
ದೊಡ್ಡಬಳ್ಳಾಪುರ: ಜಿಲ್ಲಾ ಪಂಚಾಯಿತಿ ಪಶುಸಂಗೋಪನಾ ಇಲಾಖೆ ಅನುದಾನದಡಿ ರಾಜಘಟ್ಟ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ 20 ಜನ ಅರ್ಹ ಫಲಾನುಭವಿಗಳಿ 2020-21ನೇ ಸಾಲಿನ ಅನುದಾನದಲ್ಲಿ ತಲಾ 8 ನಾಟಿ ಕೋಳಿ ಮರಿಗಳನ್ನು ನಗರದ ಜೆಡಿಎಸ್ ಜಿಲ್ಲಾ ಕಾರ್ಯಾಲಯದಲ್ಲಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಸದಸ್ಯೆ ಪದ್ಮಾವತಿ ಬಿ.ಮುನೇಗೌಡ, ಲಾಕ್ಡೌನ್ ನಂತರ ಸಾಕಷ್ಟು ಜನ ಕೋಳಿ, ಕುರಿ ಸಾಕಾಣಿಕೆ ಕಡೆಗೆ ಆಸಕ್ತಿ ವಹಿಸುತ್ತಿದ್ದಾರೆ. ಅದರಲ್ಲೂ ನಾಟಿ ಕೋಳಿಗಳಿಗೆ ಮಾರುಕಟ್ಟೆಯಲ್ಲಿ ಸದಾ ಬೆಲೆ ಇದ್ದೇ ಇರುತ್ತದೆ. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ ಆರ್ಥಿಕವಾಗಿ ಹಿಂದುಳಿದವರು ತಮ್ಮ ಮನೆಗಳ ಸಮೀಪವೇ ಕೋಳಿ ಸಾಕಾಣಿಕೆ ಮಾಡಿಕೊಳ್ಳುವ ಮೂಲಕ ಒಂದಿಷ್ಟು ಹಣ ಸಂಪಾದಿಸಲು ಅವಕಾಶ ಇವೆ. ಮಹಿಳೆಯರು ಬಿಡುವಿನ ವೇಳೆಯಲ್ಲಿ ಕೋಳಿ ಸಾಕಾಣಿಕೆ ಕಡೆಗೆ ಗಮನ ನೀಡಲು ಸಹಕಾರಿಯಾಗಲಿದೆ. ಇದರಿಂದ ತಮ್ಮ ಕುಟುಂಬ ನಿರ್ವಹಣೆಗೆ ಸಾಕಾಗುಷ್ಟು ಹಣ ಸಂಪಾದನೆ ಮಾಡಲು ಅವಕಾಶಗಳಿವೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಶು ವೈದ್ಯಾಧಿಕಾರಿ ಆಂಜಿನಪ್ಪ,ರಾಜಘಟ್ಟ ಗ್ರಾಮ ಪಂಚಾಯಿತಿ ಸದಸ್ಯ ಶಿವಕುಮಾರ್,ಮುಖಂಡರಾದ ಅಂಜನ್ ಬಿ.ಮುನೇಗೌಡ, ಸುಜಾತ ಶ್ರೀನಿವಾಸ್, ಕೆಂಪೇಗೌಡ, ವಡ್ಡರಹಳ್ಳಿ ಸುರೇಶ್, ರಾಜಘಟ್ಟಆನಂದ್ ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..

