ದೊಡ್ಡಬಳ್ಳಾಪುರ: ಕರೊನಾ ಸೋಂಕಿನ ಕಾರಣ ಘೋಷಿಸಲಾದ ಲಾಕ್‌ಡೌನ್ ನಂತರ ಕೆ.ಜಿ.ಎಫ್ ಚಾಪ್ಟರ್ 2 ಚಿತ್ರದ ಚಿತ್ರೀೀಕರಣ ಆರಂಭವಾಗಿದೆ.
ಆದರೆ ಚಿತ್ರದಲ್ಲಿ ಅನಂತ್ ನಾಗ್ ಅವರ ಪಾತ್ರಕ್ಕೆ ಪ್ರಕಾಶ್ ರೈ ಸೇರ್ಪಡೆಯಾಗಿದ್ದಾರೆ ಎಂಬ ಚಿತ್ರಗಳು ಹರಿದಾಡಿದ ಬೆನ್ನಲ್ಲೆ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಸಮರವೇ ನಡೆಯುತ್ತಿದ್ದು,ಮುಂದುವರೆದು ಬಾಯ್ಕಾಟ್ ಕೆಜಿಎಫ್ 2 ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಊಟದಲ್ಲಿ ಹಲ್ಲಿ ಬಿದ್ದಿದೆ
ಪ್ರಕಾಶ್ ರೈ ಅವರನ್ನು ಸಿನಿಮಾಗೆ ತೆಗೆದುಕೊಳ್ಳಬಾರದಿತ್ತು.ಈ ನಿರ್ಧಾರ ತಪ್ಪು ಎಂದು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಸಿಟ್ಟು ಹೊರ ಹಾಕುತ್ತಿರುವ ನೆಟ್ಟಿಗರು. ಊಟದಲ್ಲಿ ಹಲ್ಲಿ ಬಿದ್ದಿದೆ ಎಂದು ವಿರೋಧ ವ್ಯಕ್ತಪಡಿಸಿದರೆ.
ಕಲಾವಿದನ ಕಲಾವಿದನಾಗಿ ನೋಡಿ
ಕಲಾವಿದನ ಕಲಾವಿದನಾಗಿ ನೋಡಿ,ಚಿತ್ರರಂಗಕ್ಕೆ ರಾಜಕೀಯ ತರಬೇಡಿ,ಆತ ಬಂದಾಗ ಕಿವಿ,ಕಣ್ಣು ಮುಚ್ಚಿಕೊಂಡು ನೋಡಿ.ಕನ್ನಡ ಚಿತ್ರರಂಗದ ಉತ್ತಮ ಪ್ರಯತ್ನಕ್ಕೆ ಹುಳಿ ಹಿಂಡ ಬೇಡಿ ಎಂದು ಪರವಹಿಸುತ್ತಿದ್ದಾರೆ.
ಪ್ರಕಾಶ್ ರೈ ಅನಂತ್ ನಾಗ್ ಅವರ ಪಾತ್ರಕ್ಕಲ್ಲ
ಇದರ ಬೆನ್ನಲ್ಲೆ ನಿರ್ದೇಶಕ ಪ್ರಶಾಂತ್ ನೀಲ್ ತಮ್ಮ ನಿರ್ಧಾರದ ಕುರಿತಾಗಿ ಸ್ಪಷ್ಟನೆ ನೀಡಿದ್ದು ಇದು ಹೊಸ ಪಾತ್ರ, ಅನಂತ್ ನಾಗ್ ಅವರ ಪಾತ್ರಕ್ಕೆ ಇವರನ್ನು ತಂದಿಲ್ಲ ಎಂದು ಇನ್ಸ್ಟಾಗ್ರಾಂ ಸ್ಟೋರೀಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
(ಚಿತ್ರ ಕೃಪೆ: ಪ್ರಕಾಶ್ ರಾಜ್ ಇನ್ಸ್ಟಾಗ್ರಾಂ ಖಾತೆ)