ಹೈದರಾಬಾದ್: ಕೌಟುಂಬಿಕ ಆಸ್ತಿ ವಿಚಾರವಾಗಿ ನಡೆದ ಜಗಳದ ಕುರಿತು ಪ್ರತಿಕ್ರಿಯೆ ಪಡೆಯಲು ತೆರಳಿದ್ದ ಪತ್ರಕರ್ತನ ಮೇಲೆ ಟಾಲಿವುಡ್ ನ ಹಿರಿಯ ನಟ ಮೋಹನ್ ಬಾಬು ಹಲ್ಲೆ ನಡೆಸಿರುವ ಘಟನೆ ಜಲಪಲ್ಲಿ ಫಾರ್ಮ್‌ಹೌಸ್‌ನಲ್ಲಿ ಮಂಗಳವಾರ ಸಂಜೆ ನಡೆದಿದ್ದು, Video ವೈರಲ್ ಆಗಿದೆ.
ಘಟನೆಯ ನಂತರ, ಪತ್ರಕರ್ತರು ಮೋಹನ್ ಬಾಬು ಅವರ ನಿವಾಸದ ಮುಂದೆ ಪ್ರತಿಭಟನೆ ನಡೆಸಿದ್ದು, ಮೋಹನ್ ಬಾಬು ವಿರುದ್ಧ ಕ್ರಮ ಮತ್ತು ಬೇಷರತ್ ಕ್ಷಮೆಯಾಚನೆಗೆ ಒತ್ತಾಯಿಸಿದರು.
ಮೋಹನ್ ಬಾಬು ಅವರ ಮಗ, ನಟ ಮಂಚು ಮನೋಜ್ ಪಹಾಡಿ ಶರೀಫ್ ಪೊಲೀಸ್ ಠಾಣೆಯಲ್ಲಿ ತನ್ನ ತಂದೆಯ ಮೇಲೆ ದೈಹಿಕ ಹಲ್ಲೆಯ ಆರೋಪ ಮಾಡಿ ಪೊಲೀಸ್ ದೂರು ದಾಖಲಿಸಿದ್ದಾರೆ.
ಇದರ ಬೆನ್ನಲ್ಲೇ ಮೋಹನ್ ಬಾಬು ಅವರು ತಮ್ಮ ನಟನ ಮಗ ಮಂಚು ಮನೋಜ್ ವಿರುದ್ಧ ಕೌಟುಂಬಿಕ ಆಸ್ತಿ ವಿವಾದದಲ್ಲಿ ಕೌಂಟರ್ ಕೇಸ್ ದಾಖಲಿಸಿದ್ದರು.
ಟಾಲಿವುಡ್ ನ ಹಿರಿಯ ನಟ ಮೋಹನ್ ಬಾಬು ಮತ್ತು ಅವರ ನಟನ ಮಗ ಮಂಚು ಮನೋಜ್ ಅವರು ಆಸ್ತಿ ವಿಚಾರವಾಗಿ ನಡೆದ ಗಲಾಟೆಯಲ್ಲಿ ದೂರು ಪಡೆದಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
మీడియా పై దాడికి పాల్పడ్డ మోహన్ బాబు pic.twitter.com/jP88QpZFmp
— Telugu Scribe (@TeluguScribe) December 10, 2024
ಡಿಜಿಪಿ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿ ಮನೋಜ್, ತನಗೆ ಜೀವ ಬೆದರಿಕೆಯ ಬಗ್ಗೆ ಮಾಹಿತಿ ನೀಡಿದರು. ತನಗೆ ಹಾಗೂ ಕುಟುಂಬ ಸದಸ್ಯರಿಗೆ ಭದ್ರತೆ ಒದಗಿಸುವಂತೆ ಒತ್ತಾಯಿಸಿ ಪೊಲೀಸ್ ವರಿಷ್ಠರಿಗೆ ಮನವಿ ಪತ್ರ ಸಲ್ಲಿಸಿದರು.