
ದೊಡ್ಡಬಳ್ಳಾಪುರ: ನಗರದ ಡಾ.ರಾಜ್ ಕುಮಾರ್ ಕಲಾಮಂದಿರದಲ್ಲಿ ಹೊಸದುರ್ಗ ತಾಲ್ಲೂಕಿನ ಸಾಣೇಹಳ್ಳಿ ಶ್ರೀ ಶಿವಕುಮಾರ ಕಲಾ ಸಂಘದ ಕಲಾವಿದರಿಂದ ಮೂರು ದಿನಗಳ ಶಿವ ಸಂಚಾರ ನಾಟಕೋತ್ಸವ (Shiva Sanchar Drama) ಪ್ರಾರಂಭಗೊಂಡಿತು.

ದೊಡ್ಡಬಳ್ಳಾಪುರ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು, ಲಯನ್ಸ್ ಕ್ಲಬ್ ಮತ್ತು ಲಯನ್ಸ್ ಚಾರಿಟಬಲ್ ಟ್ರಸ್ಟ್, ಕನ್ನಡ ಸಾಹಿತ್ಯ ಪರಿಷತ್ತು ಮತ್ತು ದೊಡ್ಡಬಳ್ಳಾಪುರ ತಾಲ್ಲೂಕು ಕಲಾವಿದರ ಸಂಘ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ಶಿವಸಂಚಾರ ನಾಟಕೋತ್ಸವದಲ್ಲಿ ಮೊದಲ ದಿನ ಜಂಗಮದೆಡೆಗೆ ನಾಟಕ ಪ್ರದರ್ಶನವಸಯಿತು.

ಸಾಣೇಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ರಚಿಸಿರುವ ನಾಟಕವನ್ನು ಆರ್.ಜಗದೀಶ್ ನಿರ್ದೇಶನ ಮಾಡಿದ್ದರು.
ಜಂಗಮದೆಡೆಗೆ ನಾಟಕವು ಬಸವಣ್ಣನವರ ಬದುಕಿನ ಸುತ್ತ ನಡೆಯುವ ಘಟನಾವಳಿಗಳ ಚಿತ್ರಣವಾಗಿದೆ.
ನಾಟಕದಲ್ಲಿ ಬಸವಣ್ಣನವರ ಬಾಲ್ಯವು ಕತ್ತಲೆಯಿಂದ ಬೆಳಕಿನೆಡೆಗೆ ಹೆಜ್ಜೆ ಇಡುತ್ತಿರುವುದು ಆರಂಭದ ದೃಶ್ಯದಿಂದಲೇ ವ್ಯಕ್ತವಾಗುತ್ತದೆ. ಬಸವಣ್ಣನವರ ಅಂತರಂಗ – ಬಹಿರಂಗ, ಅಂದಿನ ರಾಜಕೀಯ ಸಂಚು, ಪುರೋಹಿತಶಾಹಿಯ ಪಿತೂರಿ, ಬಿಜ್ಜಳನ ತಳಮಳ, ಗಂಗಾಂಬಿಕೆ, ನೀಲಾಂಬಿಕೆ, ಅಕ್ಕನಾಗಮ್ಮ ಮುಂತಾದವರ ಪ್ರೋತ್ಸಾಹದ ಅಂಶಗಳು ನಾಟಕದ ಜಂಗಮತ್ವಕ್ಕೆ ಪ್ರೇರಕವಾಗಿವೆ.
ಜಂಗಮದೆಡೆಗೆ ನಾಟಕ ಬಸವಣ್ಣನವರ ಬಹುಮುಖಿ ಬದುಕಿಗೆ ಹಿಡಿದ ಕನ್ನಡಿಯಾಗಿದೆ. ಬಸವಣ್ಣನವರ ಚಿಂತನೆಗಳು ಮತ್ತು ವಚನಗಳು ಇಂದಿಗೂ ಜಗತ್ತಿಗೆ ಬೆಳಕನ್ನು ಚೆಲ್ಲುವ ಜಂಗರೂಪಿಗಳು ಎನ್ನುವುದನ್ನು ಜಂಗಮದೆಡೆಗೆ ನಾಟಕ ಬಿಂಬಿಸುತ್ತದೆ.
ಜಂಗಮದೆಡೆಗೆ ನಾಟಕವನ್ನು ರಂಗದ ಮೇಲೆ ಅಭಿನಯಿಸಿದ ಕಲಾವಿದರು

ಬಸವರಾಜ ತಮ್ಮಣ್ಣ ಪೂಜಾರಿ, ವಿಶ್ವಾಸರೆಡ್ಡಿ, ಪ್ರವೀಣ ಕೊಪ್ಪಳ, ಸುನೀಲ ಕಲುಬುರಗಿ, ಉದಯಕುಮಾರ್, ದಿನೇಶ್ ಯರನಾಳೆ, ಎನ್.ವಿಶ್ವಜ್ಯೋತಿ, ಪ್ರಶಾಂತ್, ಜಿ.ಯಲ್ಲಪ್ಪ, ಎಸ್.ಎಸ್.ಸುಹಾಸ್, ಬಿ.ಎಸ್.ರಾಜೇಶ್, ಜೆ.ಜನಾರ್ಧನ್. ಚಂದ್ರಕಲಾ, ನಾಗರತ್ನ, ದರ್ಶನ್.
ಜಂಗಮದೆಡೆಗೆ ನಾಟಕಕ್ಕೆ ಆರ್.ಜಗದೀಶ್ ಸಂಗೀತ ಮತ್ತು ವಿನ್ಯಾಸ, ಸಂಗೀತ ಸಹಕಾರವನ್ನು ಎಚ್.ಎಸ್.ನಾಗರಾಜ್ ಮತ್ತು ಕೆ.ದಾಕ್ಷಾಯಣಿ, ತಬಲ ಸಾಥಿ ಶರಣ್ ಕುಮಾರ್, ಸಂಗೀತ ನಿರ್ವಹಣೆ ಆರ್.ಚಂದ್ರಮ್ಮ, ಬಸವರಾಜ ತಮ್ಮಣ್ಣ ಪೂಜಾರಿ, ಪ್ರಶಾಂತ್, ಬೆಂಕಿನ ವಿನ್ಯಾಸ ರಾಜು ಬಿ ಲಕ್ಕಮುತ್ತೇನಹಳ್ಳಿ ಮತ್ತು ರಂಗ ನಿರ್ವಹಣೆಯನ್ನು ದಿನೇಶ್ ಯರನಾಳ ಮಾಡಿದರು.
ದೊಡ್ಡಬಳ್ಳಾಪುರ: ಹಾಡಹಗಲೇ 2 ಮನೆ ಬೀಗ ಒಡೆದು ಒಡವೆ, ನಗದು ಕಳ್ಳತನ.. ಮಹಿಳೆಯ ಮಾಂಗಲ್ಯ ಸರ ಕಸಿದ ದುಷ್ಕರ್ಮಿಗಳು

ದೊಡ್ಡಬಳ್ಳಾಪುರ: ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ಮನೆ ಬೀಗ ಒಡೆದು, ಒಡವೆ, ನಗದು ( jewellery, cash) ಕಳ್ಳತನ ನಡೆಸಿರುವ ಪ್ರಕರಣಗಳು ವರದಿಯಾಗಿದ್ದು, ತಾಲೂಕಿನ ಜನರನ್ನು ಆತಂಕಕ್ಕೆದೂಡಿದೆ
ಹೌದು ನಿನ್ನೆಯಷ್ಟೇ ಎಸ್.ನಾಗೇನಹಳ್ಳಿ ಗ್ರಾಮದ ಬೊಮ್ಮರಾಜುರವರ ಮನೆಯಲ್ಲಿ ಯಾರೂ ಇಲ್ಲದನ್ನು ಗಮನಿಸಿರುವ ದುಷ್ಕರ್ಮಿಗಳು, ಮನೆಯಲ್ಲಿದ್ದ ಬೀರುಗಳನ್ನು ಹೊಡೆದು, ಚಿನ್ನಾಭರಣ ಮತ್ತು ಹಣ ದೋಚಿ ಪರಾರಿಯಾಗಿರುವ ಘಟನೆ ತಾಲೂಕಿನ ನಾಗೇನಹಳ್ಳಿಯಲ್ಲಿ ನಡೆದಿದೆ.
ಬೊಮ್ಮರಾಜು ಅವರ ಕೆಲಸದ ನಿಮಿತ್ತ ಹಾಗೂ ಮೆನೆಯವರು ತೋಟದ ಕೆಲಸಕ್ಕೆ ಹೋಗಿರುವಾಗ, ಮನೆಯ ಬಾಗಿಲು ಮುರಿದು ಒಳ ನುಗ್ಗಿ, ಬೀರುವಿನಲ್ಲಿದ್ದ ಚಿನ್ನಾಭರಣಗಳು ಹಾಗೂ 1.39 ಲಕ್ಷ ರೂ ನಗದು ದೋಚಿ ಪರಾರಿಯಾಗಿದ್ದಾರೆ.
ಆಲಹಳ್ಳಿ ಮನೆ ಕಳವು..!
ಮತ್ತೊಂದು ಪ್ರಕರಣದಲ್ಲಿ ಇಂದು ಆಲಹಳ್ಳಿಯ ಆಶಾ ನಾಗೇಶ್ ಎನ್ನುವವರು ಜಮೀನಿಗೆ ತೆರಳಿದ್ದ ವೇಳೆ ಮನೆ ಬೀಗ ಮುರಿದು ಮನೆ ನುಗ್ಗಿರುವ ದುಷ್ಕರ್ಮಿಗಳು, ಒಡವೆ, ನಗದು ದೋಚಿ ಪರಾರಿಯಾಗಿದ್ದಾರೆ.
ಈ ವೇಳೆ ಸುಮಾರು ಒಂದುವರೆ ಲಕ್ಷ ಮೌಲ್ಯದ, ಚಿನ್ನ, ಬೆಳ್ಳಿ ಹಾಗೂ ನಗದನ್ನು ದೋಚಿದ್ದಾರೆ.
ಚಿನ್ನದ ಮಾಂಗಲ್ಯ ಸರ ದೋಚಿದ ದುಷ್ಕರ್ಮಿಗಳು
ಇನ್ನೊಂದು ಪ್ರಕರಣದಲ್ಲಿ ವಾಕಿಂಗ್ ಗೆಂದು ತೆರಳಿದ್ದ ಮಹಿಳೆಯ ಹಿಂಬಾಲಿಸಿದ ದುಷ್ಕರ್ಮಿ, ಸುಮಾರು 69 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಕಸಿದು ಪರಾರಿಯಾಗಿರುವ ಘಟನೆ ತಾಲೂಕಿನ ಕೊನಘಟ್ಟದಲ್ಲಿ ಇಂದು ಮುಂಜಾನೆ ನಡೆದಿದೆ.
ಕೊನಘಟ್ಟ ಗ್ರಾಮದ ಗಾಯತ್ರಿ ಎನ್ನುವ ಮಹಿಳೆ ವಾಕಿಂಗ್‌ಗೆಂದು ಇಂದು ಬೆಳಗ್ಗೆ ತೆರಳುಚ ವೇಳೆ ಹಿಂಬಾಲಿಸಿಕೊಂಡು ಬಂದ ದುಷ್ಕರ್ಮಿ, ಮಾಂಗಲ್ಯ ಸರ ಕಸಿದು, ಮತ್ತೋರ್ವ ತಂದಿದ್ದ ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತಂತೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
