ನವದೆಹಲಿ: ಐಪಿಎಲ್ನ ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡದ ನಾಯಕ ರಿಯಾನ್ ಪರಾಗ್ (Riyan Parag) ಪಂದ್ಯದ ವೇಳೆ ನಿಷೇಧಿತ ‘ಇ-ಸಿಗರೇಟ್’ (Vape) ಸೇವಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಐಪಿಎಲ್ ಕ್ರಿಕೆಟ್ ಪಂದ್ಯವೊಂದರ ವೇಳೆ ರಾಜಸ್ಥಾನ್ ರಾಯಲ್ಸ್ ನಾಯಕ ರಿಯಾನ್ ಪರಾಗ್ ಡಗೌಟ್ನಲ್ಲಿ ಕುಳಿತು ‘ವ್ಯಾಪಿಂಗ್’ ಅಥವಾ ಇ-ಸಿಗರೇಟ್ ಸೇವಿಸುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ ಎನ್ನಲಾಗಿದೆ.
What’s happening in the ipl ?#PBKS#RR@IPL @BCCI
— Vansh Goyal (@vanshgoyal0674) April 28, 2026
Riyan parag is using vape 😱😱😱😓 pic.twitter.com/xVXhb0LKZW
ಭಾರತದಲ್ಲಿ ಇ-ಸಿಗರೇಟ್ ಸಂಪೂರ್ಣವಾಗಿ ನಿಷೇಧಕ್ಕೊಳಗಾಗಿರುವುದರಿಂದ ಈ ವಿಷಯ ಈಗ ದೊಡ್ಡ ವಿವಾದವಾಗಿ ಮಾರ್ಪಟ್ಟಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ನಿನ್ನೆಯದ್ದು ಎನ್ಬಲಾಗುತ್ತಿದ್ದು, ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಿಯಾನ್ ಪರಾಗ್ 16 ಎಸೆತಗಳಲ್ಲಿ 29 ರನ್ ಗಳಿಸಿ ಔಟಾದರು. ಅವರು ಪೆವಿಲಿಯನ್ಗೆ ಮರಳಿದ ನಂತರ, ಎರಡನೇ ಇನಿಂಗ್ಸ್ನ 16ನೇ ಓವರ್ ನಡೆಯುತ್ತಿದ್ದಾಗ ಬ್ರಾಡ್ಕಾಸ್ಟ್ ಕ್ಯಾಮೆರಾ ಡ್ರೆಸ್ಸಿಂಗ್ ರೂಮ್ನತ್ತ ತಿರುಗಿತು. ಈ ವೇಳೆ ಪರಾಗ್ ಎಲೆಕ್ಟ್ರಾನಿಕ್ ಸಿಗರೇಟ್ ಅಥವಾ ವೇಪ್ ಬಳಸುತ್ತಿರುವುದು ಸ್ಪಷ್ಟವಾಗಿ ಕಂಡುಬಂದಿದೆ. ಈ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಕಾನೂನು ಕ್ರಮದ ಭೀತಿ
ಭಾರತ ಸರ್ಕಾರವು 2019ರಲ್ಲೇ ಇ-ಸಿಗರೇಟ್ಗಳ ಉತ್ಪಾದನೆ, ಮಾರಾಟ ಮತ್ತು ಬಳಕೆಯನ್ನು ಕಾನೂನುಬಾಹಿರ ಎಂದು ಘೋಷಿಸಿದೆ.
ಈ ಕಾಯ್ದೆಯ ಉಲ್ಲಂಘನೆಯು ಮೊದಲ ಬಾರಿಗೆ ಅಪರಾಧವೆಂದು ಪರಿಗಣಿಸಲ್ಪಟ್ಟರೆ ಒಂದು ವರ್ಷದವರೆಗೆ ಜೈಲು ಶಿಕ್ಷೆ ಅಥವಾ 1 ಲಕ್ಷ ರೂಪಾಯಿ ದಂಡ ವಿಧಿಸಲು ಅವಕಾಶವಿದೆ.
ಕೇವಲ ಕಾನೂನು ಮಾತ್ರವಲ್ಲದೆ, ಕ್ರೀಡಾಂಗಣದೊಳಗೆ ಇಂತಹ ವರ್ತನೆಯು ಬಿಸಿಸಿಐನ ನೀತಿ ಸಂಹಿತೆಯ ಉಲ್ಲಂಘನೆಯಾಗಿದ್ದು, ರಿಯಾನ್ ಪರಾಗ್ ಭಾರಿ ಮೊತ್ತದ ದಂಡ ಅಥವಾ ನಿಷೇಧ ಎದುರಿಸಬೇಕಾಗುವ ಅಪಾಯವಿದೆ ಎಂದು ವರದಿಯಾಗಿದೆ.

