
ದೊಡ್ಡಬಳ್ಳಾಪುರ: ಡಿ ಬಾಸ್ ದರ್ಶನ್ ಅಭಿಮಾನಿಗಳು ಜಾತಕ ಪಕ್ಷಿಯಂತೆ ಕಾಯುತ್ತಿದ್ದ ಬಹುನಿರೀಕ್ಷಿತ ರಾಬರ್ಟ್ ಚಿತ್ರ ಮಾರ್ಚ್ 11ಕ್ಕೆ ತೆರೆ ಕಾಣಲಿದೆ.

ತರುಣ್ ಸುಧೀರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ರಾಬರ್ಟ್ ಸಿನಿಮಾ ರಿಲೀಸ್ಗೆ ಒಂದು ದಿನ ಮಾತ್ರ ಬಾಕಿ ಇದೆ. ದರ್ಶನ್ ಅಭಿನಯದ ರಾಬರ್ಟ್ ಚಿತ್ರ ಸೆನ್ಸಾರ್ನಲ್ಲಿ ಪಾಸಾಗಿದೆ. ಚಿತ್ರಕ್ಕೆ ಯು/ಎ ಪ್ರಮಾಣಪತ್ರ ಸಿಕ್ಕಿದೆ.
ಈಗಾಗಲೇ ಹೈದರಾಬಾದ್ ಮತ್ತು ಹುಬ್ಬಳ್ಳಿ ಎರಡೂ ಕಡೆ “ರಾಬರ್ಟ್’ ಪ್ರೀ-ರಿಲೀಸ್ ಇವೆಂಟ್ ನಡೆಸಿರುವ ಚಿತ್ರತಂಡ, ಏಕಕಾಲಕ್ಕೆ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲೂ “ರಾಬರ್ಟ್’ನ ತೆರೆಗೆ ತರುವ ಪ್ಲಾನ್ ಹಾಕಿಕೊಂಡಿದೆ.
ಇದೇ ಮೊದಲ ಬಾರಿಗೆ ದೊಡ್ಡಬಳ್ಳಾಪುರ ನಗರದ ರಾಜ್ ಕಮಲ್, ಸೌಂದರ್ಯ ಮಹಲ್ ಹಾಗೂ ವೈಭವ್ ಸೇರಿದಂತೆ ಮೂರು ಚಿತ್ರಮಂದಿರಗಳಲ್ಲಿ ಏಕ ಕಾಲದಲ್ಲಿ ರಾಬರ್ಟ್ ಚಿತ್ರ ತೆರೆ ಕಾಣುತ್ತಿದೆ.
ಈ ಮುಂಚೆ ದೊಡ್ಡಬಳ್ಳಾಪುರದಲ್ಲಿ ಎರಡು ಚಿತ್ರಮಂದಿರಗಳಲ್ಲಿ ಬಹುತೇಕ ಚಿತ್ರಗಳು ಪ್ರದರ್ಶನ ಕಂಡಿದ್ದವು. ಆದರೆ ಏಕಕಾಲದಲ್ಲಿ ಮೂರು ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗುತ್ತಿರುವುದು ಇದೇ ಮೊದಲೆನ್ನುತ್ತಾರೆ, ಸೌಂದರ್ಯ ಮಹಲ್ ಚಿತ್ರಮಂದಿರದ ವ್ಯವಸ್ಥಾಪಕ ಚಿನ್ನಪ್ಪ.
ಒಂದು ಮಾಸ್ ಎಂಟರ್‌ಟೈನ್ಮೆಂಟ್ ಸಿನಿಮಾದಲ್ಲಿ ಏನೇನು ಇರಬೇಕೋ, ಅದೆಲ್ಲವೂ “ರಾಬರ್ಟ್’ನಲ್ಲಿದೆ. ಅದರಲ್ಲೂ ದರ್ಶನ್ ಫ್ಯಾನ್ಸ್ ನಿರೀಕ್ಷಿಸುವ ಆ್ಯಕ್ಷನ್, ಸೆಂಟಿಮೆಂಟ್, ಎಮೋಶನ್ಸ್, ಕಾಮಿಡಿ, ಎಲ್ಲ ಮಾಸ್ ಎಂಟರ್‌ಟೈನ್ಮೆಂಟ್ ಎಲಿಮೆಂಟ್ಸ್ ಇದರಲ್ಲಿದೆ. “ರಾಬರ್ಟ್’ ದರ್ಶನ್ ಅವರ ಸಿನಿಮಾ ಕೆರಿಯರ್‌ನ 53ನೇ ಸಿನಿಮಾ. ಒಬ್ಬ ಅಭಿಮಾನಿಯಾಗಿ ಅವರ 52 ಸಿನಿಮಾಗಳಲ್ಲಿ ಯಾವ್ಯಾವ ಅಂಶಗಳು ನನಗೆ ಖುಷಿ ನೀಡಿತ್ತೋ, ಅದೆಲ್ಲ ಅಂಶಗಳನ್ನೂ ಇಟ್ಟುಕೊಂಡು, ಅದರ ಜೊತೆ ಒಂದಷ್ಟು ಹೊಸ ವಿಷಯಗಳನ್ನು ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೇವೆ ಎಂದಿದ್ದಾರೆ ಚಿತ್ರದ ನಿರ್ದೇಶಕ ತರುಣ್ ಸುಧೀರ್.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

