
ದೊಡ್ಡಬಳ್ಳಾಪುರ: ನಗರದ ದರ್ಜಿಪೇಟೆಯಲ್ಲಿರುವ ಶ್ರೀ ಪಾಂಡುರಂಗ ಸ್ವಾಮಿ ದೇವಾಲಯದಲ್ಲಿ ಮಂಗಳವಾರ ಶ್ರೀ ಸಂತ ನಿಳೋಬ ಮಹಾರಾಜರ 87ನೇ ವರ್ಷದ ದಿಂಡಿ ಸಪ್ತಾಹ ಭಕ್ತಿ- ಭಾವದಿಂದ ನಡೆಯಿತು.

ಸಪ್ತಾಹದ ಅಂಗವಾಗಿ ಶ್ರೀ ರುಕ್ಮೀಣಿ ಸತ್ಯಭಾಮ ಸಮೇತ ಶ್ರೀ ಪಾಂಡುರಂಗ ಸ್ವಾಮಿಯವರಿಗೆ ಬೆಳಗ್ಗೆ ಕಾಕಡಾರತಿ ಮತ್ತು ಅಭಿಷೇಕ ನಡೆಯಿತು. ಮಧ್ಯಾಹ್ನ ಬೆಂಗಳೂರು, ದಾವಣಗೆರೆ, ಭದ್ರಾವತಿ, ಬಂಕಾಪುರ, ಯಲಹಂಕ, ಚಿಕ್ಕಬಳ್ಳಾಪುರ, ಬಂಗಾರಪೇಟೆ, ಜರಗನಹಳ್ಳಿ ಸೇರಿದಂತೆ ವಿವಿಧ ಭಜನಾ ಮಂಡಳಿ ವತಿಯಿಂದ ಸಾಂಪ್ರದಾಯಿಕ ಪಂಡರಿ ಭಜನೆ ಮತ್ತು ಮಹಾಮಂಗಳಾರತಿ ನಡೆಯಿತು. ಇದೇ ವೇಳೆ ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಯಿತು.
ಸಂಜೆ ಹರಿಕಥೆ ಭಜನೆ ಪಾರಾಯಣ ಗುಬ್ಬಿ ತುಕಾರಾಂ ಅವರಿಂದ ಕೀರ್ತನೆ ಕಾರ್ಯಕ್ರಮ ನಡೆಯಿತು. ರಾತ್ರಿ ಪಂಢರಿ ಭಜನೆಯೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಶ್ರೀ ರುಕ್ಮೀಣಿ ಸತ್ಯಭಾಮ ಸಮೇತ ಶ್ರೀ ಪಾಂಡುರಂಗ ಸ್ವಾಮಿಯವರ ಉತ್ಸುವ ಮೂರ್ತಿಯ ಮೆರವಣಿಗೆ ವೈಭವದಿಂದ ಜರುಗಿತು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..

