ಬೆಂಗಳೂರು; ರಸ್ತೆ ಬಂದ್ ಮಾಡಿ ಟ್ರಾಫಿಕ್ ಜಾಮ್ ಆಗಿದೆ ಎಂದು ಆರೋಪಿಸಿ ಬೆಂಗಳೂರಿನ ಮಹಿಳೆಯೋರ್ವರು ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ಅವರ ಭದ್ರತಾ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ವಿಡಿಯೋ (video) ವೈರಲ್ ಆಗಿದ್ದು, ಈ ವಿಚಾರ ಇದೀಗ ಭಾರೀ ಸದ್ದು, ಸಂಚಲನ ಹಾಗೂ ಮಹಿಳೆಯ ದಿಟ್ಟ ನಡೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಬೆಂಗಳೂರಿಗೆ ಶಾಪಿಂಗ್ ಗೆಂದು ಇತ್ತೀಚೆಗೆ ನೀತಾ ಅಂಬಾನಿ ಅವರು ತಮ್ಮ ಮರ್ಸಿಡೀಸ್ ಬೆಂಜ್ ಬುಲೆಟ್ ಪ್ರೊಫ್ ಕಾರ್‌ನಲ್ಲಿ ಹೈ ಸೆಕ್ಯೂರಿಯಲ್ಲಿ ಆಗಮಿಸಿದ್ದರು.
ಆಗ ನಗರದ ಪ್ರಮುಖ ರಸ್ತೆಯಲ್ಲಿ ಗಾಡಿ ನಿಲ್ಲಿಸಿ ಶಾಪಿಂಗ್ ಮಾಡಿದ್ದರು. ಹೀಗೆ ಕಾರನ್ನು ರಸ್ತೆಯಲ್ಲೇ ಬೇಕಾಬಿಟ್ಟಿ ನಿಲ್ಲಿಸಿದ್ದಕ್ಕೆ ಆ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿತ್ತು. ಇದರಿಂದ ರೊಚ್ಚಿಗೆದ್ದ ಮಹಿಳೆಯೋರ್ವರು ನೀತಾ ಅಂಬಾನಿಯವರ ಬಾಡಿಗಾರ್ಡ್ ಸಿಬ್ಬಂದಿ ಮೇಲೆ ಸಿಟ್ಟಾಗಿ ಕ್ಲಾಸ್ ತೆಗೆದುಕೊಂಡಿದ್ದರು.
ಹೀಗೆ ಬೇಕಾಬಿಟ್ಟಿ ಕಾರು ಪಾರ್ಕ್ ಮಾಡೋಕೆ ಬುದ್ದಿ ಇಲ್ವಾ ಅಂತೆಲ್ಲಾ ಜಾಡಿಸಿದ್ದರು. ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಅಂಬಾನಿ ಆದ್ರೆ ಅವರ ಮನೆಗೆ.. ನೀವು ಮಾಡಿದ್ದು ತಪ್ಪು ಎಂದು ಬಾಡಿಗಾರ್ಡ್‌ನನ್ನು ತರಾಟೆಗೆ ಮಹಿಳೆ ತೆಗೆದುಕೊಂಡಿರುವ ವರದಿಯಾಗಿದೆ.
Aunty doing the right thing! Shabash
— Memer Girl (@Memergirl__) December 19, 2024
Bengaluru aunty in argument with Nita Ambani's bodyguard for blocking the road. #neetaambani #amabani #modi #Chup #DevoleenaBhattacharjee #stockmarketcrash #Dollar #WinvivoX200Pro #ZEISSImageGoFar #HMIsTrueAmbedkarite #AmitShah pic.twitter.com/yjnzo1FDrs
ಬೆಂಗಳೂರಿನ ಮಹಿಳೆಯ ಈ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಅಲ್ಲದೇ ನೀತಾ ಅಂಬಾನಿಯೂ ಮುಜುಗರ ಅನುಭವಿಸಿದ್ದಾರೆಂದು ಹೇಳಲಾಗುತ್ತಿದೆ.