ಮಲ್ಲಿಪಾಸಿ: ಒಡಿಶಾದಲ್ಲಿ ಉಳಿತಾಯ ಹಣ ನೀಡಲು ಬ್ಯಾಂಕ್ ಸಿಬ್ಬಂದಿಗಳು ಕೇಳಿದ ಸಹೋದರಿಯ ಮೃತಪಟ್ಟ ಸಾಕ್ಷಿಗಾಗಿ, ಸುಮಾರು 59 ವರ್ಷದ ಬುಡಕಟ್ಟು ವ್ಯಕ್ತಿಯೊಬ್ಬ ತನ್ನ ಸಹೋದರಿಯ ಅಸ್ಥಿಪಂಜರವನ್ನು (skeleton) ಹೊರತೆಗೆದು, ಸುಮಾರು 20 ಕಿಮಿ ದೂರದ ಬ್ಯಾಂಕಿಗೆ ಹೊತ್ತು ತಂದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬ್ಯಾಂಕ್ ಸಿಬ್ಬಂದಿಗಳ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಘಟನೆಯಿಂದ ಹೆಚ್ಚೆತ್ತ ಜಿಲ್ಲಾಡಳಿತವು ಕಾನೂನುಬದ್ಧ ಉತ್ತರಾಧಿಕಾರಿ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಲು ಅವರಿಗೆ ಸಹಾಯ ಮಾಡಿತು ಮತ್ತು ವೈದ್ಯಕೀಯ ಅಧಿಕಾರಿ ಅವರಿಗೆ ಅವರ ಸಹೋದರಿಯ ಮರಣ ಪ್ರಮಾಣಪತ್ರವನ್ನು ನೀಡಿದ್ದಾರೆ.
ಇದರ ಮರು ದಿನವೇ 19,300 ರೂ. ಉಳಿತಾಯ ಹಣಕ್ಕೆ, ಬ್ಯಾಂಕ್‌ನಿಂದ ಬಡ್ಡಿ ಸೇರಿದಂತೆ 19,402 ರೂ.ಗಳನ್ನು ಹಸ್ತಾಂತರಿಸಲಾಗಿದೆ.
ಜಿತು ಮುಂಡಾ ಸೋಮವಾರ ಬ್ಯಾಂಕ್ ಕಟ್ಟಡದ ಹೊರಗೆ ತನ್ನ ಸಹೋದರಿ ಕಲಾರ ಅವರ ಅವಶೇಷಗಳನ್ನು ಹೊಂದಿರುವ ಚೀಲವನ್ನು ತುಂಬಿ ಹೊತ್ತು ತಂದಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು.
A tribal man in Odisha dug up his dead sister’s skeleton and carried it on his shoulder to the bank because they wouldn’t release her ₹20k without her presence😢 pic.twitter.com/33FWXI8fhB
— nicholas (@nichnyati) April 28, 2026
ಬ್ಯಾಂಕ್ ಅಧಿಕಾರಿಗಳು ತಮ್ಮ ಮೃತ ಸಹೋದರಿಯ ಉಳಿತಾಯ ಹಣವನ್ನು ಹಿಂಪಡೆಯಲು ಪದೇ ಪದೇ ನಿರಾಕರಿಸಿದ ಹಿನ್ನೆಲೆಯಲ್ಲಿ, ಆಕೆಯ ಅಸ್ಥಿಪಂಜರದ ಅವಶೇಷಗಳನ್ನು ಹೊರತೆಗೆಯಬೇಕಾಯಿತು ಎಂದು ಅವರು ಹೇಳಿದ್ದಾರೆ.
ಮಂಗಳವಾರ, ಮೊತ್ತವನ್ನು ಪಡೆದ ನಂತರ, ಜಿತು ಅವರು ಸಂತೋಷವಾಗಿದ್ದಾರೆಂದು ಹೇಳಿದರು, ತನ್ನ ಸಹೋದರಿಯ ಉಳಿತಾಯವನ್ನು ತನ್ನ ನಾಲ್ವರು ಸಹೋದರರಿಗೆ ಹಂಚಲಾಗುವುದು ಎಂದು ಹೇಳಿದರು.
ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಮಂಗಳವಾರ ಘಟನೆಯ ತನಿಖೆಗೆ ಕಂದಾಯ ವಿಭಾಗೀಯ ಆಯುಕ್ತರಿಗೆ ಆದೇಶಿಸಿದ್ದಾರೆ ಮತ್ತು ಜನರ ಬಗ್ಗೆ ಸೂಕ್ಷ್ಮವಾಗಿರಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಲ್ಲದೆ, ಆಡಳಿತದ ಕಡೆಯಿಂದ ಯಾವುದೇ ನಿರ್ಲಕ್ಷ್ಯವಿದೆಯೇ ಎಂದು ಖಚಿತಪಡಿಸಿಕೊಳ್ಳಲು ತನಿಖೆ ನಡೆಯುತ್ತಿದೆ ಎಂದು ಕಿಯೋಂಜಾರ್ ಜಿಲ್ಲಾಧಿಕಾರಿ ವಿಶಾಲ್ ಸಿಂಗ್ ಹೇಳಿದ್ದಾರೆ.
ವರದಿ ಅನ್ವಯ ಜಿತು ಅವರ ಸಹೋದರಿ ಒಡಿಶಾದ ಧೆಂಕನಲ್‌ನ ರಮೈಖಮರ್ ಗ್ರಾಮದ ತಡಿಯಾ ಮುಂಡಾ ಅವರನ್ನು ವಿವಾಹವಾದರು. ಅವರ ಪತಿ ನಿಧನರಾದ ನಂತರ, ಅವರು ತಮ್ಮ ಮಗುವಿನೊಂದಿಗೆ 40 ವರ್ಷಗಳ ಹಿಂದೆ ಕಿಯೋಂಜಾರ್‌ನ ಡಯಾನಾಲಿ ಗ್ರಾಮದಲ್ಲಿರುವ ತಮ್ಮ ತಂದೆಯ ಮನೆಗೆ ಸ್ಥಳಾಂತರಗೊಂಡರು.
ಸ್ವಲ್ಪ ಸಮಯದ ನಂತರ ಮಗು ಸತ್ತುಹೋಯಿತು. ಅಂದಿನಿಂದ, ಅವರು ಈ ವರ್ಷ ಜನವರಿ 26 ರಂದು ಸಾಯುವವರೆಗೂ ತಮ್ಮ ಸಹೋದರರು ಮತ್ತು ಒಬ್ಬ ಸಹೋದರಿಯೊಂದಿಗೆ ವಾಸಿಸುತ್ತಿದ್ದರಂತೆ.

