ದಿನ ಭವಿಷ್ಯ: ಈ ರಾಶಿಯವರು ಮಾತಿನ ಚಕಮಕಿ ನಡೆಯಬಹುದು. ಪರಿಸ್ಥಿತಿಯನ್ನು ಉತ್ತವಾಗಿ ನಿಭಾಯಿಸಿ

Astrology: Think before spending money

Astrology: ಬುಧವಾರ, ಏಪ್ರಿಲ್ 22, 2026, ದೈನಂದಿನ ರಾಶಿ ಭವಿಷ್ಯ

ಮೇಷ ರಾಶಿ

ರಸ್ತೆಯಲ್ಲಿ ಪ್ರಯಾಣಿಸುವಾಗ ಸುರಕ್ಷತೆಯ ನಿಯಮವನ್ನು ಅನುಸರಿಸಿ. ಗೌರವದಿಂದ ಮಾತನಾಡಿಸುವುದು ತಾಳ್ಮೆಯಿಂದ ವರ್ತಿಸುವುದು ಒಳ್ಳೆಯದು. ನಿಮ್ಮ ಪ್ರೀತಿ ಪಾತ್ರರು ನಿಮ್ಮ ಕೆಲಸದಲ್ಲಿ ಸಹಾಯ ಮಾಡುತ್ತಾರೆ. ಒಂದು ಬಿಟ್ಟು ಹಲವಾರು ಕೆಲಸದ ಬಗ್ಗೆ ಯೋಚಿಸಿ. ಶ್ರಮ ವಹಿಸಿ ಕೆಲಸ ಮಾಡಿ. ಶೈಕ್ಷಣಿಕ ರಂಗಗಳಲ್ಲಿ ಉತ್ತಮ ದಿನವಾಗಿದೆ. (ಭಕ್ತಿಯಿಂದ ಶ್ರೀ ಗ್ರಾಮ ದೇವತೆ ದರ್ಶನ ಮಾಡಿ ಪ್ರಾರ್ಥನೆ ಮಾಡಿ ಒಳಿತಾಗುವುದು.)

ವೃಷಭ ರಾಶಿ

ಗ್ರಹಗಳ ಪ್ರಭಾವ ನಿಮ್ಮ ಸಂಬಂಧಗಳ ಮೇಲೆ ಪರಿಣಾಮ ಬೀರಬಹುದು. ನಿಮ್ಮ ಮೇಲೆ ನಿಮಗೆ ಆತ್ಮ ವಿಶ್ವಾಸವಿರಲಿ. ನೀವು ನಿಮ್ಮನ್ನು ನಂಬಿದರೆ, ಇತರರು ನಿಮ್ಮನ್ನು ಗಂಭೀರವಾಗಿ ಪರಿಗಣಿಸುವ ಸಾಧ್ಯತೆಯಿದೆ. (ಭಕ್ತಿಯಿಂದ ಶ್ರೀ ಬ್ರಾಹ್ಮೀ ದುರ್ಗಾ ಪರಮೇಶ್ವರಿ ಪ್ರಾರ್ಥನೆ ಮಾಡಿ ಶುಭವಾಗುವುದು.)

ಮಿಥುನ ರಾಶಿ

ನೀವು ಪಡೆದು ಕೊಳ್ಳುವ ಹೆಚ್ಚುವರಿ ಜ್ಞಾನವು ಇಂದು ಗೆಳೆಯರೊಂದಿಗೆ ವ್ಯವಹರಿಸಲು ಸಹಾಯ ಮಾಡುತ್ತದೆ. ಧಾರ್ಮಿಕ ಸ್ಥಳಕ್ಕೆ ಅಥವಾ ಸಂಬಂಧಿಕರಿಗೆ ಭೇಟಿ ನೀಡುವ ಸಾಧ್ಯತೆಯಿದೆ. ನೀವು ಪ್ರಯಾಣ ಮತ್ತು ಹಣವನ್ನು ಖರ್ಚು ಮಾಡುವ ಮನಸ್ಥಿತಿ ಯಲ್ಲಿರುತ್ತೀರಿ. (ಭಕ್ತಿಯಿಂದ ಶ್ರೀ ಮಾತಾ ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ ಒಳಿತಾಗುವುದು.)

ಕಟಕ ರಾಶಿ

ಹೆಚ್ಚು ಖರ್ಚು ಮಾಡುವುದ ನ್ನು ತಪ್ಪಿಸಿ. ಇದರಿಂದ ಹೆಚ್ಚು ಉಳಿಸಲು ಸಹಾಯ ಮಾಡಬಹುದು. ನಿಮ್ಮ ಸಾಧನೆ ಯಿಂದ ಪೋಷಕರನ್ನು ಹೆಮ್ಮೆ ಪಡಿಸುವ ಸಾಧ್ಯತೆಯಿದೆ. ನಿಮ್ಮ ಆಸ್ತಿಯು ಬಹುಶಃ ಶೀಘ್ರದಲ್ಲೇ ನಿಮ್ಮ ಸ್ವಾಧೀನಕ್ಕೆ ಮರಳಲಿದೆ. ಯಾರೊಬ್ಬರ ಕಾಮೆಂಟ್‌ಗಳು ನಿಮ್ಮನ್ನು ಸಾಮಾಜಿಕ ಮುಂಭಾಗದಲ್ಲಿ ಚಿಂತನಶೀಲ ಮನಸ್ಥಿತಿಯಲ್ಲಿ ಇರಿಸಬಹುದು. ಆರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಿ. (ಭಕ್ತಿಯಿಂದ ಶ್ರೀ ಲಲಿತಾ ಪರಮೇಶ್ವರಿ ಪ್ರಾರ್ಥನೆ ಮಾಡಿ ಶುಭವಾಗುವುದು.)

ಸಿಂಹ ರಾಶಿ

ಪರಿಸ್ಥಿತಿಯನ್ನು ಬುದ್ಧಿವಂತಿಕೆಯಿಂದ ನಿಭಾಯಿಸಿ. ನಿಮ್ಮ ಆಲೋಚನೆಗಳು ಉತ್ತಮ ವೆಂದು ನೀವು ಊಹಿಸಬಹುದು. ಆದರೆ, ಎಲ್ಲರೂ ನಿಮ್ಮ ಹಾಗೆಯೇ ಆಲೋಚಿಸುವುದಿಲ್ಲ ಎಂಬುದು ತಿಳಿದುಕೊಳ್ಳಿ. (ಭಕ್ತಿಯಿಂದ ಶ್ರೀ ಕನ್ನಿಕಾ ಪರಮೇಶ್ವರಿ ಪ್ರಾರ್ಥನೆ ಮಾಡಿ ಒಳಿತಾಗುವುದು.)

ಕನ್ಯಾ ರಾಶಿ

ನಿಮ್ಮ ಭಾವನೆಗಳು, ಆಲೋಚನೆಗಳನ್ನು ನಿಮ್ಮಲ್ಲೇ ಇಟ್ಟುಕೊಂಡಿದ್ದೀರಿ. ಪಾಲುದಾರ ರೊಂದಿಗೆ ವ್ಯವಹರಿಸಲು ಉತ್ತಮ ಮಾರ್ಗವೆಂದರೆ ಪ್ರತಿ ತಿರುವಿನಲ್ಲಿಯೂ ಅವರನ್ನು ಅಭಿನಂದಿಸುವುದು, ಉತ್ತಮ ವಿಚಾರಗಳನ್ನು ಹಂಚಿಕೊಳ್ಳಿ. ಇದರಿಂದ ಲಾಭ ನಿಮ್ಮ ಪಾಲಾಗಲಿದೆ. (ಭಕ್ತಿಯಿಂದ ಶ್ರೀ ಚೌಡೇಶ್ವರಿ ದೇವಿ ಪ್ರಾರ್ಥನೆ ಮಾಡಿ ಶುಭವಾಗುವುದು.)

ತುಲಾ ರಾಶಿ

ಉದ್ಯೋಗದ ಬಗ್ಗೆ ನಿಮ್ಮ ಆಲೋಚನೆಯು ಸ್ಪಷ್ಟವಾಗಿರಲಿ.ಕೆಲಸ ಬದಲಾಯಿಸಲು ಒಳ್ಳೆಯ ದಿನ. ಕೆಲಸದಲ್ಲಿ ನಿಮ್ಮ ಆಲೋಚನೆಗಳನ್ನು ಪೂರ್ಣಗೊಳಿಸಲು ನೀವು ಮೇಲಧಿಕಾರಿಗಳ ಸಂಪೂರ್ಣ ಬೆಂಬಲವನ್ನು ಹೊಂದಿರುತ್ತೀರಿ. (ಭಕ್ತಿಯಿಂದ ಶ್ರೀ ಕುಲದೇವತೆ ಪ್ರಾರ್ಥನೆ ಮಾಡಿ ಒಳಿತಾಗುವುದು.)

ವೃಶ್ಚಿಕ ರಾಶಿ

ಇತರರೊಂದಿಗೆ ಉತ್ತಮ ಸಂಪರ್ಕ ಸಾಧಿಸಲು, ಉತ್ತಮ ಸಂಬಂಧ ಹೊಂದಲು ಇದು ಅತ್ಯುತ್ತಮ ದಿನವಾಗಿದೆ. ಕಡೆಗಣಿಸಿದ ಜನರು ಸಹಾಯದ ಮೊರೆ ಇಟ್ಟಾಗ ಕೈ ಹಿಡಿಯಿರಿ. ಮಾಡಿದ ಸಹಾಯಕ್ಕೆ ಪ್ರತಿ ಸಹಾಯ ಬಯಸುವುದು ಒಳ್ಳೆಯದಲ್ಲ. ಅನಿರೀಕ್ಷತ ಕ್ಷಣಗಳು ಎದುರಾಗಬಹುದು. (ಭಕ್ತಿಯಿಂದ ನವಗ್ರಹ ದೇವತೆಗಳಿಗೆ ಪ್ರಾರ್ಥನೆ ಸಲ್ಲಿಸಿ ಶುಭ ವಾಗುವುದು.)

ಧನಸ್ಸು ರಾಶಿ

ಬದಲಾವಣೆಯ ದಿನವಿದು.ನಿಮಗೆ ಇಷ್ಟವಾದ ಕೆಲಸವನ್ನು ಮಾಡಿ.ದುಂದು ವೆಚ್ಚದಿಂದ ದೂರವಿರಿ. ಯೋಗ್ಯಕರವಾಗಿದೆಯೇ ಎಂಬುದನ್ನು ತಿಳಿದು ಭಾವನಾತ್ಮಕ ವಿಚಾರಗಳಿಗೆ ಹೆಚ್ಚು ಬೆಲೆ ನೀಡಿ. (ಭಕ್ತಿಯಿಂದ ಶ್ರೀ ಚಾಮುಂಡೇಶ್ವರಿ ದೇವಿ ಪ್ರಾರ್ಥನೆ ಮಾಡಿ ಒಳಿತಾಗುವುದು.)

ಮಕರ ರಾಶಿ

ನೀವು ಊಹಿಸು ವುದಕ್ಕಿಂತ ಹೆಚ್ಚಿನದನ್ನು ನೀವು ಮಾಡುತ್ತಿದ್ದೀರಿ. ಎಲ್ಲಕ್ಕಿಂತ ಉತ್ತಮವಾಗಿ, ಸಮಯ ನಿಮ್ಮ ಕಡೆ ಇದೆ, ಇತರರೊಂದಿಗೆ ಮಾತಿನ ಚಕಮಕಿ ನಡೆಯಬಹುದು. ಪರಿಸ್ಥಿತಿಯನ್ನು ಉತ್ತವಾಗಿ ನಿಭಾಯಿಸಿ. (ಭಕ್ತಿಯಿಂದ ಶ್ರೀ ಶಾರದಾ ಪರಮೇಶ್ವರಿ ಪ್ರಾರ್ಥನೆ ಮಾಡಿ ಶುಭವಾಗುವುದು.)

ಕುಂಭ ರಾಶಿ

ವೃತ್ತಿಪರ ವಿಷಯ ಗಳಿಗಿಂತ ವೈಯಕ್ತಿಕ ವಿಷಯಗಳು ಹೆಚ್ಚು ಮುಖ್ಯವಾಗಬಹುದು, ಆದ್ದರಿಂದ ನೀವು ಕೆಲಸದಲ್ಲಿದ್ದರೂ ಕೂಡ ಕುಟುಂಬಸ್ಥರಿಗೆ ನಿಮ್ಮ ಸಮಯವನ್ನು ನೀಡಿ. ಮಕ್ಕಳಿಗೆ ಹೊಸ ಅವಕಾಶಗಳು ಹುಡುಕಿ ಬರಬಹುದು. (ಭಕ್ತಿಯಿಂದ ಶ್ರೀ ಕುಲದೇವತೆ ಪ್ರಾರ್ಥನೆ ಮಾಡಿ ಶುಭವಾಗುವುದು.)

ಮೀನ ರಾಶಿ

ಪ್ರವಾಸದಲ್ಲಿ ಪ್ರಯಾಣಿಸುವ ಅವಕಾಶ ಬಹುಶಃ ಕೆಲವರಿಗೆ ಸಿಗಲಿದೆ. ನಿಮ್ಮ ಸಂಪತ್ತು ಹೆಚ್ಚಾಗಬಹುದು. ವ್ಯವಹಾರದ ಸಮಯದಲ್ಲಿ ಲಾಭವು ನಿಮ್ಮ ಹಣಕಾಸಿನ ತೊಂದರೆಗಳನ್ನು ಅಳಿಸಿಹಾಕಲು ಭರವಸೆ ನೀಡುತ್ತದೆ. ನಿಮ್ಮ ಉದ್ಯೋಗದಲ್ಲಿ ಸಹಕಾರ ಸಿಗಲಿದೆ. (ಭಕ್ತಿಯಿಂದ ಶ್ರೀ ಅಷ್ಟ ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ ಒಳಿತಾಗುವುದು.)

ತಿಥಿ: ಷಷ್ಠಿ
ನಕ್ಷತ್ರ: ಆರಿದ್ರ ನಕ್ಷತ್ರ

ರಾಹುಕಾಲ: 12:00PM ರಿಂದ 01:30PM
ಗುಳಿಕಕಾಲ: 10:30AM ರಿಂದ 12:00PM
ಯಮಗಂಡಕಾಲ: 07:30AM ರಿಂದ 09:00AM

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ವಿದ್ವಾನ್ ಎಸ್.ನವೀನ್ M.A., ರಾಜ್ಯ ಜಂಟಿ ಕಾರ್ಯದರ್ಶಿ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ(ರಿ.) ಮತ್ತು ಧಾರ್ಮಿಕ ಚಿಂತಕರು ಹಾಗೂ ಸುವರ್ಣ ಕನ್ನಡಿಗ ರಾಜ್ಯ ಪ್ರಶಸ್ತಿ ಪುರಸ್ಕೃತರು. ದೊಡ್ಡಬಳ್ಳಾಪುರ. ಮೊ:9620445122

ರಾಜಕೀಯ

ಭಾಷಣದಲ್ಲಿ 60 ಬಾರಿ ಕಾಂಗ್ರೆಸ್‌ ಜಪ: ಪ್ರಧಾನಿ ಮೋದಿ ವಿಡಿಯೋ ಟ್ರೋಲ್!

ಭಾಷಣದಲ್ಲಿ 60 ಬಾರಿ ಕಾಂಗ್ರೆಸ್‌ ಜಪ: ಪ್ರಧಾನಿ ಮೋದಿ ವಿಡಿಯೋ ಟ್ರೋಲ್!

ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ, ಕ್ಷೇತ್ರ ಮರು ವಿಂಗಡನೆ ಮಸೂದೆಗೆ ಸೋಲಾದ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ Narendra Modi) ಅವರು ನೀಡಿದ ಭಾಷಣದಲ್ಲಿ 59 ಬಾರಿ ಕಾಂಗ್ರೆಸ್‌ (Congress) ಹೆಸರು ಮಾತ್ರವೇ ಕೇಳಿಸಿದೆ

[ccc_my_favorite_select_button post_id="121182"]
ಭಾಷಣದಲ್ಲಿ 60 ಬಾರಿ ಕಾಂಗ್ರೆಸ್‌ ಜಪ: ಪ್ರಧಾನಿ ಮೋದಿ ವಿಡಿಯೋ ಟ್ರೋಲ್!

ಭಾಷಣದಲ್ಲಿ 60 ಬಾರಿ ಕಾಂಗ್ರೆಸ್‌ ಜಪ: ಪ್ರಧಾನಿ ಮೋದಿ ವಿಡಿಯೋ ಟ್ರೋಲ್!

ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ, ಕ್ಷೇತ್ರ ಮರು ವಿಂಗಡನೆ ಮಸೂದೆಗೆ ಸೋಲಾದ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ Narendra Modi) ಅವರು ನೀಡಿದ ಭಾಷಣದಲ್ಲಿ 59 ಬಾರಿ ಕಾಂಗ್ರೆಸ್‌ (Congress) ಹೆಸರು ಮಾತ್ರವೇ ಕೇಳಿಸಿದೆ

[ccc_my_favorite_select_button post_id="121182"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ದೋಸ, ಇಡ್ಲಿ, ಸಾಂಬಾರ್, ಚಟ್ನಿ, ಚಟ್ನಿ ಗೀತೆ ಬಳಸಿ ಅವಮಾನಿಸುತ್ತಾರೆ.. CSK ದೂರು.!

ದೋಸ, ಇಡ್ಲಿ, ಸಾಂಬಾರ್, ಚಟ್ನಿ, ಚಟ್ನಿ ಗೀತೆ ಬಳಸಿ ಅವಮಾನಿಸುತ್ತಾರೆ.. CSK ದೂರು.!

ಇತ್ತೀಚೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ (RCB) ಮತ್ತು ಸಿಎಸ್‌ಕೆ (CSK) ಪಂದ್ಯದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಡಿಜೆ ಸಿಎಸ್​ಕೆ ಅಭಿಮಾನಿಗಳನ್ನು ಹಾಗೂ ಆಟಗಾರರನ್ನು ಅವಮಾನಿಸಿದ್ದಾರೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ಮ್ಯಾನೇಜ್ಮೆಂಟ್

[ccc_my_favorite_select_button post_id="121029"]
ಪ್ರಿಯಕರನ ಕೈಕಾಲು ಕಟ್ಟಿ, ಬೆಂಕಿ ಇಟ್ಟ ಪ್ರಿಯತಮೆ..!

ಪ್ರಿಯಕರನ ಕೈಕಾಲು ಕಟ್ಟಿ, ಬೆಂಕಿ ಇಟ್ಟ ಪ್ರಿಯತಮೆ..!

ವಿದೇಶಿ ಶೈಲಿಯಲ್ಲಿ ಪ್ರೇಮ ನಿವೇದನೆ ಮಾಡುವೆ ಎಂದು ಹೇಳಿ ಪ್ರಿಯತಮೆ (Lover) ಪ್ರಿಯಕರನ ಕೈಕಾಲು ಕಟ್ಟಿ, ಕಣ್ಣಿಗೆ ಬಟ್ಟೆ ಸುತ್ತಿ ಪೆಟ್ರೋಲ್ ಸುರಿದು ಆತನಿಗೆ ಬೆಂಕಿ ಇಟ್ಟು ಹತ್ಯೆ ಮಾಡಿರುವ ಭೀಕರ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

[ccc_my_favorite_select_button post_id="121215"]
ದೊಡ್ಡಬಳ್ಳಾಪುರ: ಕ್ಯಾಂಟರ್- ಟ್ರ್ಯಾಕ್ಟರ್ ನಡುವೆ ಬೆಳ್ಳಂಬೆಳಗ್ಗೆ ಅಪಘಾತ.. ಓರ್ವ ಸಾವು

ದೊಡ್ಡಬಳ್ಳಾಪುರ: ಕ್ಯಾಂಟರ್- ಟ್ರ್ಯಾಕ್ಟರ್ ನಡುವೆ ಬೆಳ್ಳಂಬೆಳಗ್ಗೆ ಅಪಘಾತ.. ಓರ್ವ ಸಾವು

ಕ್ಯಾಂಟರ್ ಹಾಗೂ ಟ್ರಾಕ್ಟರ್ ನಡುವೆ ಡಿಕ್ಕಿ (Accident) ಸಂಭವಿಸಿ, ಓರ್ವ ಸಾವನಪ್ಪಿರುವ ಘಟನೆ ತಾಲೂಕಿನ *** ಬಳಿ ಇಂದು ಬೆಳಗ್ಗಿನ ಜಾವ ಸಂಭವಿಸಿದೆ.

[ccc_my_favorite_select_button post_id="121087"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]
error: Content is protected !!