ಬೆಂ.ಗ್ರಾಂ.ಜಿಲ್ಲೆ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (CEO) ಆಗಿ ಡಾ.ವಸಂತಿ ಅಮರ್ ಬಿ.ವಿ (Dr. Vasanthi Amar B.V) ಅವರನ್ನು ನೇಮಕ ಮಾಡಲಾಗಿದೆ.

ಈ ಕುರಿತಂತೆ ಸರ್ಕಾರದ ಅಧೀನ ಕಾರ್ಯದರ್ಶಿ ಟಿ. ಮಹಾಂತೇಶ್ ಅಧಿಸೂಚನೆ ಹೊರಡಿಸಿದ್ದಾರೆ.

ಇದರನ್ವಯ ಹುದ್ದೆಗಾಗಿ ಕಾಯುತ್ತಿರುವ ಡಾ. ವಸಂತಿ ಅಮರ್ ಬಿ.ವಿ., ಐಎಎಸ್ (ಕೆಎನ್: 2017) ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (CEO) ನೇಮಿಸಿದ್ದು, ಡಾ. ಅನುರಾಧ ಕೆ.ಎನ್., ಐಎಎಸ್ ಅವರನ್ನು ಸಮಕಾಲೀನ ಪ್ರಭಾರದಿಂದ ಬಿಡುಗಡೆ ಮಾಡಲಾಗಿದೆ ಎಂದಿದೆ.
ನೂತನ ಸಿಇಒ ಡಾ. ವಾಸಂತಿ ಅಮರ ಅವರಿಗೆ ದೇವನಹಳ್ಳಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಶ್ರೀ ನಾಥಗೌಡ ಅವರು ಪುಷ್ಪಗುಚ್ಛ ನೀಡಿ ಸ್ವಾಗತ ಕೋರಿದರು.
