
ದೊಡ್ಡಬಳ್ಳಾಪುರ: ತಾಲ್ಲೂಕಿನ ಜಿಂಕೆಬಚ್ಚಹಳ್ಳಿ ಸಮೀಪ ಶನಿವಾರ ಬೆಂಕಿಗೆ ಆಹುತಿಯಾಗಿದ್ದ ಕಾರಿನಲ್ಲಿ (Car) ಅನುಮಾನಸ್ಪದ ರೀತಿಯಲ್ಲಿ ಸುಟ್ಟು ಹೋಗಿದ್ದ ಮಹಿಳೆಯ (Woman) ಅಸ್ಥಿಪಂಜರ ಪತ್ತೆಯಾಗಿದ್ದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ವ್ಯಕ್ತಿ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ.
ಮಾರಸಂದ್ರದ ನಿವಾಸಿ ರಾಮಾಂಜಿನಪ್ಪ (46 ವರ್ಷ) ಮೃತರು. ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿ ಬಳಿ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ.
ಇನ್ನೂ ಕಾರಿನಲ್ಲಿ ಬೆಂಕಿಗೆ ಸುಟ್ಟು ಭಸ್ಮವಾದ ಮೃತ ಮಹಿಳೆಯನ್ನು ದೇವನಹಳ್ಳಿ ತಾಲೂಕಿನ ಸುಜಾತ (35 ವರ್ಷ) ಎಂದು ಗುರುತಿಸಲಾಗಿದೆ.
ಗೌರಿಬಿದನೂರಿನ ತಾಯಿಯ ಮನೆಯಿಂದ ಗಂಡನ ಮನೆಗೆಂದು ತೆರಳಿದ್ದ ಸುಜಾತ, ಶನಿವಾರ ಜಿಂಬೆಬಚ್ಚಹಳ್ಳಿ ಸಮೀಪದ ನಿರ್ಜನ ಪ್ರದೇಶದಲ್ಲಿ ಉಂಟಾದ ಅಗ್ನಿ ಅವಘಡದಲ್ಲಿ ಕಾರಿನಲ್ಲಿಯೇ ಸುಟ್ಟು ಭಸ್ಮವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ವಿವರ
ಶನಿವಾರ ಕುಟುಂಬದವರಿಗೆ ಆರೋಗ್ಯ ಸರಿ ಇಲ್ಲ ಎಂದು ಪಕ್ಕದ ಮನೆಯ ಸುರೇಶ್ ಅವರಿಂದ ರಾಮಾಂಜಿನಪ್ಪ ಕಾರು ಪಡೆದುಕೊಂಡು ಬಂದಿದ್ದರು. ನಂತರ ಕಾರು ಬೆಂಕಿಗೆ ಆಹುತಿಯಾಗಿದೆ. ಕಾರಿನಲ್ಲಿ ಮಹಿಳೆಯ ಅಸ್ಥಿಪಂಜರ ಪತ್ತೆಯಾಗಿತ್ತು.
ಈ ಸಂಬಂಧ ಗ್ರಾಮಾಂತರ ಠಾಣೆ ಪೊಲೀಸರು ಕಾರಿನ ಮಾಲೀಕ ಸುರೇಶ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರ ನಡೆಸಿದ್ದರು.
ದೊಡ್ಡಬಳ್ಳಾಪುರ: ನಿರ್ಜನ ಪ್ರದೇಶದಲ್ಲಿ ಹೊತ್ತಿ ಉರಿದ ಕಾರು.. ಗೃಹಿಣಿ ಭಸ್ಮ..! pic.twitter.com/F49YiXQ3WF
— Harithalekhani (@harithalekhani) May 2, 2026
ಕಾರು ಬೆಂಕಿಗೆ ಆಹುತಿಯಾದ ಸ್ಥಳದ ಸಮೀಪ ಇರುವ ನೀಲಗಿರಿ ತೋಪಿನಲ್ಲಿ ಮೊಬೈಲ್ ಫೋನ್ ಮತ್ತು ಸ್ವಲ್ಪ ದೂರದಲ್ಲಿ ಅಂಗಿ ಪತ್ತೆಯಾಗಿತ್ತು.
ದೊಡ್ಡಬಳ್ಳಾಪುರ: LPG ಬೆಲೆ ಏರಿಕೆ ಬಗ್ಗೆ ಕೇಳ್ತಿದ್ದಂತೆ ಕಾಲ್ಕಿತ್ತ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ದೊಡ್ಡಬಳ್ಳಾಪುರ: ವಿವಿಧ ರಾಜ್ಯಗಳ ಚುನಾವಣೆಗಳು ಮುಗಿಯುತ್ತಿದ್ದಂತೆ ವಾಣಿಜ್ಯ ಎಲ್ಪಿಜಿ (LPG) ಸಿಲಿಂಡರ್ಗಳ ಬೆಲೆಯನ್ನು ಏಕಾಏಕಿ ರೂ.993 ಹೆಚ್ಚಳ ಮಾಡಿರುವ ಕುರಿತು ದೇಶಾದ್ಯಂತ ಆಕ್ರೋಶ ತೀವ್ರಗೊಂಡಿವೆ. ಈ ಕುರಿತು ಪ್ರತಿಕ್ರಿಯೆ ಕೇಳುತ್ತಿದ್ದಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಯಾವುದೇ ಪ್ರತಿಕ್ರಿಯೆ ನೀಡದೆ ಸ್ಥಳದಿಂದ ಪಲಾಯನಗೈದ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.
ಇಎಸ್ ಐ ಆಸ್ಪತ್ರೆ ಉದ್ಘಾಟನೆಗೆ ಆಗಮಿಸಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು, ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯಲ್ಲಿ ಬಿಜೆಪಿ ಯ ಡಿಎನ್ ಜೀವರಾಜ್ ಗೆಲುವಿನ ಕುರಿತಂತೆ ಪ್ರತಿಕ್ರಿಯೆ ನೀಡಿದರು.
ಕಾಂಗ್ರೆಸ್ ಗೆ 135 ಸೀಟು ಹೇಗೆ ಬಂದಿದೆ ಅಂತ ಎಲ್ಲರಿಗೂ ಗೊತ್ತಿದೆ. 135 ಸೀಟುಗಳನ್ನು ಇದೇ ತರ ಫ್ರಾಡ್ ಮಾಡಿ ಮತಗಳ್ಳತನ ಮಾಡಿ ಗೆದ್ದಿದ್ದೀರ. ನಿಮ್ಮ ಯೋಗ್ಯತೆ ಏನು ಎಂದು ರಾಜ್ಯದ ಜನತೆಗೆ ಗೊತ್ತಿದೆ.
ಇವಿಎಂ ಬಗ್ಗೆ ಮಾತನಾಡುವ ಕಾಂಗ್ರೆಸ್ ಗೆ ಯಾವ ನೈತಿಕ ಹಕ್ಕಿದೆ. ಇವಿಎಂ ಕರೆಕ್ಟ್ ಆಗಿತ್ತು ಆದರೆ ಬ್ಯಾಲೆಟ್ ಲ್ಲಿ ಓಟ್ ಬಂದಿತ್ತು, ಅಂತಹ ಬ್ಯಾಲಟ್ಟನ್ನೇ ಕಳ್ಳತನ ಮಾಡಿತ್ತು ಕಾಂಗ್ರೆಸ್. ಕಳೆದ ಮೂರು ವರ್ಷಗಳಿಂದ ಜೀವರಾಜ್ ನಿರಂತರ ಹೋರಾಟ ಮಾಡುತ್ತಿದ್ದರು.
ನಾವು ಕೂಡ ಅವರಿಗೆ ನೈತಿಕ ಬೆಂಬಲ ಕೊಟ್ಟಿದ್ದೆವು.. ನಾನು ಕೂಡ ಆ ಬಾಗದ ಸಂಸದನಾಗಿದ್ದಾಗ ಬೆಂಬಲ ಕೊಟ್ಟಿದ್ದೆ. ಕೊನೆಗೂ ಜೀವರಾಜ್ ಗೆದ್ದಿದ್ದಾರೆ.
ನೆನ್ನೆಯೇ ಕಾಂಗ್ರೆಸ್ ನವರು ಗೆದ್ದಿದ್ದಾರೆ ಅಂತ ಪಟಾಕಿ ಹೊಡೆದಿದ್ದರು. ಆದರೆ ಕೊನೆಗೂ ಸತ್ಯಕ್ಕೆ ಗೆಲುವಾಗಿದೆ.ಕಾಂಗ್ರೆಸ್ ನವರಿಗೆ ಬ್ಯಾಲೆಟ್ ಪೇಪರ್ ಇದ್ರೇನೇ ಕಳ್ಳತನ ಮಾಡಲಿ ಕ್ಕೆ ಸಾದ್ಯ ಆಗೋದು ಎಂದರು.
LPG ಬೆಲೆ ಏರಿಕೆ ಬಗ್ಗೆ ಕೇಳ್ತಿದ್ದಂತೆ ಕಾಲ್ಕಿತ್ತ ಕೇಂದ್ರ ಸಚಿವೆ
ದೊಡ್ಡಬಳ್ಳಾಪುರ: LPG ಬೆಲೆ ಏರಿಕೆ ಬಗ್ಗೆ ಕೇಳ್ತಿದ್ದಂತೆ ಕಾಲ್ಕಿತ್ತ ಕೇಂದ್ರ ಸಚಿವೆ pic.twitter.com/1tW9ASsH3g
— Harithalekhani (@harithalekhani) May 3, 2026
ಇನ್ನೂ LPG ಬೆಲೆ ಏರಿಕೆ ಬಗ್ಗೆ ಕೇಳ್ತಿದ್ದಂತೆ ಕಾಲ್ಕಿತ್ತ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಪ್ರತಿಕ್ರಿಯೆ ನೀಡದೆ ಸ್ಮೈಲ್ ಕೊಟ್ಟು ಎಸ್ಕೇಫ್ ಆದ್ರೂ, ಇದಕ್ಕೂ ಮುನ್ನಾ ಶುಕ್ರವಾರ LPG ದರ ಏರಿಕೆ ಬಗ್ಗೆ ಪ್ರಶ್ನೆ ಮಾಡಿದರೆ, ಮಹಿಳಾ ಮೀಸಲಾಗಿರುವ ಮೀಸಲಾತಿ ತಿದ್ದುಪಡಿ ವಿಧೇಯಕದ ಕುರಿತಂತೆ ಉತ್ತರ ನೀಡಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ಗೆ ಒಳಗಾಗಿದ್ದರು.

