
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ 14ನೇ ಆವೃತ್ತಿಯ ಪಂದ್ಯದ ಆಟಗಳು ಏ. 9 ರಿಂದ, ಮೇ 30ರ ವರೆಗೆ ಭಾರತದ 6 ನಗರಗಳಲ್ಲಿ ನಡೆಯಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಟ್ವಿಟ್ ಮಾಡುವ ಮೂಲಕ ತಿಳಿಸಿದೆ.

ಬಿಸಿಸಿಐ ತಿಳಿಸಿರುವ ಪ್ರಕಾರ, ಐಪಿಎಲ್ ಪಂದ್ಯಾಟಗಳಿಗಾಗಿ ಬೆಂಗಳೂರು, ಚೆನ್ನೈ, ದೆಹಲಿ, ಅಹಮದಾಬಾದ್, ಕೋಲ್ಕತ್ತಾ ಹಾಗೂ ಮುಂಬೈ ನಗರಗಳನ್ನು ಆಯ್ಕೆ ಮಾಡಲಾಗಿದೆ. ಏಪ್ರಿಲ್ 9ರಿಂದ ಮೇ 30ರ ವರೆಗೆ 56 ಲೀಗ್ ಹಂತದ ಪಂದ್ಯಾಟಗಳು ನಡೆಯಲಿದೆ.
ಈ ಐಪಿಎಲ್ ಪಂದ್ಯಗಳು ತಟಸ್ಥ ಸ್ಥಳಗಳಲ್ಲೇ ಹೆಚ್ಚಿನ ಪಂದ್ಯ ನಡೆಯಲಿದ್ದು, ಎಲ್ಲಾ ತಂಡಗಳು ಲೀಗ್ ಹಂತದ ಪಂದ್ಯಗಳನ್ನು ತವರಿನಂಗಳದಲ್ಲಿ ಆಡದೆ ಬೇರೆ ಬೇರೆ ಅಂಕಣಗಳಲ್ಲಿ ಎದುರು ಬದುರಾಗಲಿದೆ.
14ನೇ ಆವೃತ್ತಿಯ ಐಪಿಎಲ್ ನಲ್ಲಿ 11 ಡಬಲ್ ಹೆಡ್ಡರ್ ಪಂದ್ಯಾಟಗಳು ನಡೆಯಲಿದ್ದು 6 ತಂಡಗಳು 3 ಮದ್ಯಾಹ್ನದ ನಂತರದ ಪಂದ್ಯಾಟಗಳನ್ನು ಆಡಿದರೆ, 2 ತಂಡ, 2 ಮಧ್ಯಾಹ್ನದ ನಂತರದ ಪಂದ್ಯವನ್ನು ಆಡಳಿದೆ. ಮಧ್ಯಹ್ನದ ಪಂದ್ಯಾಟಗಳು ಭಾರತೀಯ ಕಾಲಮಾನ 3:30 ಗಂಟೆಗೆ ಪ್ರಾರಂಭವಾದರೆ, ರಾತ್ರಿಯ ಪಂದ್ಯಗಳು 7:30 ಗಂಟೆಗೆ ಪ್ರಾರಂಭವಾಗಲಿದೆ.
RCB ಅಭಿಮಾನಿಗಳಿಗೆ ನಿರಾಸೆ: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ)ಸೇರಿದಂತೆ ಎಲ್ಲ ಎಂಟು ತಂಡಗಳು ತನ್ನ ‘ಹೋಮ್’ ಹಾಗೂ ‘ಅವೇ’ ಪಂದ್ಯಗಳನ್ನು ತಣಸ್ಥ ತಾಣಗಳಲ್ಲಿ ಆಡಲಿವೆ.
ಇದರಿಂದಾಗಿ ಬೆಂಗಳೂರಿನ ಪಂದ್ಯಗಳನ್ನು ಚಿನ್ನಸ್ವಾಮಿ ಮೈದಾನದಲ್ಲಿ ನೋಡುವ ಆರ್ಸಿಬಿ ಅಭಿಮಾನಿಗಳ ಕನಸಿಗೆ ಹಿನ್ನೆಡೆಯಾಗಿದೆ. ಆರಂಭಿಕ ಹಂತದಲ್ಲಿ ಟೂರ್ನಿಯು ಮುಚ್ಚಿದ ಕ್ರೀಡಾಂಗಣದಲ್ಲಿ ಆಯೋಜನೆಯಾಗಲಿದ್ದು, ಮುಂದಿನ ಹಂತದಲ್ಲಿ ಕ್ರೀಡಾಂಗಣಕ್ಕೆ ಪ್ರವೇಶಿಸಲು ಪ್ರೇಕ್ಷಕರಿಗೆ ಅನುಮತಿ ನೀಡಬೇಕೇ ಎಂಬುದರ ಕುರಿತು ಐಪಿಎಲ್ ಆಡಳಿತ ಮಂಡಳಿ ನಿರ್ಧರಿಸಲಿದೆ.
RCB ವೇಳಾಪಟ್ಟಿ ಇಂತಿದೆ:
ಆರ್ಸಿಬಿ / ಮುಂಬೈ, ಏ.9, ಶುಕ್ರವಾರ, ತಾಣ: ಚೆನ್ನೈ, ಸಮಯ: ರಾತ್ರಿ 7.30ಕ್ಕೆ
ಆರ್ಸಿಬಿ / ಹೈದರಾಬಾದ್, ಏ.14, ಬುಧವಾರ, ತಾಣ: ಚೆನ್ನೈ, ಸಮಯ: ರಾತ್ರಿ 7.30ಕ್ಕೆ
ಆರ್ಸಿಬಿ / ಕೋಲ್ಕತ್ತ, ಏ.18, ಭಾನುವಾರ, ತಾಣ: ಚೆನ್ನೈ, ಸಮಯ: ಸಂಜೆ 3.30ಕ್ಕೆ
ಆರ್ಸಿಬಿ / ರಾಜಸ್ಥಾನ, ಏ.22, ಗುರುವಾರ, ತಾಣ: ಮುಂಬೈ, ಸಮಯ: ರಾತ್ರಿ 7.30ಕ್ಕೆ
ಆರ್ಸಿಬಿ / ಚೆನ್ನೈ, ಏ.25, ಭಾನುವಾರ, ತಾಣ: ಮುಂಬೈ, ಸಮಯ: ಸಂಜೆ 3.30ಕ್ಕೆ
ಆರ್ಸಿಬಿ / ಡೆಲ್ಲಿ, ಏ.27, ಮಂಗಳವಾರ, ತಾಣ: ಅಹಮದಾಬಾದ್, ಸಮಯ: ರಾತ್ರಿ 7.30ಕ್ಕೆ
ಆರ್ಸಿಬಿ / ಪಂಜಾಬ್, ಏ.30, ಶುಕ್ರವಾರ, ತಾಣ: ಅಹಮದಾಬಾದ್, ಸಮಯ: ರಾತ್ರಿ 7.30ಕ್ಕೆ
ಆರ್ಸಿಬಿ / ಕೋಲ್ಕತ್ತ, ಮೇ 3, ಸೋಮವಾರ, ತಾಣ: ಅಹಮದಾಬಾದ್, ಸಮಯ: ರಾತ್ರಿ 7.30ಕ್ಕೆ
ಆರ್ಸಿಬಿ / ಪಂಜಾಬ್, ಮೇ 6, ಗುರುವಾರ, ತಾಣ: ಅಹಮದಾಬಾದ್, ಸಮಯ: ರಾತ್ರಿ 7.30ಕ್ಕೆ
ಆರ್ಸಿಬಿ / ಹೈದರಾಬಾದ್, ಮೇ 9, ಭಾನುವಾರ, ತಾಣ: ಕೋಲ್ಕತ್ತ, ಸಮಯ: ರಾತ್ರಿ 7.30ಕ್ಕೆ
ಆರ್ಸಿಬಿ / ಡೆಲ್ಲಿ, ಮೇ 14, ಶುಕ್ರವಾರ, ತಾಣ: ಕೋಲ್ಕತ್ತ, ಸಮಯ: ರಾತ್ರಿ 7.30ಕ್ಕೆ
ಆರ್ಸಿಬಿ/ ರಾಜಸ್ಥಾನ, ಮೇ 16, ಭಾನುವಾರ, ತಾಣ: ಕೋಲ್ಕತ್ತ, ಸಮಯ: ಸಂಜೆ 3.30ಕ್ಕೆ
ಆರ್ಸಿಬಿ / ಮುಂಬೈ, ಮೇ 20, ಗುರುವಾರ, ತಾಣ: ಕೋಲ್ಕತ್ತ, ಸಮಯ: ರಾತ್ರಿ 7.30ಕ್ಕೆ
ಆರ್ಸಿಬಿ / ಚೆನ್ನೈ, ಮೇ 23, ಭಾನುವಾರ, ತಾಣ: ಕೋಲ್ಕತ್ತ, ಸಮಯ: ರಾತ್ರಿ 7.30ಕ್ಕೆ
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

