ದೊಡ್ಡಬಳ್ಳಾಪುರ: ನಗರದ ಪ್ರತಿಷ್ಟಿತ ಸರಸ್ವತಿ ಶಾಲೆಯು (Saraswati School) 2025- 26ನೇ ಸಾಲಿನ ಎಸ್ಎಸ್ಎಲ್‌ಸಿ (SSLC) ವಾರ್ಷಿಕ ಪರೀಕ್ಷೆಯಲ್ಲಿ ಶೇ.100 ರಷ್ಟು ಫಲಿತಾಂಶ ಪಡೆದಿದೆ.

ಪರೀಕ್ಷೆಗೆ ಹಾಜರಾಗಿದ್ದ ಶಾಲೆಯ 54 ವಿದ್ಯಾರ್ಥಿಗಳಲ್ಲಿ ಎಲ್ಲಾ 54 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ, ಶಾಲೆ ಶೇ.100 ಫಲಿತಾಂಶ ದೊರಕಿಸಿದ್ದಾರೆ.

ಯಶಸ್ವಿನಿ 625ಕ್ಕೆ.608 ಅಂಕ ಪಡೆಯುವುದರೊಂದಿಗೆ ಶಾಲೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿ.
ಉಳಿದಂತೆ ಪಾವನ. ಸಿ 625ಕ್ಕೆ 606 ಪಡೆಯುವುದರೊಂದಿಗೆ ಎರಡನೇ ಸ್ಥಾನ ಗಳಿಸಿಕೊಂಡಿರುತ್ತಾರೆ.
ನಂದಿನಿ ಶ್ರೀ 625ಕ್ಕೆ 604 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ.
ಸರಸ್ವತಿ ಶಾಲೆಯ 14 ಮಂದಿ ಬಾಲಕರು 40 ಮಂದಿ ವಿದ್ಯಾರ್ಥಿನಿಯರಲ್ಲಿ 03 ವಿದ್ಯಾರ್ಥಿಗಳು, ಹಾಗೂ 27 ವಿದ್ಯಾರ್ಥಿನಿಯರು ಡಿಸ್ಟಿಂಕ್ಷನ್‌ನೊಂದಿಗೆ ಉತ್ತೀರ್ಣರಾಗಿದ್ದು, ಉಳಿದೆಲ್ಲಾ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ.
ಈ ಫಲಿತಾಂಶದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಶಾಲಾ ಸಂಸ್ಥಾಪಕ ಎ. ಸುಬ್ರಹ್ಮಣ್ಯ ಅವರು ವಿದ್ಯಾರ್ಥಿಗಳನ್ನು ಮತ್ತು ಶಾಲಾ ಸಿಬ್ಬಂದಿ ವರ್ಗವನ್ನು ಅಭಿನಂದಿಸಿದ್ದಾರೆ.
