
ದೊಡ್ಡಬಳ್ಳಾಪುರ: ನಗರದ ದೇವಾಂಗ ಮಂಡಲಿ ಚುನಾವಣೆಗೆ ಮಾರ್ಚ್ 28ರಂದು ಚುನಾವಣೆ ನಿಗದಿಯಾಗದಿದ್ದು, ಚುನಾವಣೆಗೆ ಸ್ಪರ್ಧಿಸಲು ಆಕಾಂಕ್ಷಿಗಳು ಸಿದ್ದತೆ ನಡೆಸಿದ್ದಾರೆ.

ಚುನಾವಣೆಯಲ್ಲಿ ಕೆ.ಪಿ.ಜಗನ್ನಾಥ್ ಮತ್ತು ಎಂ.ಜಿ.ಅಮರನಾಥ್ ನೇತೃತ್ವದ ತಂಡ ಹಾಗೂ ಎಂ.ಜಿ.ಶ್ರೀನಿವಾಸ್ ನೇತೃತ್ವದ ಎರಡು ತಂಡದ ಅಭ್ಯರ್ಥಿಗಳು ರಾಮಲಿಂಗ ಚೌಡೇಶ್ವರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಪ್ರಚಾರ ಆರಂಭಿಸಿದ್ದಾರೆ.
ಮಾ.21ರಂದು ಸರ್ವ ಸದಸ್ಯರ ಸಭೆ: ದೇವಾಂಗ ಮಂಡಲಿಯ ಸರ್ವ ಸದಸ್ಯರ ಸಭೆ ಮಾ.21ರಂದು ಬೆಳಿಗ್ಗೆ 9.30ಕ್ಕೆ ನಗರದ ದೇವಾಂಗ ಮಂಡಲಿ ಕಲ್ಯಾಣ ಮಂದಿರದಲ್ಲಿ ಮಂಡಲಿಯ ಪ್ರಭಾರಿ ಅಧ್ಯಕ್ಷ ಕೆ.ಜಿ.ದಿನೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಮಂಡಲಿಯ ತಿಳಿಸಿವೆ.
ಮಾ.28ರಂದು ಒಟ್ಟು 20 ಸ್ಥಾನಗಳಿಗೆ ಚುನಾವಣೆ: ಅಧ್ಯಕ್ಷರು-1 ಸ್ಥಾನ,ಉಪಾಧ್ಯಕ್ಷರು-2 ಸ್ಥಾನಗಳು, ಗೌರವ ಕಾರ್ಯದರ್ಶಿ-1 ಸ್ಥಾನ, ಸಹ ಕಾರ್ಯದರ್ಶಿ-1 ಸ್ಥಾನ, ಖಜಾಂಚಿ-1 ಸ್ಥಾನ, ನಿರ್ದೇಶಕರು-14 ಸ್ಥಾನಗಳು.
ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ಮಾ.19, ನಾಮಪತ್ರಗಳ ಪರಿಶೀಲನೆ ಮಾ.20, ನಾಮಪತ್ರಗಳನ್ನು ವಾಪಸು ಪಡೆಯಲು ಕೊನೆಯ ದಿನಾಂಕ: ಮಾ.21, ಚುನಾವಣಾ ದಿನಾಂಕ: ಮಾ.28 ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ.
ಸ್ಥಳ: ಅರಳು ಮಲ್ಲಿಗೆ ಬಾಗಿಲು ಪ್ರೌಢಶಾಲಾ ಆವರಣ, ತೇರಿನ ಬೀದಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಮತಗಳ ಎಣಿಕೆ: ಮಾ.28ರಂದು ಸಂಜೆ 4.30ರಿಂದ ಎಣಿಕೆ ಮುಕ್ತಾಯವಾಗುವವರೆಗೆ ನಡಯಲಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

