
ಬೆಂಗಳೂರು: ಬೆಂಗಳೂರು : ಕುಮಾರಸ್ವಾಮಿ ಮಾಡಿದ 5 ಕೋಟಿ ಡೀಲ್ ಆರೋಪದಿಂದ ನಾನು ನೊಂದಿದ್ದು ದೂರನ್ನು ವಾಪಸ್ ಪಡೆದಿರುವುದಾಗಿ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ರಮೇಶ್ ಜಾರಕಿ ಹೋಳಿ ಅವರಿಗೆ ಸಚಿವ ಸ್ಥಾನ ಹೋಗಬೇಕೆಂದು ನಾನು ಹೀಗೆ ಮಾಡಿಲ್ಲ. ಸಂತ್ರಸ್ತೆಗೆ ನ್ಯಾಯ ಸಿಗಬೇಕು ಎಂದು ನಾನು ಹೀಗೆ ಮಾಡಿದೆ. ಯುವತಿಯನ್ನು ಸಮಾಜ ಸಂಶಯದಿಂದ ನೋಡುವಂತಾಗಿದೆ.
ನನ್ನ ಮೇಲೆ ಕುಮಾರಸ್ವಾಮಿ 5 ಕೋಟಿಯ ಆರೋಪವನ್ನು ಹೊರಿಸಿದ್ದಾರೆ. ನಾನು ಇದರಿಂದ ಹೊರಗೆ ಬರಬೇಕು. ಅಲ್ಲದೆ ಈ ಐದು ಕೋಟಿ ಡೀಲ್ ಬಗ್ಗೆ ತನಿಖೆಯಾಗಬೇಕು ಎಂದು ದಿನೇಶ್ ಹೇಳಿಕೆ ನೀಡಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

