ದೊಡ್ಡಬಳ್ಳಾಪುರ: ಇಂದು ಪ್ರಕಟವಾದ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆ – 1 ರ ಫಲಿತಾಂಶದಲ್ಲಿ ತಾಲ್ಲೂಕಿನ ಮೆಳೇಕೋಟೆ ಕ್ರಾಸ್ SJCR ಶಾಲೆಯು ಶೇ.100 ಫಲಿತಾಂಶ ಪಡೆದಿದೆ.

ಶಾಲೆಯ ವಿದ್ಯಾರ್ಥಿನಿ ತೇಜಸ್ವಿನಿ.ಎಮ್ 625 ಕ್ಕೆ 620 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ.

ಕುಮಾರಿ ಚಾರ್ಮಿ.ಎಮ್, ನಂದಕುಮಾರ್.ಟಿ.ಎನ್ ಹಾಗೂ ನಿಶ್ಚಯ್ ಗೌಡ 616 ಅಂಕಗಳನ್ನು ಮತ್ತು ಕುಮಾರಿ ಐಸಿರಿಗೌಡ.ಎ.ಎ, ಮೇಘನ.ಆರ್.ಎಮ್ 615 ಅಂಕಗಳನ್ನು ಪಡೆದಿರುತ್ತಾರೆ.
2025-26ನೇ ಸಾಲಿನಲ್ಲಿ ಒಟ್ಟು 89 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, A+ ಶ್ರೇಣಿ 47 ವಿದ್ಯಾರ್ಥಿಗಳು, A ಶ್ರೇಣಿ 33 ವಿದ್ಯಾರ್ಥಿಗಳು, B+ ಶ್ರೇಣಿ 8 ವಿದ್ಯಾರ್ಥಿಗಳು ಹಾಗೂ B ಶ್ರೇಣಿ 01 ವಿದ್ಯಾರ್ಥಿಯು ಪಡೆದಿರುತ್ತಾರೆ.
ಉತ್ತಮ ಫಲಿತಾಂಶ ಪಡೆಯುವ ಮೂಲಕ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಚಿಕ್ಕಬಳ್ಳಾಪುರದ ಆದಿಚುಂಚನಗಿರಿ ಶಾಖಾ ಮಠದ ಕಾರ್ಯದರ್ಶಿಗಳಾದ ಶ್ರೀ ಮಂಗಳನಾಥ ಸ್ವಾಮೀಜಿ, ಆಡಳಿತಾಧಿಕಾರಿ ಡಾ.ಎನ್.ಶಿವರಾಮರೆಡ್ಡಿ, ಶಾಲೆಯ ಮುಖ್ಯ ಶಿಕ್ಷಕ ಹೆಚ್.ಎಲ್.ವಿಜಯಕುಮಾರ್ ಮತ್ತು ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.
