
ಬೆಂಗಳೂರು: ನಟ ಚಾಲೆಂಜಿಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರ ಬಿಡುಗಡೆಯಾದ ಮೊದಲ ದಿನದಿಂದ ಬರಪೂರ ಯಶಸ್ಸು ತನ್ನದಾಗಿಸಿಕೊಂಡಿದೆ.

ಪೈರೆಸಿ ಹಾವಳಿ ನಡುವೆಯೂ ಚಿತ್ರಕ್ಕೆ ಯಾವುದೇ ಹಾನಿಯಾಗಿಲ್ಲ ಎನ್ನಲಾಗಿದ್ದು, ಲಿಂಕ್ ಗಳನ್ನು ತೆಗೆದು ಹಾಕಲಾಗಿದೆ. ಅಲ್ಲದೆ ಪೈರೆಸಿ ಹಾವಳಿ ಉತ್ತಮ ಚಿತ್ರಕ್ಕೆ ಯಾವುದೇ ತೊಡಕು ಮಾಡುವುದಿಲ್ಲ ಎಂಬ ಹೆಮ್ಮೆ ನಿರ್ಮಾಪಕರದ್ದಾಗಿದೆ.
ರಾಬರ್ಟ್ ಚಿತ್ರಕ್ಕೆ ಉತ್ತಮ ಸ್ಪಂದನೆ ದೊರಕಿದ ಬೆನ್ನಲ್ಲೆ ನಟ ದರ್ಶನ್ ಆನ್ಲೈನ್ ಸುದ್ದಿ ಮಾದ್ಯಮಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.
ಈ ಕುರಿತು ಫೇಸ್ಬುಕ್ ಪೋಸ್ಟ್ ಹಾಕಿರುವ ಅವರು, ಆನ್ಲೈನ್ ಮೀಡಿಯಾ ಮಿತ್ರರು ಮತ್ತು ನಮ್ಮ ಸೆಲೆಬ್ರಿಟಿಗಳು ನಮ್ಮ ಚಿತ್ರಕ್ಕೆ ನೀಡಿರುವ ಪ್ರೋತ್ಸಾಹ ಹಾಗೂ ಬೆಂಬಲಕ್ಕೆ ಹೃದಯಪೂರ್ವಕ ಧನ್ಯವಾದಗಳು. ಒಳ್ಳೆ ಕನ್ನಡ ಚಿತ್ರಗಳಿಗೆ ಸದಾ ಬೆನ್ನೆಲುಬಾಗಿರಿ ಎಂದಿದ್ದಾರೆ.
ಅಲ್ಲದೆ ಮಧ್ಯರಾತ್ರಿಯಿಂದ ಟಿಕೆಟ್ಸ್ ಗಾಗಿ ಕಾದು ನಿಂತು ನಮ್ಮನ್ನು ಹೃದಯತುಂಬಿ ಆಶೀರ್ವದಿಸಿದ ಸೆಲೆಬ್ರಿಟಿ ಸಮೂಹಕ್ಕೆ ನಿಮ್ಮ ಈ ದಾಸನ ಕೃತಘ್ನತೆಗಳು ಎಂದು ಬರೆದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ದಿನ ಪತ್ರಿಕೆಗಳು, ಪ್ರಸಾರ ವಾಹಿನಿಗಳಿಗಿಂತ ಹೆಚ್ಚಾಗಿ ಜನಮನ್ನಣೆ ಪಡೆಯುತ್ತಿರುವ ಆನ್ಲೈನ್ ಮಾಧ್ಯಮಗಳ ಕಾರ್ಯವನ್ನು ಗುರುತಿಸಿ ಧನ್ಯವಾದ ಅರ್ಪಿಸಿದ ಏಕೈಕ ನಟ ದರ್ಶನ್ ಎಂದು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

