
ದೊಡ್ಡಬಳ್ಳಾಪುರ: ಭಾರತೀಯ ಸೇನೆಯಲ್ಲಿ 26ವರ್ಷ ಸೇವೆ ಸಲ್ಲಿಸಿ, ನಿವೃತ್ತತರಾದ ತಾಲೂಕಿನ ಓಜೇನಹಳ್ಳಿ ಗ್ರಾಮದ ಶ್ರೀನಿವಾಸ್ ಮೂರ್ತಿ ಅವರಿಗೆ ಸ್ನೇಹಿತರು ಮತ್ತು ಸ್ವಗ್ರಾಮಸ್ಥರು ಹಾಗೂ ಅಕ್ಕ ಪಕ್ಕದ ಗ್ರಾಮಸ್ಥರಿಂದ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.

ತಾಲೂಕಿನ ಓಜೇನಹಳ್ಳಿ ಗ್ರಾಮದ ಶ್ರೀನಿವಾಸ ಮೂರ್ತಿ ಭಾರತೀಯ ಸೇನೆಯಲ್ಲಿ ವೀರ ಯೋಧನಾಗಿ ದೇಶದ ವಿವಿಧ ಗಡಿ ಭಾಗಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಸೈನಿಕ ಶ್ರೀನಿವಾಸ ಮೂರ್ತಿ ಅವರ ನಿವೃತ್ತಿ ವಿಷಯ ತಿಳಿದ ಅವರ ಶಾಲಾ ಗೆಳೆಯರು ಹಾಗೂ ಗ್ರಾಮಸ್ಥರು ಭಾನುವಾರ ಸಂಜೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಿದ್ದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಯೋಧ ಶ್ರೀನಿವಾಸ್ ಮೂರ್ತಿ,ಜೀವ ಭಯವನ್ನು ಲೆಕ್ಕಿಸದೆ ಚಳಿ ಗಾಳಿ ಮಳೆ ಎನ್ನದೇ ಹಲವಾರು ನನ್ನ ಗೆಳೆಯರು ದೇಶದ ಗಡಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಅವರಿಗೆಲ್ಲ ಶುಭವಾಗಲಿ ಇಷ್ಟು ವರ್ಷ ಗಡಿಕಾಯುವ ಕಾರ್ಯ ಮಾಡಲು ನನ್ನ ಎಲ್ಲಾ ಸ್ನೇಹಿತರು ಹಾಗೂ ಕುಟುಂಬ ವರ್ಗದ ಪ್ರೋತ್ಸಾಹ ಮತ್ತು ದೈರ್ಯವೇ ಕಾರಣ ಎಂದರು.
ಈ ವೇಳೆ ಮುಖಂಡರಾದ ಪ್ರಕಾಶ್ ರೆಡ್ಡಿ, ಶ್ರೀರಾಮ್ ರೆಡ್ಡಿ, ಶಿಕ್ಷಕರಾದ ಸಿದ್ದಗಂಗಯ್ಯ, ಸುರೇಶ್, ನ್ಯಾಯವಾದಿ ಚಂದ್ರಶೇಖರ್ ರೆಡ್ಡಿ, ಮಂಜುನಾಥ್ ರೆಡ್ಡಿ, ಹಾಗೂ ಸೈನಿಕನ ಶಾಲಾ ಗೆಳೆಯರು, ಕುಟುಂಬ ಸದಸ್ಯರು, ಊರಿನ ಗ್ರಾಮಸ್ಥರು ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…

