ಬೆತ್ತಲೆ ಸತ್ಯ-ಸುಳ್ಳಿನ ಸೆರಗು / ಧರ್ಮಕ್ಕೆ ಜಾತಿಯೇ ಕೊಡಲಿಪೆಟ್ಟು

ಭಾಗ-೧: ರಾಜ್ಯದೆಲ್ಲೆಡೆ ಹಲವಾರು ‘ಜಾತಿ’ಗಳ ಮುಖಂಡರು ತಮ್ಮ ತಮ್ಮ ಜಾತಿಗಳಿಗೆ ಮೀಸಲಾತಿಗಳನ್ನು ನೀಡಬೇಕು ಅಂತ ಬೀದಿಗಿಳಿದಿದ್ದಾರೆ.

ದುರಂತವೆಂದರೆ, ಇದರ ನೇತೃತ್ವ ವಹಿಸಿರುವುದು ” ಜಾತಿ-ಕುಲಗಳ ಹಂಗಿಲ್ಲದೆ ಎಲ್ಲರನ್ನೂ, ಎಲ್ಲವನ್ನೂ ಸಮಾನವಾಗಿ ಪರಿಗಣಿಸಿ, ಸರ್ವಸಂಗ ಪರಿತ್ಯಾಗಿಗಳಾಗಿ ಸಮ ಸಮಾಜದ ಕಂಕಣ ತೊಟ್ಟು, ಅರಿಷಡ್ವರ್ಗಗಳ  ಸಮೀಕರಣದ ಕಾವಿಯೇರಿಸಿ ಧರ್ಮ ರಕ್ಷಣೆಯ ಜವಾಬ್ದಾರಿ ಹೊತ್ತಿರುವ ‘ಕೆಲವು’ ಮಠಾಧಿಪತಿಗಳು” ಹಾಗೂ ಜಾತಿ ಬೇಧವಿಲ್ಲದೇ ಸರ್ವ ಜನಾಂಗಕ್ಕೂ ಸಮಾನ ಸೇವೆ ಒದಗಿಸುವೆನೆಂದು ಅಂತಃಕರಣ, ಭಗವದ್ಗೀತೆ, ಸಂವಿಧಾನದ ಮೇಲೆ ಆಣೆ ಪ್ರಮಾಣಗಳನ್ನು ಮಾಡಿ ಜನರಿಂದಲೇ ಆಯ್ಕೆಯಾಗುವ “ಜನಪ್ರತಿನಿಧಿಗಳು”.

ಮೊದಲನೆಯದಾಗಿ ಮಠಾಧಿಪತಿಗಳ ವಿಚಾರಕ್ಕೆ ಬರುವುದಾದರೆ…ಮನುಷ್ಯ ತನ್ನ ಜೀವನದಲ್ಲಿ ಸಹಜವಾಗಿ ಅನುಭವಿಸಬೇಕಾದ ಅರಿಷಡ್ವರ್ಗಗಳನ್ನು ತ್ಯಜಿಸಿ, ಯಾವುದೇ ಭವಬಂಧನಕ್ಕೆ ಒಳಗಾಗದೇ, ತನ್ನ ಎಲ್ಲಾ ರಕ್ತ ಸಂಬಂಧಗಳ ಸಂಕೋಲೆಗಳನ್ನು ಹರಿದುಕೊಂಡು, ಅಗ್ನಿಯ ಅನ್ವರ್ಥ ಪವಿತ್ರವಾದ ಕಾವಿಯನ್ನು ಧರಿಸಿ ಯಾವುದೇ ಜಾತಿಗಳ ಹಂಗಿಲ್ಲದೇ ಲೋಕ ಕಲ್ಯಾಣಕ್ಕೆ ಪಣ ತೊಟ್ಟು

” ಧರ್ಮ ರಕ್ಷಣೆ “ಗೆ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಇವರು(ಇದು ಜಾತಿಯಾಧಾರಿತರಾದ ಕೆಲವರಿಗೆ ಮಾತ್ರ ಅನ್ವಯ. ಯಾಕೆಂದರೆ ಜಾತಿಬೇಧವಿಲ್ಲದೇ ಅನ್ನ,ಆಶ್ರಯ, ವಿದ್ಯೆ ನೀಡಿ ಜಗತ್ತಿಗೇ ಆದರ್ಶರಾದ ಮಠಾಧಿಪತಿಗಳು ಜನಮಾನಸದಲ್ಲಿ ಸರ್ವದಾ ಪವಿತ್ರರಾಗಿಯೇ ಉಳಿದಿದ್ದಾರೆ).

ಇಂದು ತಮ್ಮ ಆಣೆ ಪ್ರಮಾಣಗಳನ್ನೇ ಮರೆತು ಇಂದು ತಮ್ಮ ತಮ್ಮ ಜಾತಿಗಳ ಹೆಸರಿನಲ್ಲಿ ಬೀದಿಯಲ್ಲಿ ಕುಳಿತು ಒತ್ತಾಯಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ” ಮಠಾಧಿಪತಿ”ಎಂಬ ಕಾರಣ ರಾಜ್ಯದ ಮುಖ್ಯಮಂತ್ರಿಯನ್ನೇ ಬೆದರಿಸುವ ತಂತ್ರ ಮಾಡುತ್ತಿದ್ದಾರೆ. 

ಇವರ ಈ ಪ್ರತಿಭಟನೆಗಳಿಂದಾಗಿ ರಾಜ್ಯದ ಜನತೆಗೆ ಕಾವಿಧಾರಿಗಳ ಮೇಲೆ ಭಕ್ತಿಗಿಂತ ಬೇಸರ ಹೆಚ್ಚಳವಾಗುತ್ತಿದೆ. ಈ ಬಗ್ಗೆ ಜಾತಿಬೇಧ ಭಾವಿಸದೇ ಸರ್ವ ಜನಾಂಗಕ್ಕೂ ಅನ್ನ,ವಿದ್ಯೆ,ಆಶ್ರಯ ನೀಡಿ ಜಗತ್ತಿಗೇ ಮಾದರಿಯಾಗಿರುವ ಸಿದ್ಧಗಂಗಾ ಶ್ರೀಗಳು ಹಾಗೂ ಕನೇರಿ ಮಠದ ಪೂಜ್ಯರೂ ಸೇರಿದಂತೆ  ಧಾರ್ಮಿಕ ಗುರುವರ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಮ್ಮ ನಮ್ಮಲ್ಲೇ ಜಾತಿ ವೈಷಮ್ಯ ಮೆರೆಯುವ ಬದಲಾಗಿ ಇವರೆಲ್ಲರೂ ನಮ್ಮ ಧರ್ಮದ ಮೇಲೆ ಹಿಂದಿನಿಂದಲೂ ಷಡ್ಯಂತ್ರ ರೂಪಿಸಿ ಮತಾಂತರದ ಮೂಲಕ ನಮ್ಮ ಧರ್ಮವನ್ನು ಅವನತಿಯತ್ತ ಒಯ್ಯಲು ಹಗಲಿರುಳು ಶ್ರಮಿಸುತ್ತಿರುವ ‘ಹಲವು’ ಮಿಷಿನರಿಗಳು ಹಾಗೂ ಮದರಸಾಗಳ ಮೇಲೆ ಒಟ್ಟಾಗಿ ಯುದ್ಧ ಸಾರಿದ್ದರೆ, ನಾವು ಇಂದು ಮತಾಂತರ ನಿಷೇಧ ಕಾನೂನು ಜಾರಿಗೆ ತನ್ನಿ ಎಂದು ಸರ್ಕಾರದ ಮುಂದೆ ಅಲವತ್ತುಕೊಳ್ಳುವ ಹಾಗೂ ಒಬ್ಬ ಶಾಸಕನೇ ತನ್ನ ತಾಯಿಯನ್ನು ದೂರ ಮಾಡಿಕೊಂಡು ತನ್ನದೇ ಹುಟ್ಟೂರಿನಲ್ಲಿ ಕೈಚೆಲ್ಲಿ ಕುಳಿತು ಅಸಹಾಯಕನಾಗಿ ಅಳುವ ದುಃಸ್ಥಿತಿ ಬರುತ್ತಿರಲಿಲ್ಲ.

“ಧರ್ಮವೆಂಬ ಹೆಮ್ಮರಕ್ಕೆ ತನ್ನ ಒಡಲಲ್ಲಿರುವ ಜಾತಿಯೆಂಬ ಕೊಡಲಿಯ ಕಾವೇ ಮೂಲ” ಎಂಬ ಬೆತ್ತಲೆ ಸತ್ಯ ನಮಗೆ ಅರಿವಾಗುವವರೆಗೂ ಧರ್ಮ ರಕ್ಷಣೆ ಅಸಾಧ್ಯ ಎಂಬ ಮಾತನ್ನು ನೆನಪಿಸುತ್ತಾ….ಇಂತಿ ನಿಮ್ಮವ ಜಿ.ಎನ್.ಪ್ರದೀಪ್

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

ರಾಜಕೀಯ

ಜನರ ತೀರ್ಪನ್ನು ಅವಮಾನಿಸದೆ ವಿಜಯ್‌ಗೆ ಅವಕಾಶ ನೀಡಿ: ತಮಿಳುನಾಡು ರಾಜ್ಯಪಾಲರ ನಡೆಗೆ ಕಮಲ್ ಹಾಸನ್ ಗರಂ

ಜನರ ತೀರ್ಪನ್ನು ಅವಮಾನಿಸದೆ ವಿಜಯ್‌ಗೆ ಅವಕಾಶ ನೀಡಿ: ತಮಿಳುನಾಡು ರಾಜ್ಯಪಾಲರ ನಡೆಗೆ ಕಮಲ್

ತಮಿಳುನಾಡಿನಲ್ಲಿ ನೂತನ ಸರಕಾರ ರಚನೆಗೆ ವಿಜಯ್ (Vijay) ನೇತೃತ್ವದ ಟಿವಿಕೆ (TVK) ಭರದಿಂದ ಸಿದ್ಧತೆ ನಡೆಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯಪಾಲರಾದ ರಾಜೇಂದ್ರ ಮಾಡಿ ಸರಕಾರ ಅರ್ಲೇಕರ್‌ರನ್ನು ಭೇಟಿ ರಚನೆಗೆ ವಿಜಯ್ ಹಕ್ಕು ಮಂಡಿಸಿದ್ದಾರೆ. ಆದರೆ

[ccc_my_favorite_select_button post_id="121857"]
ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ – ಡಿಸಿಎಂ‌ ಡಿ.ಕೆ. ಶಿವಕುಮಾರ್

ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ –

"ಬೌರಿಂಗ್ ಆಸ್ಪತ್ರೆ (Bowring Hospital) ಕಾಂಪೌಂಡ್ ಕುಸಿದು ಏಳು ಜನ ಮೃತಪಟ್ಟಿರುವುದು ಅತ್ಯಂತ ದುಃಖಕರ ವಿಚಾರ. ಇಂತಹ ಘಟನೆಗಳು ಆಗಬಾರದಿತ್ತು. ನನಗೂ ಇದರಿಂದ ಆಘಾತವಾಗಿದೆ" ಎಂದು ಡಿಸಿಎಂ ಡಿ.ಕೆ‌. ಶಿವಕುಮಾರ್ (D.K. Shivakumar) ಬೇಸರ

[ccc_my_favorite_select_button post_id="121538"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

CSK ಅಭಿಮಾನಿಗಳಿಗೆ ಮತ್ತೆ ನಿರಾಸೆ..

CSK ಅಭಿಮಾನಿಗಳಿಗೆ ಮತ್ತೆ ನಿರಾಸೆ..

ಚೆನ್ನೈ ಸೂಪರ್ ಕಿಂಗ್ಸ್ (CSK) ಅಭಿಮಾನಿಗಳಿಗೆ ಮತ್ತೊಮ್ಮೆ ನಿರಾಶೆಯಾಗಲಿದೆ. ಎಂಎಸ್ ಧೋನಿಯನ್ನು (MS Dhoni) ಮೈದಾನದಲ್ಲಿ ಕಣ್ಣುಂಬಿಸಿಕೊಳ್ಳಲು ಎದುರು ನೋಡುತ್ತಿದ್ದವರಿಗೆ ಈ ಆವೃತ್ತಿಯಲ್ಲಿ ಸಾಧ್ಯವಾಗುತ್ತದೆಯೋ ಇಲ್ಲವೋ ಎಂಬ ಆತಂಕ ಎದುರಾಗಿದೆ‌.

[ccc_my_favorite_select_button post_id="121736"]
ಬಕ್ರೀದ್; ಅಕ್ರಮ ಗೋವು ಸಾಗಣೆ / ಹತ್ಯೆ ಮಾಡಿದರೆ ಜೈಲು.. ಜಿಲ್ಲಾಧಿಕಾರಿ ವಾರ್ನಿಂಗ್

ಬಕ್ರೀದ್; ಅಕ್ರಮ ಗೋವು ಸಾಗಣೆ / ಹತ್ಯೆ ಮಾಡಿದರೆ ಜೈಲು.. ಜಿಲ್ಲಾಧಿಕಾರಿ ವಾರ್ನಿಂಗ್

ಗೋವುಗಳ ಅಕ್ರಮ ಸಾಗಣೆ ಅಥವಾ ಹತ್ಯೆ (illegal cow transport/slaughter) ಮಾಡಿದಲ್ಲಿ ಏಳು ವರ್ಷ ಜೈಲು, ಹಾಗೂ ರೂ 10 ಲಕ್ಷ ಗಳ ವರೆಗೆ ದಂಡ ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.

[ccc_my_favorite_select_button post_id="121833"]
ದೊಡ್ಡಬಳ್ಳಾಪುರ:  ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದೊಡ್ಡಬಳ್ಳಾಪುರ: ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದಾಬಸ್ ಪೇಟೆ ಮಾರ್ಗವಾಗಿ ದೊಡ್ಡಬಳ್ಳಾಪುರ ಕಡೆಗೆ ತೆರಳುತ್ತಿದ್ದ ಕಾರು, ಏಕಾಏಕಿ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬದಿಯ ಡಿವೈಡರ್ಗೆ ಡಿಕ್ಕಿ (Accident) ಹೊಡೆದಿದೆ.

[ccc_my_favorite_select_button post_id="121485"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]