
ಬೆಂಗಳೂರು: ವಿಧಾನಸಭೆ ಕಲಾಪದ ವೇಳೆ ಒನ್ ನೇಷನ್, ಒನ್ ಎಲೆಕ್ಷನ್ ವಿಚಾರಕ್ಕೆ ಕಾಂಗ್ರೆಸ್ ಶಾಸಕರು ವಿಧಾನಸಭೆ ಕಲಾಪದ ವೇಳೆ ಗದ್ದಲ ಮಾಡಿದ ಕಾರಣ ಕಲಾಪವನ್ನು ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ 12ಗಂಟೆಗೆ ಮುಂದೂಡಿದರು.

ಗುರುವಾರ ನಡೆದ ಪ್ರತಿಭಟನೆ ವೇಳೆ, ಅಶಿಸ್ತಿನಿಂದ ನಡೆದುಕೊಂಡ ಭದ್ರಾವತಿ ಶಾಸಕ ಬಿಕೆ ಸಂಗಮೇಶ್ ಅವರನ್ನ ಮಾ.12ರ ವರೆಗೆ ಅಮಾನತು ಮಾಡಿ ನಿರ್ಣಯ ಕೈಗೊಂಡಿರುವ ಕುರಿತು, ಕಲಾಪದ ಬಾವಿಗಳಿದ ಕಾಂಗ್ರೆಸ್ ಸದಸ್ಯರು ದಿಕ್ಕಾರ ಕೂಗಿದರು.
ಕಲಾಪ ಆರಂಭವಾಗುತ್ತಿದ್ದಂತೆ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಒನ್ ನೇಷನ್, ಒನ್ ಎಲೆಕ್ಷನ್ ವಿಚಾರದ ಚರ್ಚೆ ಪ್ರಸ್ತಾಪಿಸಿದರು. ಈ ವೇಳೆ ಕಾಂಗ್ರೆಸ್ ಶಾಸಕರು ಸದನದ ಬಾವಿಗೆ ಇಳಿದು ಪ್ರತಿಭಟಿಸಿದರು, ಕಾಂಗ್ರೆಸ್ ಪಕ್ಷದ ವರ್ತನೆಯನ್ನು ಬಿಜೆಪಿ ಪಕ್ಷದವರು ಖಂಡಿಸಿದರೆ. ಸಂಗಮೇಶ್ ಅಮಾನತ್ತು ಅಸಂವಿಧಾನಿಕ ಎಂದು ಕಾಂಗ್ರೆಸ್ ಶಾಸಕರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ಬಿಟ್ಟು ತಮ್ಮ ಆಸನಗಳಿಗೆ ತೆರಳಿ ಎಂದು ಸಭಾಪತಿ ಮನವಿ ಮಾಡಿದರು ಕೇಳದ ಕಾರಣ ಕಲಾಪವನ್ನು ಮುಂದೂಡಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…

