ದೊಡ್ಡಬಳ್ಳಾಪುರ: ಉಪವಿಭಾಗಾಧಿಕಾರಿ ಎನ್. ದುರ್ಗಶ್ರೀ (AC. N. Durgashree) ಅವರ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ, ಇಂದು ವರ್ಗಾವಣೆಯಾಗಿ ಬಂದ ಮಂಜುನಾಥ್ ಟಿ.ಆರ್. (Manjunath T.R) ಅವರು ಅಧಿಕಾರ ಸ್ವೀಕರಿಸಿದರು.

ಎನ್. ದುರ್ಗಶ್ರೀ ಇವರ ಸ್ಥಾನಕ್ಕೆ ಮಂಜುನಾಥ್ ಟಿ.ಅರ್. ಅವರನ್ನು ನೇಮಿಸಿ, ರಾಜ್ಯಪಾಲರ ಆದೇಶದ ಅನ್ವಯ ಸರ್ಕಾರದ ಅಧೀನ ಕಾರ್ಯದರ್ಶಿ ಕೇಶವಪ್ರಸಾದ್ ಕೆ.ಹೆಚ್. ಅವರು ಅಧಿಸೂಚನೆ ಹೊರಡಿಸಿದ್ದಾರೆ.

ಈ ಮುಂಚೆ ಮಂಜುನಾಥ್ ಟಿ.ಅರ್ ಅವರನ್ನು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಉಪವಿಭಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿತ್ತು. ಆದರೆ ಈ ಆದೇಶವನ್ನು ಮಾರ್ಪಡಿಸಿ ದೊಡ್ಡಬಳ್ಳಾಪುರ ಉಪವಿಭಾಧಿಕಾರಿಯಾಗಿ ನೇಮಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಇಂದು ಸಂಜೆ ಮಂಜುನಾಥ್ ಅವರು ದೊಡ್ಡಬಳ್ಳಾಪುರ ಉಪವಿಭಾಧಿಕಾರಿ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು. ನಿಕಟ ಪೂರ್ವ ಎಸಿ ದುರ್ಗಶ್ರೀ ಹಾಗೂ ಸಿಬ್ಬಂದಿಗಳು ಸ್ವಾಗತ ಕೋರಿದರು.
ಇನ್ನೂ ದೊಡ್ಡಬಳ್ಳಾಪುರದಿಂದ ವರ್ಗಾವಣೆಯಾದ ದುರ್ಗಶ್ರೀ ಅವರಿಗೆ ಯಾವುದೇ ಸ್ಥಳ ತೋರಿಸಿಲ್ಲ.
ಸರ್ಕಾರಿ ಜಾಮೀನು ಖಾಸಗಿ ಕಂಪನಿ ಹೆಸರಿಗೆ ಮಾಡಿದ್ದರೆಂದು ಆಗಿನ ತಹಶಿಲ್ದಾರ್ ವಿಭಾವಿದ್ಯಾ ರಾಥೋಡ್ ಹಾಗೂ ಎಸಿ ದುರ್ಗಶ್ರೀ ವಿರುದ್ಧ ಗಂಭೀರ ಆರೋಪ ಕೇಳಿ ಬಂದು ರಾಜ್ಯಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದ್ದನ್ನು ಸ್ಮರಿಸಬಹುದಾಗಿದೆ.
SSLC ಪರೀಕ್ಷೆ-1ರ ಫಲಿತಾಂಶ ನಾಳೆ (ಏ.23) ಪ್ರಕಟ

ಬೆಂಗಳೂರು: ಲಕ್ಷಾಂತರ ವಿದ್ಯಾರ್ಥಿಗಳು ಕಾತುರದಿಂದ ಕಾಯುತ್ತಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ರ ಫಲಿತಾಂಶ ನಾಳೆ ಗುರುವಾರ (ಏಪ್ರಿಲ್ 23) ಪ್ರಕಟವಾಗಲಿದೆ.
ಈ ಕುರಿತಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಅಧಿಕೃತ ಮಾಧ್ಯಮ ಪ್ರಕಟಣೆ ಹೊರಡಿಸಿದೆ.
ನಾಳೆ (ಏಪ್ರಿಲ್ 23) ಮಧ್ಯಾಹ್ನ 12.00 ಗಂಟೆಗೆ ಸರಿಯಾಗಿ ಫಲಿತಾಂಶವನ್ನು ಪ್ರಕಟಿಸಲಾಗುವುದು ಎಂದು ತಿಳಿಸಿದೆ. ಸಂಬಂಧಪಟ್ಟ ಶಾಲೆಗಳಿಗೂ ಸಹ ಇದೇ ಸಮಯದಲ್ಲಿ ಫಲಿತಾಂಶದ ಪಟ್ಟಿಯನ್ನು ಲಭ್ಯಗೊಳಿಸಲಾಗುವುದು ಎಂದಿದೆ.
ವಿದ್ಯಾರ್ಥಿಗಳು ಮಧ್ಯಾಹ್ನ 12 ಗಂಟೆಯ ನಂತರ https://www.digilocker.gov.in ವೆಬ್ಸೈಟ್ಗೆ ಭೇಟಿ ನೀಡಿ ತಮ್ಮ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)
