
ದೊಡ್ಡಬಳ್ಳಾಪುರ: ನೀಲಿಗಿರಿ ತೋಪಿಗೆ ಬಿದ್ದ ಬೆಂಕಿ ತೀವ್ರವಾಗಿ ವ್ಯಾಪಿಸುತ್ತಿರುವುದರಿಂದ ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ರಾಂಪುರ ಗ್ರಾಮಕ್ಕೆ ಬೆಂಕಿ ತಗುಲುವ ಆತಂಕ ಎದುರಾಗಿದೆ.

ಸುಮಾರು 1ಗಂಟೆ ಸಮಯದಲ್ಲಿ ನೀಲಿಗಿರಿ ತೋಪಿಗೆ ಬೆಂಕಿ ತಗುಲಿದ್ದು, ಬೆಂಕಿಯ ಕೆನ್ನಾಲಿಗೆಗೆ ಸುಮಾರು 30ಕ್ಕು ಹೆಚ್ಚು ಎಕರೆ ನೀಲಗಿರಿ ತೋಪು ಹಾನಿಯಾಗಿದೆ.
ಬೆಂಕಿಯ ಕೆನ್ನಾಲಿಗೆ ರಾಂಪುರ ಗ್ರಾಮದ ಸಮೀಪಕ್ಕೆ ಬಂದಿದ್ದು, ಗ್ರಾಮಕ್ಕೆ ಬೆಂಕಿ ವ್ಯಾಪಿಸದಂತೆ ಬೆಂಕಿ ನಂದಿಸಲು ಗ್ರಾಮಸ್ಥರು ಶ್ರಮಿಸುತ್ತಿದ್ದಾರೆ.
ಬೆಂಕಿ ವ್ಯಾಪಿಸಿದ ಕಾರಣ ಈ ವ್ಯಾಪ್ತಿಯಲ್ಲಿ ದಟ್ಟಹೊಗೆ ತುಂಬಿದ್ದು ಸಾರ್ವಜನಿಕರು ಪರದಾಡುವಂತಾಗಿದೆ.
ಅಗ್ನಿಶಾಮಕ ದಳಕ್ಕೆ ಕರೆಮಾಡಿದರು, ನೀಲಗಿರಿ ತೋಪಿಗೆ ಬೆಂಕಿ ಬಿದ್ದರೆ ಬರುವುದಿಲ್ಲವೆನ್ನುತ್ತಿದ್ದಾರೆಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

