi Narasimhaswamy Temple) ದೇವಾಲಯದಲ್ಲಿ ಕಳ್ಳತನ (Theft) ಪ್ರಕರಣ ಮತ್ತೆ ಮುಂದುವರಿದಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.

[ccc_my_favorite_select_button post_id="115220"]
ಕಾರು ಮತ್ತು ಬೊಲೆರೋ ನಡುವೆ ಭೀಕರ ಅಪಘಾತ.. ತಪ್ಪಿದ ಭಾರಿ ಅನಾಹುತ.!

ಕಾರು ಮತ್ತು ಬೊಲೆರೋ ನಡುವೆ ಭೀಕರ ಅಪಘಾತ.. ತಪ್ಪಿದ ಭಾರಿ ಅನಾಹುತ.!

ಕಾರು ಮತ್ತು ಬೊಲೆರೋ ವಾಹನದ ನಡುವೆ ಭೀಕರ ಅಪಘಾತ (Accident) ಉಂಟಾಗಿದ್ದು, ಅದೃಷ್ಟವಶಾತ್ ಸಂಭವಿಸಬಹುದಾಗಿದ್ದ ಭಾರಿ ಅನಾಹುತ ತಪ್ಪಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 44 ರ

[ccc_my_favorite_select_button post_id="115379"]

ಆರೋಗ್ಯ

ಸಿನಿಮಾ

ಭಾರತೀಯ ಚಿತ್ರರಂಗ ಕನ್ನಡದತ್ತ ಬೆರಗಿನಿಂದ ನೋಡುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ

ಭಾರತೀಯ ಚಿತ್ರರಂಗ ಕನ್ನಡದತ್ತ ಬೆರಗಿನಿಂದ ನೋಡುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ

ಕನ್ನಡ ಚಿತ್ರರಂಗ ಸಮೃದ್ಧವಾಗಿ ಬೆಳೆಯಬೇಕಾದರೆ ನಾಯಕ ನಟರು ಹೆಚ್ಚು ಸಿನಿಮಾಗಳನ್ನು ಮಾಡಬೇಕು ಹಾಗೂ ಹೆಚ್ಚು ನಾಯಕ ನಟರು ಚಿತ್ರರಂಗಕ್ಕೆ ಬರಬೇಕು ಎಂದು ಕೇಂದ್ರ ಸರ್ಕಾರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರಾದ ಹೆಚ್.ಡಿ.

[ccc_my_favorite_select_button post_id="115245"]
error: Content is protected !!