
ದೊಡ್ಡಬಳ್ಳಾಪುರ: ಮಾ.28 ರಂದು ನಡೆಯಲಿರುವ ನಗರದಲ್ಲಿನ ದೇವಾಂಗ ಮಂಡಳಿ ಚುನಾವಣೆಯಲ್ಲಿ ಖಜಾಂಚಿ ಸ್ಥಾನಕ್ಕೆ ಕೆ.ಪಿ.ಜಗನ್ನಾಥ್, ಪ್ರೊ.ಎಂ.ಜಿ.ಅಮರನಾಥ ತಂಡದಿಂದ ಹುಲ್ಲುಮನೆ ಹೆಚ್.ಎ.ವಿಧ್ಯಾಧರ್ ಪುತ್ರ ಅಖಿಲೇಶ್ ಹೆಚ್.ವಿ ನಾಮಪತ್ರ ಸಲ್ಲಿಸಿದ್ದಾರೆ.

ಗುರುವಾರ ತಂಡದ ಸದಸ್ಯರೊಂದಿಗೆ ನಾಮಪತ್ರ ಸಲ್ಲಿಸಿದ ಅವರು, ಚುನಾವಣೆಯಲ್ಲಿ ಕೆ.ಪಿ.ಜಗನ್ನಾಥ್, ಪ್ರೊ.ಎಂ.ಜಿ.ಅಮರನಾಥ ನೇತೃತ್ವದ ತಂಡ ಗೆಲ್ಲಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.
ಅಧ್ಯಕ್ಷರು-1 ಸ್ಥಾನ, ಉಪಾಧ್ಯಕ್ಷ-2 ಸ್ಥಾನಗಳು, ಗೌರವ ಕಾರ್ಯದರ್ಶಿ-1 ಸ್ಥಾನ, ಸಹ ಕಾರ್ಯದರ್ಶಿ-1 ಸ್ಥಾನ, ಖಜಾಂಚಿ-1 ಸ್ಥಾನ ಹಾಗೂ 14 ಜನ ನಿರ್ದೇಶಕ ಸ್ಥಾನಗಳು ಸೇರಿದಂತೆ ಒಟ್ಟು 20 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಮಾ.28 ರಂದು ಚುನಾವಣೆ ಬೆಳಿಗ್ಗೆ 9 ರಿಂದ ಸಂಜೆ 4 ರವರೆಗೆ ನಗರದ ತೇರಿನ ಬೀದಿಯಲ್ಲಿನ ಅರಳುಮಲ್ಲಿಗೆ ಬಾಗಿಲು ಪ್ರೌಢ ಶಾಲಾ ಆವರಣದಲ್ಲಿ ನಡೆಯಲಿದೆ. ಸಂಜೆ 4 ರಿಂದ ಮತಗಳ ಎಣಿಕೆ ನಡೆಯಲಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..

