
ಬೆಂಗಳೂರು: ಝಾಂಬಿ ಡ್ರಗ್ಸ್ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಮಾಹಿತಿಯ ವಿಡಿಯೊ ಶೇರ್ ಮಾಡಿದ್ದ ನಟ ದುನಿಯಾ ವಿಜಯ್‌ಗೆ (Duniya Vijay) ಸಂಕಷ್ಟ ಎದುರಾಗಿದೆ.

ಅದು ಸುಳ್ಳು ವಿಡಿಯೋ ಎಂದು ಅರಿವಾದ ಬಳಿಕ ದುನಿಯಾ ವಿಜಯ್ ವಿಡಿಯೊ ಡಿಲೀಟ್ ಮಾಡಿದ್ದರು. ಆದರೆ ಇದೀಗ ಬಾಗಲೂರು ಪೊಲೀಸರು ಡಿಲೀಟ್ ಆಗಿದ್ದ ವಿಡಿಯೊ ರಿಟ್ರೀವ್‌ಗಾಗಿ ಇನ್‌ಸ್ಟಾಗ್ರಾಂ ಆ್ಯಪ್ ಗೆ ಪತ್ರ ಬರೆದಿದ್ದಾರೆ ಎಂದು ವರದಿಯಾಗಿದೆ.

ಇದೇ ವಿಡಿಯೊವನ್ನು ಬೆಂಗಳೂರಿನ ಮಾಜಿ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಕೂಡ ದುನಿಯಾ ವಿಜಯ್ ರೀತಿಯಲ್ಲಿ ವೈರಲ್ ವಿಡಿಯೋ ಶೇರ್ ಮಾಡಿ, ಬಳಿಕ ಡಿಲೀಟ್ ಮಾಡಿದ್ದರು. ಅವರಿಗೂ ಈಗ ಸಂಕಷ್ಟ ಎದುರಾಗಲಿದೆ.
ಝಾಂಬಿ ಡ್ರಗ್ಸ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದ ವಿಡಿಯೋ ಶೇರ್ ಮಾಡಿದ್ದ ವಿಡಿಯೋ ರಿಟ್ರೀವ್ ಮಾಡಿಕೊಡುವಂತೆ ಬಾಗಲೂರು ಪೊಲೀಸರು ಇನ್ಸಾಗ್ರಾಂ ಸಂಸ್ಥೆಗೆ ಪತ್ರ ಬರೆದಿದ್ದಾರೆ.
ವಿಡಿಯೊದ ಬಗ್ಗೆ ಪೂರ್ವಪರ ತಿಳಿಯದೇ ಸುಳ್ಳು ಮಾಹಿತಿ ಇರುವ ವಿಡಿಯೊ ಶೇರ್ ಮಾಡಿರುವ ಬಗ್ಗೆ ಸ್ಪಷ್ಟನೆ ಕೊಡಲು ಈವರೆಗೆ ಒಟ್ಟು 15 ಮಂದಿಗೆ ನೋಟಿಸ್ ಕೊಡಲಾಗಿದೆ. ಅದೇ ರೀತಿ ನಟ ದುನಿಯಾ ವಿಜಯ್ ಹಾಗೂ ಮಾಜಿ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಕೂಡ ಶೇರ್ ಮಾಡಿದ್ದು, ವಿಡಿಯೋ ರಿಟೀವ್ ಆಗುತ್ತಿದ್ದಂತೆ ನೋಟಿಸ್ ಕೊಡಲು ಬಾಗಲೂರು ಪೊಲೀಸರು ಚಿಂತನೆ ನಡೆಸಿದ್ದಾರೆ.
ಒಂದು ವೇಳೆ ಝಾಂಬಿ ಡ್ರಗ್ಸ್ ವೈರಲ್ ವಿಡಿಯೋ ರಿಟ್ರಿವ್ ಆಗಿ ಬಂದರೆ ನಟ ದುನಿಯಾ ವಿಜಯ್, ಮಾಜಿ ಐಪಿಎಸ್ ಭಾಸ್ಕರ್ ರಾವ್ ಇಬ್ಬರೂ ವಿಚಾರಣೆ ಎದುರಿಸಬೇಕಾದ ಅನಿವಾರ್ಯತೆ ಎದುರಾಗಲಿದೆ.
ಮಾಹಿತಿಯೇ ಇಲ್ಲದೇ ವಿಡಿಯೋ ಅಪ್‌ಲೋಡ್ ಮಾಡಿದ್ದೇಕೆ ಎಂಬ ಬಗ್ಗೆ ಇಬ್ಬರನ್ನು ಪ್ರಶ್ನೆ ಮಾಡಲಿದ್ದಾರೆ.
ಇನ್ನು ವೈರಲ್ ವಿಡಿಯೊದಲ್ಲಿ ವ್ಯಕ್ತಿಯೊಬ್ಬ ನಿಂತಲ್ಲೇ ನಿಂತು ವಿಚಿತ್ರವಾಗಿ ವರ್ತಿಸುತ್ತಿರುವುದು ಕಂಡುಬಂದಿತ್ತು. ವಿಡಿಯೋ ವೈರಲ್ ಬಳಿಕ ಬೆಂಗಳೂರಿನಲ್ಲಿ ಇಂತಹ ಯಾವುದೇ ಝಾಂಬಿ ಡ್ರಗ್ಸ್ ಯಾಗಿಲ್ಲ. ಇದು ಕೇವಲ ವದಂತಿ ಎಂದು ಪೊಲೀಸ್ ಆಯುಕ್ತರು ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದರು.
ಆ ಬಳಿಕ ಸುಳ್ಳು ವಿಡಿಯೋವನ್ನು ಸಾಮಾಜಿಕ 250 ತಾಣಗಳಲ್ಲಿ ಹಂಚಿಕೊಂಡವರ ವಿರುದ್ಧ ಪ್ರಕರಣ ದಾಖಲಿಸಿ ಪೊಲೀಸರು ತನಿಖೆಗಿಳಿದಿದ್ದಾರೆಂದು ವರದಿಯಾಗಿದೆ.
ದೊಡ್ಡಬಳ್ಳಾಪುರ: ಹಾಡಹಗಲೇ 2 ಮನೆ ಬೀಗ ಒಡೆದು ಒಡವೆ, ನಗದು ಕಳ್ಳತನ.. ಮಹಿಳೆಯ ಮಾಂಗಲ್ಯ ಸರ ಕಸಿದ ದುಷ್ಕರ್ಮಿಗಳು

ದೊಡ್ಡಬಳ್ಳಾಪುರ: ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ಮನೆ ಬೀಗ ಒಡೆದು, ಒಡವೆ, ನಗದು ( jewellery, cash) ಕಳ್ಳತನ ನಡೆಸಿರುವ ಪ್ರಕರಣಗಳು ವರದಿಯಾಗಿದ್ದು, ತಾಲೂಕಿನ ಜನರನ್ನು ಆತಂಕಕ್ಕೆದೂಡಿದೆ.
ಹೌದು ಸೋಮವಾರ ಎಸ್.ನಾಗೇನಹಳ್ಳಿ ಗ್ರಾಮದ ಬೊಮ್ಮರಾಜುರವರ ಮನೆಯಲ್ಲಿ ಯಾರೂ ಇಲ್ಲದನ್ನು ಗಮನಿಸಿರುವ ದುಷ್ಕರ್ಮಿಗಳು, ಮನೆಯಲ್ಲಿದ್ದ ಬೀರುಗಳನ್ನು ಹೊಡೆದು, ಚಿನ್ನಾಭರಣ ಮತ್ತು ಹಣ ದೋಚಿ ಪರಾರಿಯಾಗಿರುವ ಘಟನೆ ತಾಲೂಕಿನ ನಾಗೇನಹಳ್ಳಿಯಲ್ಲಿ ನಡೆದಿದೆ.
ಬೊಮ್ಮರಾಜು ಅವರ ಕೆಲಸದ ನಿಮಿತ್ತ ಹಾಗೂ ಮೆನೆಯವರು ತೋಟದ ಕೆಲಸಕ್ಕೆ ಹೋಗಿರುವಾಗ, ಮನೆಯ ಬಾಗಿಲು ಮುರಿದು ಒಳ ನುಗ್ಗಿ, ಬೀರುವಿನಲ್ಲಿದ್ದ ಚಿನ್ನಾಭರಣಗಳು ಹಾಗೂ 1.39 ಲಕ್ಷ ರೂ ನಗದು ದೋಚಿ ಪರಾರಿಯಾಗಿದ್ದಾರೆ.
ಆಲಹಳ್ಳಿ ಮನೆ ಕಳವು..!
ಮತ್ತೊಂದು ಪ್ರಕರಣದಲ್ಲಿ ಮಂಗಳವಾರ ಆಲಹಳ್ಳಿಯ ಆಶಾ ನಾಗೇಶ್ ಎನ್ನುವವರು ಜಮೀನಿಗೆ ತೆರಳಿದ್ದ ವೇಳೆ ಮನೆ ಬೀಗ ಮುರಿದು ಮನೆ ನುಗ್ಗಿರುವ ದುಷ್ಕರ್ಮಿಗಳು, ಒಡವೆ, ನಗದು ದೋಚಿ ಪರಾರಿಯಾಗಿದ್ದಾರೆ.
ಈ ವೇಳೆ ಸುಮಾರು ಒಂದುವರೆ ಲಕ್ಷ ಮೌಲ್ಯದ, ಚಿನ್ನ, ಬೆಳ್ಳಿ ಹಾಗೂ ನಗದನ್ನು ದೋಚಿದ್ದಾರೆ.
ಚಿನ್ನದ ಮಾಂಗಲ್ಯ ಸರ ದೋಚಿದ ದುಷ್ಕರ್ಮಿಗಳು
ಇನ್ನೊಂದು ಪ್ರಕರಣದಲ್ಲಿ ವಾಕಿಂಗ್ ಗೆಂದು ತೆರಳಿದ್ದ ಮಹಿಳೆಯ ಹಿಂಬಾಲಿಸಿದ ದುಷ್ಕರ್ಮಿ, ಸುಮಾರು 69 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಕಸಿದು ಪರಾರಿಯಾಗಿರುವ ಘಟನೆ ತಾಲೂಕಿನ ಕೊನಘಟ್ಟದಲ್ಲಿ ಮಂಗಳವಾರ ಮುಂಜಾನೆ ನಡೆದಿದೆ.
ಕೊನಘಟ್ಟ ಗ್ರಾಮದ ಗಾಯತ್ರಿ ಎನ್ನುವ ಮಹಿಳೆ ವಾಕಿಂಗ್‌ಗೆಂದು ಇಂದು ಬೆಳಗ್ಗೆ ತೆರಳುಚ ವೇಳೆ ಹಿಂಬಾಲಿಸಿಕೊಂಡು ಬಂದ ದುಷ್ಕರ್ಮಿ, ಮಾಂಗಲ್ಯ ಸರ ಕಸಿದು, ಮತ್ತೋರ್ವ ತಂದಿದ್ದ ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತಂತೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
