ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಎನ್. ದುರ್ಗಶ್ರೀ (AC. N. Durgashree) ಅವರನ್ನು ಅಚ್ಚರಿಯ ಬೆಳವಣಿಗೆಯಲ್ಲಿ ವರ್ಗಾವಣೆ ಮಾಡಲಾಗಿದೆ.

ಇವರ ಸ್ಥಾನಕ್ಕೆ ಮಂಜುನಾಥ್ ಟಿ.ಅರ್. ಅವರನ್ನು ನೇಮಿಸಿ, ರಾಜ್ಯಪಾಲರ ಆದೇಶದ ಅನ್ವಯ ಸರ್ಕಾರದ ಅಧೀನ ಕಾರ್ಯದರ್ಶಿ ಕೇಶವಪ್ರಸಾದ್ ಕೆ.ಹೆಚ್. ಅವರು ಅಧಿಸೂಚನೆ ಹೊರಡಿಸಿದ್ದಾರೆ.

ಈ ಮುಂಚೆ ಮಂಜುನಾಥ್ ಟಿ.ಅರ್ ಅವರನ್ನು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಉಪವಿಭಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿತ್ತು. ಆದರೆ ಈ ಆದೇಶವನ್ನು ಮಾರ್ಪಡಿಸಿ ದೊಡ್ಡಬಳ್ಳಾಪುರ ಉಪವಿಭಾಧಿಕಾರಿಯಾಗಿ ನೇಮಿಸಲಾಗಿದೆ.
ವರ್ಗಾವಣೆಯಾದ ದುರ್ಗಶ್ರೀ ಅವರಿಗೆ ಯಾವುದೇ ಸ್ಥಳ ತೋರಿಸಿಲ್ಲ.
ಸರ್ಕಾರಿ ಜಮೀನು ಖಾಸಗಿ ಕಂಪನಿ ಹೆಸರಿಗೆ ಮಾಡಿದ್ದರೆಂದು ಆಗಿನ ತಹಶಿಲ್ದಾರ್ ವಿಭಾವಿದ್ಯಾ ರಾಥೋಡ್ ಹಾಗೂ ಎಸಿ ದುರ್ಗಶ್ರೀ ವಿರುದ್ಧ ಗಂಭೀರ ಆರೋಪ ಕೇಳಿ ಬಂದು, ರಾಜ್ಯಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದ್ದನ್ನು ಸ್ಮರಿಸಬಹುದಾಗಿದೆ.
ದೊಡ್ಡಬಳ್ಳಾಪುರ: ಅಪಾಯ ತಪ್ಪಿಸಲು ಕೃಷಿ ಹೊಂಡದ ಸುತ್ತ ತಂತಿ ಬೇಲಿ ಅಳವಡಿಸಿ – ಎಡಿಎ ರಾಘವೇಂದ್ರ ಸೂಚನೆ

ದೊಡ್ಡಬಳ್ಳಾಪುರ: ಕೃಷಿಭಾಗ್ಯ ಯೋಜನೆಯಡಿ ದೊಡ್ಡಬಳ್ಳಾಪುರ ತಾಲ್ಲೂಕಿನಾದ್ಯಂತ ಹಲವು ರೈತರು ಕೃಷಿ ಹೊಂಡಗಳನ್ನು (Agricultural ponds) ಸಹಾಯಧನದಲ್ಲಿ ನಿರ್ಮಿಸಿ, ಸಂದಿಗ್ದ ಪರಿಸ್ಥಿತಿಯಲ್ಲಿ ಕೃಷಿ ಹೊಂಡದ ನೀರನ್ನು ಬಳಸಿಕೊಂಡು ಬೆಳೆಗಳನ್ನು ಕಾಣಬಹುದಾಗಿದೆ.
ಪ್ರಸ್ತುತ ಬೇಸಿಗೆ ಕಾಲ ಆರಂಭವಾಗಿರುವುದರಿಂದ ಶಾಲೆಗಳಿಗೆ ರಜೆ ಇದ್ದು, ಕೃಷಿ ಹೊಂಡಗಳಲ್ಲಿ ಅಪಾಯದ ಅರಿವಿಲ್ಲದೆ ಈಜಾಡಲು ಹೋಗಿ ಆಕಸ್ಮಿಕವಾಗಿ ಪ್ರಾಣ ಕಳೆದು ಕೊಳ್ಳುವ ಅವಘಡಗಳು ಜರುಗುವ ಸಂಭವ ಹೆಚ್ಚಾಗಿರುತ್ತದೆ.
ಇತ್ತೀಚಿನ ದಿನಗಳಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು,. ಜಾನುವಾರುಗಳು ಸಹ ಕೃಷಿ ಹೊಂಡಗಳಲ್ಲಿ ನೀರು ಕುಡಿಯಲು ಹೋಗಿ ಬೀದ್ದು ಸಾವನಪ್ಪುವ ಸಾಧ್ಯತೆ ಇದೆ. ಈ ಬಗ್ಗೆ ರಾಜ್ಯ ಮಕ್ಕಳ ಹಕ್ಕುಗಳ ಶಿಕ್ಷಣಾ ಆಯೋಗವು ಸಹ ಇದರ ಬಗ್ಗೆ ಸೂಕ್ತ ಕ್ರಮ ವಹಿಸಲು ಸೂಚನೆ ನೀಡಿದೆ.
ಆದ್ದರಿಂದ ಕೃಷಿ ಹೊಂಡದಲ್ಲಿ ಜನ, ಜಾನುವಾರುಗಳು ಆಕಸ್ಮಿಕವಾಗಿ ಬಿದ್ದು ಪ್ರಾಣನಷ್ಟ ಸಂಭವಿಸದಂತೆ ತಡೆಯಲು ಸುತ್ತಲೂ ತಂತಿಬೇಲಿ ನಿರ್ಮಿಸಬೇಕು. ಕೃಷಿ ಹೊಂಡದ ಸುತ್ತಲೂ ಹಗ್ಗಗಳ ಮೂಲಕ ಟ್ಯೂಬ್, ಟೈರ್‌ಗಳನ್ನು ತೇಲಿ ಬಿಡುವುದು, ಕೃಷಿ ಹೊಂಡ ನಿರ್ಮಾಣದ ನಂತರ ಎಚ್ಚರಿಕೆಯ ಫಲಕಗಳನ್ನು ಅಳವಡಿಸುವುದು ಕಡ್ಡಾಯವಾಗಿದೆ.
2023-24 ನೇ ಸಾಲಿನಿಂದ ತಂತಿಬೇಲಿ ನಿರ್ಮಾಣಕ್ಕೆ ಸಹಾಯಧನ ಸಾಮಾನ್ಯ ರೈತರಿಗೆ ಶೇ 40 ಹಾಗೂ ಪರಿಶಿಷ್ಟ ಜಾತಿ, ಪಂಗಡ ರೈತರಿಗೆ ಶೇ 50 ಸಹಾಯಧನ ಲಭ್ಯವಿದೆ. ಆಸಕ್ತ ರೈತರು ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಸಂಪರ್ಕಿಸಬಹುದು ಎಂದು ಸಹಾಯಕ ಕೃಷಿ ನಿರ್ದೇಶಕ ಪಿ. ರಾಘವೇಂದ್ರ ಸೂಚನೆ ನೀಡಿದ್ದಾರೆ.
