ಗುಂಟೂರು: ತೆಲುಗು ಸಿನಿರಂಗದ ಖ್ಯಾತ ನಟ ಜಯಪ್ರಕಾಶ್ ರೆಡ್ಡಿ (74) ಹೃದಯಾಘಾತದಿಂದ ನಿಧನರಾಗಿದ್ದಾರೆ.
74 ವರ್ಷದ ಜಯಪ್ರಕಾಶ್ ಇಂದು ಬೆಳಗ್ಗೆ ಆಂಧ್ರ ಪ್ರದೇಶದ ಗುಂಟೂರಿನ ತಮ್ಮ ನಿವಾಸದಲ್ಲಿನ ಬಾತ್ ರೂಮಿನಲ್ಲಿ ಕುಸಿದು ಬಿದ್ದಿದ್ದು,ಜಯಪ್ರಕಾಶ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮೊದಲೇ ಕೊನೆಯುಸಿರೆಳೆದಿದ್ದಾರೆ.
ಹಾಸ್ಯ ನಟನಾಗಿ ಮತ್ತು ಖಳ ನಟನಾಗಿ ತೆಲುಗು ಸಿನಿಪ್ರಿಯರನ್ನು ರಂಜಿಸಿದ್ದ ಜಯಪ್ರಕಾಶ್, ಕೊನೆಯದಾಗಿ ಮಹೇಶ್ ಬಾಬು ಅಭಿನಯದ ಸರಿಲೇರು ನೀಕೆವ್ವರು ಚಿತ್ರದಲ್ಲಿ ಅಭಿನಯಿಸಿದ್ದಾರೆ.