
ದೊಡ್ಡಬಳ್ಳಾಪುರ: ಸೋಮವಾರ ರಾಜ್ಯ ಬಜೆಟ್ ಅಧಿವೇಶನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 2020-21ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ.

ಈ ಹಿನ್ನೆಲೆಯಲ್ಲಿ ಬಜೆಟ್ಟಿನಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ಅಭಿವೃದ್ಧಿ ಹೆಚ್ಚಿನ ಒತ್ತು ನೀಡುವಂತೆ ಶಾಸಕ ಟಿ.ವೆಂಕಟರಮಣಯ್ಯ, ಅಗತ್ಯ ಬೇಡಿಕೆಗಳ ಪ್ರಸ್ತಾವನೆ ಪತ್ರವನ್ನು ಮುಖ್ಯಮಂತ್ರಿ ಯಡಿಯೂರಪ್ಪರಿಗೆ ಸಲ್ಲಿಸಿದ್ದಾರೆ.
ಈ ಪ್ರಸ್ತಾವನೆ ಪತ್ರದಲ್ಲಿ ಇಲಾಖಾವಾರು ಬೇಡಿಕೆಗಳು ಈ ರೀತಿಯಲ್ಲಿವೆ.
1. ಪೌರಾಡಳಿತ ಮತ್ತು ಸ್ಥಳೀಯ ಸಂಸ್ಥೆಗಳ ಇಲಾಖೆ: ನಗರದಲ್ಲಿ ಕುಡಿಯುವ ನೀರಿನಲ್ಲಿ ಉಪ್ಪಿನ ಆಮಶ, ನೈಟ್ರೇಟ್ ಮತ್ತು ಪ್ಲೋರೈಡ್ ಅಂಶ ಹೆಚ್ಚಾಗಿರುವುದರಿಂದ ನಗರಕ್ಕೆ ಕಾವೇರಿ ನೀರು ಸಂಪರ್ಕ.
2. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ: ಜಿಲ್ಲಾಸ್ಪತ್ರೆಗೆ ಕ್ಯಾಬಿನೆಟ್ ಅನುಮತಿ.
3. ನಗರಾಭಿವೃದ್ಧಿ ಇಲಾಖೆ: ತ್ಯಾಜ್ಯ ವಿಲೇವಾರಿ ಘಟಕಗಳ ವ್ಯಾಪ್ತಿಯಲ್ಲಿನ ಗ್ರಾಮಗಳಲ್ಲಿ ಮೂಲಭೂತ ಸೌಲಭ್ಯಕ್ಕೆ ರೂ 60.00ಕೋಟಿ ಅನುಧಾನ.
4. ಉನ್ನತ ಶಿಕ್ಷಣ ಇಲಾಖೆ: ಸಾಸಲು ಹೋಬಳಿ ವಿದ್ಯಾರ್ಥಿಗಳು 70ಕಿಮಿ ಕಾಲೇಜಿಗೆ ಪ್ರಯಾಣಿಸುವುದನ್ನು ತಪ್ಪಿಸಲು, ಸಾಸಲು ಹೋಬಳಿಗೆ ಪದವಿ ಪೂರ್ವ ಕಾಲೇಜು ಸ್ಥಾಪನೆ.
5.ಕಂದಾಯ ಇಲಾಖೆ: ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿಗೆ ನೀವೇಶ ಮಂಜೂರು.
6. ಮೂಲಭೂತ ಸೌಕರ್ಯ ಅಭಿವೃದ್ಧಿ ಇಲಾಖೆ: ಬೆಂಗಳೂರು – ದೊಡ್ಡಬಳ್ಳಾಪುರ ಉಪನಗರ ನಡುವೆ ರೈಲ್ವೇ ಸಂಚಾರ ಆರಂಭಿಸುವುದು.
7. ಅರಣ್ಯ ಇಲಾಖೆ: ಜಾಲಗೆರೆ ಅರಣ್ಯ ಪ್ರದೇಶದಿಂದ ಎಸ್.ಎಸ್.ಘಾಟಿ ಬೆಟ್ಟದ ಪ್ರದೇಶವನ್ನು ವನ್ಯ ಜೀವಿ ತಾಣವೆಂದು ಘೋಷಿಸುವುದು.
8. ಯುವ ಸಬಲೀಕರಣ ಜಾಗೂ ಕ್ರೀಡಾ ಇಲಾಖೆ: ದೊಡ್ಡಬೆಳವಂಗಲ ಮತ್ತು ಮದುರೆ ಎರಡು ಹೋಬಳಿಗೆ ಒಂದು ಸ್ಥಳದಲ್ಲಿ 5 ಎಕರೆ ವಿಸ್ತೀರ್ಣದ ಕ್ರೀಡಾಂಗಣ.
9.ಯುವ ಸಬಲೀಕರಣ ಜಾಗೂ ಕ್ರೀಡಾ ಇಲಾಖೆ: ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಒಳಾಂಗಣ ನಿರ್ಮಾಣ.
10. ಯುವ ಸಬಲೀಕರಣ ಜಾಗೂ ಕ್ರೀಡಾ ಇಲಾಖೆ: ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಜಿಲ್ಲಾ ಕ್ರೀಡಾಂಗಣ ನಿರ್ಮಾಣಕ್ಕೆ ರೂ5.00 ಕೋಟಿ ಮಂಜೂರು.
11.ಪ್ರವಾಸೋದ್ಯಮ ಇಲಾಖೆ: ಹುಲುಕುಡಿ ಬೆಟ್ಟವನ್ನು ಪ್ರವಾಸಿ ತಾಣವಾಗಿಸುವುದು.
12. ವಸತಿ ಇಲಾಖೆ: ವಸತಿ – ನಿವೇಶನ ರಹಿತರಿಗೆ ದೊಡ್ಡಬಳ್ಳಾಪುರ ನಗರದಲ್ಲಿ ಜಿ+2 ಮಾದರಿ ಯೋಜನೆಯಡಿ ವಸತಿ ನಿರ್ಮಿಸಲು ನಗರಸಭೆಯ 31ವಾರ್ಡ್ ಗಳ ವ್ಯಾಪ್ತಿಗೆ 5000ಮನೆಗಳ ಮಂಜೂರು.
13. ಕಾರ್ಮಿಕ ಇಲಾಖೆ: ನೇಕಾರ ಕೂಲಿ ಕಾರ್ಮಿಕರನ್ನು ಅಸಂಘಟಿತ ಕೂಲಿ ಕಾರ್ಮಿಕರ ವಲಯಕ್ಕೆ ಸೇರಿಸುವುದು.
14. ಸಹಕಾರ ಇಲಾಖೆ: ಎಪಿಎಂಸಿಯಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಲು ರೂ.25.00 ಕೋಟಿ ಮಂಜೂರು.
15. ನಗರಾಭಿವೃದ್ದಿ ಇಲಾಖೆ: ನಗರಸಭೆ ವ್ಯಾಪ್ತಿಯಲ್ಲಿ ರಸ್ತೆ ಅಗಲಿಕರಣಕ್ಕೆ ಸಾರ್ವಜನಿಕರಿಗೆ ಪರಿಹಾರ ಮತ್ತು ರಸ್ತೆ ಅಭಿವೃದ್ಧಿಗೆ ರೂ.500.00ಕೋಟಿ ಮಂಜೂರು.
16. ಉನ್ನತ ಶಿಕ್ಷಣ ಇಲಾಖೆ: ದೊಡ್ಡಬಳ್ಳಾಪುರ ತಾಲೂಕಿನಲ್ಲಿ ವೈದ್ಯಕೀಯ ಮಹಾವಿದ್ಯಾಲಯ, ತಾಂತ್ರಿಕ ಮಹಾವಿದ್ಯಾಲಯ, ಪಾಲಿಟೆಕ್ನಿಕ್ ಕಾಲೇಜು ಸ್ಥಾಪನೆ.
17. ಗ್ರಾಮೀಣಾಭಿವೃದ್ಧಿ ಮತ್ತು ಪಂವಾಯತ್ ರಾಜ್ ಇಲಾಖೆ:: ಗ್ರಾಮೀಣ ಭಾಗಗಳ ರಸ್ತೆ ಅಭಿವೃದ್ಧಿಗೆ ರೂ.500.00ಕೋಟಿ ಮಂಜೂರು.
18. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ: ತಾಲೂಕಿನ ಪ್ರಾಥಮಿಕ ಶಾಲೆಗಳಲ್ಲಿ ಹೆಚ್ಚುವರಿ ಕಟ್ಟಡ ನಿರ್ಮಾಣ, ದುರಸ್ತಿ, ಶಿಥಿಲ ಕಟ್ಟಡಗಳ ತೆರವು, ಮೂಲಭೂತ ಸೌಕರ್ಯಗಳಿಗಾಗಿ ರೂ 25.00ಕೋಟಿ ಮಂಜೂರು.
19. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಆಡಳಿತದ ಸ್ವಂತ ಕಚೇರಿ ನಿರ್ಮಿಸಲು ರೂ.1.00ಕೋಟಿ ಮಂಜೂರು.
20. ಕೈಮಗ್ಗ ಮತ್ತು ಜವಳಿ ಇಲಾಖೆ: ನೇಕಾರರ ಸಮುದಾಯ ಭವನ ಮತ್ತು ನೇಕಾರರ ಉತ್ಪನ್ನ ಮಾರಾಟ ಮಳಿಗೆ ಕಟ್ಟಡ ನಿರ್ಮಾಣಕ್ಕೆ ರೂ.2.00ಕೋಟಿ ಮಂಜೂರು.
21. ಸಣ್ಣ ನೀರಾವರಿ ಇಲಾಖೆ: ಸಣ್ಣ ನೀರಾವರಿ ಕೆರೆಗಳ ಅಭಿವೃದ್ಧಿಗೆ ರೂ.200.00 ಕೋಟಿ ಮಂಜೂರು.
22. ಲೋಕೋಪಯೋಗಿ ಇಲಾಖೆ: ರೈಲ್ವೇ ಸ್ಟೇಷನ್ ಬಳಿ ಅಪಘಾತ ಹಾಗೂ ವಾಹನ ದಟ್ಟಣೆಯನ್ನು ಕಡಿಮೆ ಮಾಡಲು ಕೆಳ ಸೇತುವೆ ನಿರ್ಮಾಣ ಸೇರಿದಂತೆ 22 ಬೇಡಿಕೆಗಳನ್ನು ಶಾಸಕರು ಸಲ್ಲಿಸಿದ್ದಾರೆ.
ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ, ಯಾವುದೇ ಕ್ಷೇತ್ರಕ್ಕು ಪಕ್ಷ ಬೇಧ ಮಾಡದೆ, ಹೆಚ್ಚಿನ ಅನುಧಾನ ನೀಡುವುದಾಗಿ ಹೇಳಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ದೊಡ್ಡಬಳ್ಳಾಪುರ ತಾಲೂಕಿನ ಅಭಿವೃದ್ಧಿಗೆ ಅಗತ್ಯವಾಗಿರುವ ಪ್ತಸ್ತಾವನೆ ಪಟ್ಟಿಯಲ್ಲಿನ ಬೇಡಿಕೆಗಳನ್ನು ಎಷ್ಟು ಈಡೇರಿಸುವರು ಕಾದು ನೋಡಬೇಕಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..

