
ದೊಡ್ಡಬಳ್ಳಾಪುರ: ತಾಲೂಕು ಛಲವಾದಿ ಮಹಾಸಭಾ ಗೆ ನೂತನ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಗಿದೆ.

ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸಮುದಾಯದ ಹಿರಿಯರ ಸಭೆಯಲ್ಲಿ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಪ್ರಕ್ರಿಯೆ ನಡೆಯಿತು.
ಅಧ್ಯಕ್ಷರಾಗಿ ಸಿ.ಗುರುರಾಜಪ್ಪ, ತಾಲ್ಲೂಕು ಕಾರ್ಯಾಧ್ಯಕ್ಷರಾಗಿ ಕೊನಘಟ್ಟ ಎಂ.ರಾಮಾಂಜಿನಪ್ಪ, ಉಪಾಧ್ಯಕ್ಷರಾಗಿ ಕನ್ನಮಂಗಲ ವಿ.ವೆಂಕಟೇಶ್, ಪ್ರಧಾನ ಕಾರ್ಯದರ್ಶಿಯಾಗಿ ಎನ್.ರಾಜುಸಣ್ಣಕ್ಕಿ, ಸಂಘಟನಾ ಕಾರ್ಯದರ್ಶಿಯಾಗಿ ಕೋಲಿಗೆರೆ ವಿಜಯಕುಮಾರ್, ಖಜಾಂಚಿಯಾಗಿ ಎಂ.ಕಾಂತರಾಜು.ಮಹಿಳಾ ಘಟಕದ ಅಧ್ಯಕ್ಷರಾಗಿ ಚನ್ನಾದೇವಿ ಅಗ್ರಹಾರದ ಕಮಲಮ್ಮ ಅವರನ್ನು ಮತ್ತು ಮಾದ್ಯಮ ವಕ್ತಾರರಾಗಿ ಮಾಳವ ನಾರಾಯಣ್ ಆಯ್ಕೆಯಾದರು.
ಈ ಸಂದರ್ಭದಲ್ಲಿ ಮಾತನಾಡಿದ ಮಹಾಸಭಾದ ಅಧ್ಯಕ್ಷ ಸಿ.ಗುರುರಾಜಪ್ಪ ಮಾತನಾಡಿ ನೂತನ ಕಾರ್ಯಕಾರಿ ಸಮಿತಿಯು ಸಕ್ರಿಯವಾಗಿ ತಾಲ್ಲೂಕಿನಲ್ಲಿ ಸಮುದಾಯವನ್ನು ಸಂಘಟನೆ ಮಾಡಲಿದ್ದು ಮುಂದಿನ ದಿನಗಳಲ್ಲಿ ಯುವ ಘಟಕವನ್ನು ಮಾಡಲಾಗುವುದು ಎಂದರು.
ಸಭೆಯಲ್ಲಿ ಗೌರವ ಅಧ್ಯಕ್ಷ ತಿಮ್ಮರಾಯಪ್ಪ, ನಿರ್ಗಮಿತ ಅಧ್ಯಕ್ಷ ವಿ.ಜಿ.ಬಾಲಕೃಷ್ಣ, ಸಮೂದಾಯದ ಮುಖಂಡರಾದ ಜಿ.ಲಕ್ಷ್ಮೀಪತಿ, ಮಲ್ಲಾರಾಜು, ತಳಗವಾರ ಮುನಿಯಪ್ಪ, ಮರಿಯಪ್ಪ, ಗೂಳ್ಯಹನುಮಣ್ಣ, ಶಂಕರಮೂರ್ತಿ ಮದ್ದೂರಪ್ಪ ಛಲವಾದಿ ಸುರೇಶ್ ಉಪಸ್ಥಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

