
ದೊಡ್ಡಬಳ್ಳಾಪುರ: ನಗರ ಬೆಸ್ಕಾಂ ವ್ಯಾಪ್ತಿಯ ಕೆಲ ಪ್ರದೇಶಗಳಲ್ಲಿ, ಮಾರ್ಚ್ 7ರಂದು ಬೆಳಗ್ಗೆ 10ರಿಂದ ಮದ್ಯಾಹ್ನ 2ಗಂಟೆಗೆಯ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಬೆಸ್ಕಾಂ ಇಲಾಖೆ ಪ್ರಕಟಣೆ ನೀಡಿದೆ.

220/66/11ಕೆವಿ ಕೆಐಎಡಿಬಿ ವಿದ್ಯುತ್ ಉಪ ಕೇಂದ್ರದಿಂದ ಸರಬರಾಜಾಗುವ, 11ಕೆವಿ ವಿದ್ಯುತ್ ಮಾರ್ಗಗಳ ಬ್ರೇಕರ್ ಗಳಿಗೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಿಂದ TR-1(Bank-2) ಕೆಲಸವನ್ನು ಹಮ್ಮಿಕೊಂಡಿರುವ ಕಾರಣ, ಈ ವ್ಯಾಪ್ತಿಯ ವಿದ್ಯುತ್ ಮಾರ್ಗಗಳಲ್ಲಿ ಬೆಳಗ್ಗೆ 10ರಿಂದ ಮದ್ಯಾಹ್ನ 2ಗಂಟೆಗೆಯ ವರೆಗೆ ವಿದ್ಯುತ್ ಅಡಚಣೆಯ ಅಭಾವ ಉಂಟಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಬೆಸ್ಕಾಂ ಎಇಇ ರೋಹಿತ್ ಮನವಿ ಮಾಡಿದ್ದಾರೆ.
ವಿದ್ಯುತ್ ಕಡಿತಗೊಳ್ಳುವ ಪ್ರದೇಶಗಳು: KF-6 TULASIYANA; ಗೌಡಹಳ್ಳಿ, ಗೆಜ್ಜಿಗದಹಳ್ಳಿ, ಗೆಜ್ಜಿಗದಹಳ್ಳಿ ಪಾಳ್ಯ, ಕರೀಂ ಸೊಣ್ಣೇನಹಳ್ಳಿ, ಅಂಜನಮೂರ್ತಿ ನಗರ, ದೊಂಬರಹಳ್ಳಿ, ಎಳ್ಳುಪುರ, ಕಸವನಹಳ್ಳಿ, ಬಿಸುವನಹಳ್ಳಿ, ವರದನಹಳ್ಳಿ.
KF-11 TAFE; ಕೆಎಸ್.ಎಸ್.ಐ.ಡಿಸಿ, ಕೈಗಾರಿಕಾ ಪ್ರದೇಶ, ಬಾಶೆಟ್ಟಿಹಳ್ಳಿ.
KF-8 TOWN, KF-14 AP; ವೀರಾಪುರ, ತಿಪ್ಪಾಪುರ, ಭುವನೇಶ್ವರಿನಗರ, ಕೆಐಡಿಬಿ ಕೈಗಾರಿಕಾ ಪ್ರದೇಶ, ಬಾಶೆಟ್ಟಿಹಳ್ಳಿ.
KF-12 ARALUMALLIGE; ಮಜರಾಹೊಸಹಳ್ಳಿ, ಜಿಂಕೆಬಚ್ಚಹಳ್ಳಿ, ದೊಂಬರಹಳ್ಳಿ, ಚಿಕ್ಕತುಮಕೂರು, ಕಾನೆಹೊಸಹಳ್ಳಿ, ಬೈರಸಂದ್ರ, ಏಕಾಶಿಪುರ, ಎಸ್.ಎಂ.ಗೊಲ್ಲಹಳ್ಳಿ, ಅರಳುಮಲ್ಲಿಗೆ, ಕಾಡನೂರು ಕೈಮರ, ಜಕ್ಕಸಂದ್ರ.
KF-7 KSSIDC; ಕೆಎಸ್.ಎಸ್.ಐ.ಡಿಸಿ, ಕೈಗಾರಿಕಾ ಪ್ರದೇಶ, ಬಾಶೆಟ್ಟಿಹಳ್ಳಿ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…

