
ದೊಡ್ಡಬಳ್ಳಾಪುರ: ವೇ ಬ್ರಿಡ್ಜ್ ಮೇಲೆ ತೂಕಕ್ಕೆ ನಿಲ್ಲಿಸಲಾಗುತ್ತಿದ್ದ ಲಾರಿ, ಆಯತಪ್ಪಿ ಉರುಳಿ ಬಿದ್ದ ಘಟನೆ ತಾಲೂಕಿನ ಗೊಲ್ಲಹಳ್ಳಿ ತಾಂಡ ಬಳಿಯಿರುವ ರಾಗಿ ಉಗ್ರಾಣ ಕೇಂದ್ರದಲ್ಲಿ ನಡೆದಿದೆ.

ರೈತ ಕೆಸ್ತೂರು ಚೆನ್ನೆಗೌಡ ಎನ್ನುವವರು, ಗ್ರಾಮದ ಇತರೆ ರೈತರ ರಾಗಿಯನ್ನು ಲಾರಿಯಲ್ಲಿ ತುಂಬಿಕೊಂಡು, ಬೆಂಬಲ ಬೆಲೆಯಲ್ಲಿ ಖರೀದಿ ಕೇಂದ್ರಕ್ಕೆ ಮಾರಲು ಬಂದಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.
ಘಟನೆಗೆ ಅವೈಜ್ಞಾನಿಕವಾಗಿ ವೇ ಬ್ರಿಡ್ಜ್ ನಿರ್ಮಿಸಿರುವುದೇ ಕಾರಣ ಎಂದು ರೈತ ಮುಖಂಡ ಹಾಡೋನಹಳ್ಳಿ ಚನ್ನಕೇಶವ ಆರೋಪಿಸಿದ್ದು, ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲವಾಗಿದ್ದರು ಸಹ, ಲಾರಿ ಮಾಲೀಕನಿಗೆ ಸಾವಿರಾರು ರೂ ನಷ್ಟವಾಗಿದೆ.
ಘಟನೆ ಬಳಿಕ ಅಧಿಕಾರಿಗಳು ಹೆಚ್ಚೆತ್ತು ವೇ ಬ್ರಿಡ್ಜ್ ಬಳಿ ಮತ್ತೆ ಈ ರೀತಿ ಘಟನೆ ನಡೆಯಂತೆ ಕ್ರಮಕೈಗೊಂಡಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…

