
ದೊಡ್ಡಬಳ್ಳಾಪುರ: ನಗರ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಎಸ್.ಸೋಮಶೇಖರ್ ಅವರನ್ನು ವರ್ಗಾವಣೆ ಮಾಡಿ ಕೇಂದ್ರವಲಯ ಪೊಲೀಸ್ ಮಹಾ ನಿರೀಕ್ಷರಾದ ಎಂ.ಚಂದ್ರಶೇಖರ್ ಆದೇಶಿಸಿದ್ದಾರೆ.

ವರ್ಗಾವಣೆಗೊಂಡ ಸೋಮಶೇಖರ್ ಅವರ ಸ್ಥಾನಕ್ಕೆ, ಈ ಮುಂಚೆ ಇದೇ ಠಾಣೆಯಲ್ಲಿ ಕಾರ್ಯನಿರ್ವಹಿಸಿ, ಕಗ್ಗಲೀಪುರಕ್ಕೆ ವರ್ಗಾವಣೆಯಾಗಿದ್ದ ಕೆ.ವೆಂಕಟೇಶ್ ಅವರನ್ನು ವರ್ಗಾಯಿಸಲಾಗಿದೆ.
ಕೋವಿಡ್-19 ಲಾಕ್ಡೌನ್ ಸಂಧರ್ಭದಲ್ಲಿ ನಗರದಲ್ಲಿ ಸೋಂಕು ಹರಡದಂತೆ ಸೋಮಶೇಖರ್ ಅವರ ಕಾರ್ಯ ಜನಪರ ಮೆಚ್ಚಿಗೆಗೆ ಕಾರಣವಾಗಿತ್ತು. ಅಲ್ಲದೆ ಯಾವುದೇ ಒತ್ತಡಕ್ಕೆ ಸೊಪ್ಪು ಹಾಕದ ಅವರ ಕರ್ತವ್ಯ ನಿಷ್ಠೆ, ನಗರದ ಕೆಲ ಪ್ರಭಾವಿಗಳ ಕೆಂಗಣ್ಣಿಗೂ ಗುರಿಯಾಗಿತ್ತು.
ಪ್ರಸ್ತುತ ಸೋಮಶೇಖರ್ ಅವರನ್ನು ಐಜಿಪಿ ಕೇಂದ್ರ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ. ಇನ್ನು ಈ ಮುಂಚೆ ಕಾರ್ಯನಿರ್ವಹಿಸಿ ವರ್ಗಾವಣೆಯಾಗಿದ್ದ ವೆಂಕಟೇಶ್ ಅವರು, ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್ ಅವರ ಹೊಸ ಪ್ರಯತ್ನವಾದ ಡಿ.ಎಲ್ ಮೇಳ, ಎಲ್ಮೆಟ್ ಮೇಳವನ್ನು ದೊಡ್ಡಬಳ್ಳಾಪುರದಲ್ಲಿ ಆಯೋಜಿಸಿ, ಜನ ಮನ್ನಣೆಗಳಿಸಿದ್ದರು. ಅವರು ಮತ್ತೆ ದೊಡ್ಡಬಳ್ಳಾಪುರಕ್ಕೆ ಬರುತ್ತಿರುವ ಹಿನ್ನೆಲೆ ಅವರ ಅಭಿಮಾನಿಗಳು ಸಮಾಜಿಕ ಜಾಲತಾಣದಲ್ಲಿ ಸ್ವಾಗತ ಕೋರಿ ಸಂದೇಶ ಪೋಸ್ಟ್ ಮಾಡುತ್ತಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…

