
ದೊಡ್ಡಬಳ್ಳಾಪುರ: ತಾಲೂಕಿನ ಪ್ರಸಿದ್ದ ಮಧುರೆ (ಕನಸವಾಡಿ)ಯಲ್ಲಿ ಶ್ರೀ ಶನಿಮಹಾತ್ಮ ಸ್ವಾಮಿ ಬ್ರಹ್ಮ ರಥೋತ್ಸವ ಮಾರ್ಚ್.23ರಂದು ಮಧ್ಯಾಹ್ನ 12-45ರಿಂದ 1-15ರ ವರೆಗೆ ನಡೆಯಲಿದೆ ಎಂದು ದೇವಾಲಯದ ಧರ್ಮಾಧಿಕಾರಿ ಕೆ.ವಿ.ಪ್ರಕಾಶ್ ಹರಿತಲೇಖನಿಗೆ ತಿಳಿಸಿದ್ದಾರೆ.

ಬ್ರಹ್ಮರಥೋತ್ಸವದ ಅಂಗವಾಗಿ ಮಾ.22ರಿಂದ 29ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಪೌರಾಣಿಕ ನಾಟಕಗಳನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದ ವಿವರ: ಮಾ.22ರಂದು ಸಂಜೆ 6 ನಂತರ ಗಣಪತಿ ಪ್ರಾರ್ಥನೆ, ಪುಣ್ಯಾಹ, ರಕ್ಷಾಬಂಧನ, ಧ್ವಜಾರೋಹಣ, ವಾಸ್ತು ಹೋಮ, ಕಳಶ ಸ್ಥಾಪನೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ, ರಾಜಾ ಸತ್ಯ ವ್ರತ ಅಥವಾ ಶನಿ ಪ್ರಭಾವ ನಾಟಕ ನಡೆಯಲಿದೆ.
ಮಾ.23ರಂದು ಬೆಳಗ್ಗೆ 8ಗಂಟೆಯಿಂದ ಕಲಶಾರ್ಚನೆ, ಶ್ರೀ ಮಹಾಗಣಪತಿ, ನವಗ್ರಹ, ಶ್ರೀ ಶನೇಶ್ವರ ಹೋಮ, ಮಧ್ಯಾಹ್ನ 12-45ರಿಂದ 1-15ರ ಮಿಥುನ ಲಗ್ನದಲ್ಲಿ ರಥಾರೋಹಣ ಮತ್ತು ಬ್ರಹ್ಮ ರಥೋತ್ಸವ. ರಾತ್ರಿ 9 ಗಂಟೆಯ ನಂತರ ಧೂಳೋತ್ಸವ, ಪಲ್ಲಕಿ ಉತ್ಸವ, ಜೂ.ರಾಜ್ ಕುಮಾರ್ ತಂಡದಿಂದ ಸಂಗೀತ ಸಂಜೆ ಕಾರ್ಯಕ್ರಮ ಹಾಗೂ ರಾಜಾ ಸತ್ಯವ್ರತ ನಾಟಕ ನಡೆಯಲಿದೆ.
ಮಾ.24ರಂದು ರಾತ್ರಿ 9ರ ನಂತರ ಶ್ರೀ ಶನಿಮಹಾತ್ಮ ಸ್ವಾಮಿ ಮತ್ತು ಶ್ರೀ ಆಂಜನೇಯ ಸ್ವಾಮಿ ಬೆಳ್ಳಿ ರಥೋತ್ಸವ. ನವೀನ್ ಶಂಕರ್ ತಂಡದಿಂದ ಸಂಗೀತ ರಸ ಸಂಜೆ ಕಾರ್ಯಕ್ರಮ, ಚಿತ್ರಕೇತು ಮಹಾರಾಜ ಅಥವಾ ಅಂಗೀರಸನ ಗರ್ವಭಂಗ ನಾಟಕ ನಡೆಯಲಿದೆ.
ಮಾ.25ರಂದು ರಾತ್ರಿ 8ರ ನಂತರ ಶ್ರೀ ಶನಿಮಹಾತ್ಮ ಸ್ವಾಮಿಯ ಬೆಳ್ಳಿ ಪಲ್ಲಕ್ಕಿ ಉತ್ಸವ ಮತ್ತು ಕೀಲು ಕುದುರೆ, ಕುರುಕ್ಷೇತ್ರ ಅಥವಾ ಧರ್ಮರಾಜ್ಯ ಸ್ಥಾಪನೆ ನಾಟಕ ನಡೆಯಲಿದೆ.
ಮಾ.26ರಂದು ಸಂಜೆ 7ರ ನಂತರ ಅಶ್ವವಾಹನೋತ್ಸವ ಮತ್ತು ಪ್ರಸಾದ ವಿನಿಯೋಗ, ಸಂಗೀತ ಮೆಲೋಡಿಸ್ ಅವರಿಂದ ಸಂಗೀತ ಸಂಜೆ ಕಾರ್ಯಕ್ರಮ, ದುರ್ಯೋಧನನ ಗರ್ವಭಂಗ ನಾಟಕ, ರಾತ್ರಿ 12ಕ್ಕೆ ಮದ್ದಿನ ಮರದ ವಿಶೇಷ ಕಾರ್ಯಕ್ರಮ, ನಡೆಯಲಿದೆ.
ಮಾ.27ರಂದು ರಾತ್ರಿ 9ಕ್ಕೆ ಮುತ್ತಿನ ಪಲ್ಲಕ್ಕಿಯಲ್ಲಿ ಕಾಕವಾಹನೋತ್ಸವ ಮತ್ತು ಸಂಗೀತ ಸಂಜೆ, ಕುರುಕ್ಷೇತ್ರ ನಾಟಕ ನಡೆಯಲಿದೆ.
ಮಾ.28ರಂದು ರಾತ್ರಿ 9ರ ನಂತರ ಚಂದ್ರಮಂಡಲೋತ್ಸವ, ಕೀಲು ಕುದುರೆ ಕಾರ್ಯಕ್ರಮ, ರಾಜಾ ಸತ್ಯವ್ರತ ಅಥವಾ ಶನಿ ಪ್ರಭಾವ ನಾಟಕ ನಡೆಯಲಿದೆ.
ಮಾ.29ರಂದು ಸುಪ್ರಭಾತೋತ್ಸವ ಮಾತ್ತು ಡೊಳ್ಳು ಕುಣಿತ ನಡೆಯಲಿದೆ.(ಸಾಂದರ್ಭಿಕ ಚಿತ್ರ ಬಳಸಲಾಗಿದೆ)
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

