ಟೋಕಿಯೊ: ಸೋಮವಾರ ಸಂಜೆ ಜಪಾನ್‌ನಲ್ಲಿ (Japan) ಭೂಕಂಪವಾಗಿದ್ದು (earthquake), ರಿಕ್ಟರ್ ಮಾಪಕದಲ್ಲಿ 7.5 ತೀವ್ರತೆಯ ಕಂಪನ ದಾಖಲಾಗಿದೆ. ಕಡಲಿನಾಳದಲ್ಲಿ ಕಂಪನದ ಕೇಂದ್ರಬಿಂದುವಿದ್ದ ಕಾರಣ ದೇಶದ ಈಶಾನ್ಯ ಭಾಗದಲ್ಲಿ ಸುನಾಮಿ ಸೃಷ್ಟಿಯ ಅಪಾಯ ಎದುರಾಗಿದೆ.

A tsunami is now striking north-eastern Japan after a 7.4 magnitude earthquake. pic.twitter.com/766pVViYIU
— Osint World (@OsiOsint1) April 20, 2026
ಸ್ಥಳೀಯ ಕಾಲಮಾನ ಸೋಮವಾರ ಸಂಜೆ 4.53ಕ್ಕೆ ಮೆರಿಡಿಯನ್ ಎಚ್ಚರಿಕೆ

ಸ್ಥಳೀಯ ಕಾಲಮಾನ ಸೋಮವಾರ ಸಂಜೆ 4.53 ( 7.53 ಟೈಮ್) ಸಮುದ್ರದಾ ಳದಲ್ಲಿ ಭೂಕಂಪವಾಗಿದೆ. ಇವಾಟೆ ಪ್ರದೇಶದ ಕರಾವಳಿಯ ತೀರದಿಂದ 10 ಕಂಪನದ ಕೇಂದ್ರವಿತ್ತು ಎಂದು ಗುರುತಿಸಲಾಗಿದೆ.
ಕಿಲೋಮೀಟರ್ ದೂರದಲ್ಲಿನ ಆಳ ಸಮುದ್ರದಲ್ಲಿ ದ್ವೀಪ ದೇಶ ಜಪಾನ್‌ನ ಈಶಾನ್ಯ ಭಾಗದ ಕರಾವಳಿ ಯಲ್ಲಿ, ಮಿಯಾಕೊಗೆ ಸಮೀಪದ ಪೆಸಿಫಿಕ್ ಮಹಾ ಸಾಗರದ ಆಳದಲ್ಲಿ ಭೂಮಿ ಬಲವಾಗಿ ಕಂಪಿಸಿದೆ. ಹೊನ್ನು ದ್ವೀಪದಾದ್ಯಂತ ಕಂಪನ ಉಂಟಾಗಿದೆ.
7.4 magnitude earthquake just stroke Japan… Possible Tsunami.
— Stanizman (@stanizman) April 20, 2026
Japan is sitting on the most fragile land. pic.twitter.com/CgG4gym8yv
ಸುನಾಮಿ ಎಚ್ಚರಿಕೆ: ಕಡಲಿನ ಆಳದಲ್ಲಿ ಭಾರೀ ಪ್ರಮಾಣದಲ್ಲಿ ಭೂಮಿ ಕಂಪಿಸಿರುವುದರಿಂದ ಜಪಾನ್‌ನ ಕಡಲತಡಿಯಲ್ಲಿ ಸುನಾಮಿ ಉಂಟಾಗುವ ಸಾಧ್ಯತೆ ಇದೆ. ಮುಖ್ಯವಾಗಿ ಜಪಾನ್‌ನ ಉತ್ತರ ಭಾಗದ ಇವಾಟೆ, ಅಮೋರಿ ಮತ್ತು ಹೊಕೈಡೊಗೆ ಸುನಾಮಿ ಅಪ್ಪಳಿಸುವ ಸಾಧ್ಯತೆ ಇದೆ. ಏನಿಲ್ಲ ವೆಂದರೂ 10 ಅಡಿಗಳೆಷ್ಟು ಎತ್ತರದ ಅಲೆಗಳು ಈಶಾನ್ಯ ಭಾಗದ ಕರಾವಳಿಯನ್ನು ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹವಾಮಾನ ಮತ್ತು ಭೂಕಂಪನ ಇಲಾಖೆ ಎಚ್ಚರಿಕೆ ನೀಡಿದೆ.
BREAKING
— @Moini (@moini_565) April 20, 2026
7.4 magnitude earthquake strikes Japan
Major tsunami warning issued
Take this seriously—move to higher ground NOW.
Share this to spread awareness.#DMKWinningChennai #LahoriChuran #MIvsGT#Japan #Earthquake pic.twitter.com/dG18VNNEdl
ಕರಾವಳಿ ಪ್ರದೇಶಗಳಿಂದ ಜನರು ಸ್ಥಳಾಂತರಗೊಳ್ಳುವಂತೆ ಜಪಾನ್ ಹವಾಮಾನ ಮುನ್ಸೂಚನಾ ಸಂಸ್ಥೆಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ರಕ್ಕಸ ಗಾತ್ರದ (ಕನಿಷ್ಠ 10 ಅಡಿಗಳಷ್ಟು ಈ ಎತ್ತರ) ಅಲೆಗಳು ಕರಾವಳಿ ಭಾಗದಲ್ಲಿ ಕಾಣಿಸಿಕೊಳ್ಳಲಿರುವ ಕಾರಣ ಆದಷ್ಟೂ ಕರಾವಳಿ ಭಾಗದಿಂದ ದೂರ ಸುರಕಿತ ಹೋಗುವಂತೆ ಕಡಲತಡಿಯ ನಿವಾಸಿಗಳನ್ನು ಒತ್ತಾಯಿಸಿದ್ದಾರೆ.
